- ಅನಿತಾ ಈ,
'ಕುರುಕ್ಷೇತ್ರ' ಎಂದ ಕೂಡಲೇ ಜನರು ಕೇಳುವ ಮೊದಲ ಪ್ರಶ್ನೆ ಈ ಚಿತ್ರ ಯಾವಾಗ ತೆರೆ ಕಾಣಲಿದೆ ಎಂದು. ಆದರೆ ಇನ್ನೂ ಈ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಆದರೆ ಒಂದು ಖುಷಿಯ ಸಂಗತಿ ಎಂದರೆ 'ಕುರುಕ್ಷೇತ್ರ' ಚಿತ್ರತಂಡ ನಾಲ್ಕು ಭಾಷೆಗಳಲ್ಲಿ ಪೋಸ್ಟರ್ ಬಿಡುಗಡೆ ಮಾಡಿದೆ.
ಇದನ್ನೂ ಓದಿ: KGF Chapter2: 'ಕೆ.ಜಿ.ಎಫ್ ಚಾಪ್ಟರ್ 2' ಚಿತ್ರದಲ್ಲಿ ನೀವೂ ಅಭಿನಯಿಸಬಹುದು: ಇಲ್ಲಿದೆ ಸುವರ್ಣಾವಕಾಶ..!
ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದ್ದ 'ಕುರುಕ್ಷೇತ್ರ' ಸಿನಿಮಾದ ಪೋಸ್ಟರ್ ಮಾತ್ರ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳದಲ್ಲಿ ಬಿಡುಗಡೆಯಾಗಿದೆ. ಉಳಿದಂತೆ ಹಿಂದಿ ಭಾಷೆಯಲ್ಲೂ ಈ ಚಿತ್ರ ತೆರೆಕಾಣಲಿದ್ದು, ಅದರ ಪೋಸ್ಟರ್ ಸದ್ಯದಲ್ಲೇ ಬಿಡುಗಡೆಯಾಗಲಿದೆಯಂತೆ.
ಸದ್ಯ ಕುರುಕ್ಷೇತ್ರ ಚಿತ್ರದ ಪೋಸ್ಟರ್ಗಳು ನಟ ದರ್ಶನ್ ಅವರ ಅಭಿಮಾನಿಗಳ ಪುಟದಲ್ಲಿ ಹರಿದಾಡುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡದಿಂದ ಮಾತ್ರ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.
Here are the title posters of #Kurukshetra in 4 south indian languages🔥😍
Coming soon......@dasadarshan @MunirathnaMLA
Follow 👉 @FansKbdf pic.twitter.com/y8hwAawPJ9
— KBDF - DBoss Fans (@FansKbdf) April 21, 2019
trailer releasing soon. #Kurukshetra
4 languages. @dasadarshan pic.twitter.com/86mhu1clns
— Babu (@BabuDarshanFan) April 21, 2019
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ