Darshan: ಸ್ನೇಹಿತರೊಂದಿಗೆ ಬೈಕ್ ಟ್ರಿಪ್​ ಹೊರಟ ಡಿಬಾಸ್ ದರ್ಶನ್​: ಇಲ್ಲಿದೆ ವಿಡಿಯೋ​..!

D Boss Darshan: ಲಾಕ್​ಡೌನ್​ ಸಡಿಲಗೊಂಡ ನಂತರ ಸಿನಿಮಾ ಚಿತ್ರೀಕರಣ ಮುಗಿಸಿರುವ ಅಭಿಮಾನಿಗಳ ದಾಸ ದರ್ಶನ್​ ಈಗ ಬೈಕ್​ ಟ್ರಿಪ್​ನಲ್ಲಿದ್ದಾರೆ. ತಮ್ಮ ಸ್ನೇಹಿತರೊಂದಿಗೆ ದರ್ಶನ್​ ಬೈಕ್​ ರೈಡ್​ ಹೊರಟಿದ್ದಾರೆ.

ಬೈಕ್​ ಟ್ರಿಪ್​ಗೆ ಹೊರಟ ದರ್ಶನ್​

ಬೈಕ್​ ಟ್ರಿಪ್​ಗೆ ಹೊರಟ ದರ್ಶನ್​

  • Share this:
ಕೊರೋನಾ ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಎಲ್ಲ ಸೆಲೆಬ್ರಿಟಿಗಳು ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಕೆಲವರು ತಮ್ಮ ಸಿನಿಮಾಗಳ ಶೂಟಿಂಗ್​ ಮುಗಿಸಿಕೊಂಡು  ಕೊಂಚ ರಿಲ್ಯಾಕ್ಸ್​ ಆಗಲು ಪ್ರವಾಸಕ್ಕೆ ಹೋಗುತ್ತಿದ್ದಾರೆ. ಬಾಲಿವುಡ್​ ಹಾಗೂ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು  ತಮ್ಮಿಷ್ಟದ ಟೂರಿಸ್ಟ್​ ಸ್ಪಾಟ್​ಗಳಿಗೆ ಹೋಗಿ ಎಂಜಾಯ್​ ಮಾಡುತ್ತಿದ್ದಾರೆ. ಇದಕ್ಕೆ ದರ್ಶನ್​ ಸಹ ಹೊರತಾಗಿಲ್ಲ. ರಾಬರ್ಟ್​  ಹಾಗೂ  ರಾಜ ವೀರ ಮದಕರಿ ನಾಯಕ ಸಿನಿಮಾದ  ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಡಿಬಾಸ್​ ಈಗ ರಿಲ್ಯಾಕ್ಸ್​ ಆಗಲು ಬೈಕ್​ ಟ್ರಿಪ್ ಹೊರಟಿದ್ದಾರೆ. ಹೌದು, ಲಾಕ್​ಡೌನ್​ನಲ್ಲಿ ತಮ್ಮ ತೋಟದಲ್ಲಿ ಪ್ರಾಣಿ-ಪಕ್ಷಿಗಳೊಂದಿಗೆ  ಹೆಚ್ಚಿನ ಸಮಯದ ಕಳೆಯುತ್ತಿದ್ದ ದರ್ಶನ್​, ಈಗ  ಪ್ರವಾಸದ ಮೂಡ್​ನಲ್ಲಿದ್ದಾರೆ. ತೋಟದಲ್ಲಿ ಕುದುರೆ, ಹಸುಗಳ ಆರೈಕೆ ಮಾಡುತ್ತಿದ್ದ ದರ್ಶನ್​ ಅವರ ವಿಡಿಯೋಗಳು ಈ ಹಿಂದೆ ವೈರಲ್​ ಆಗಿದ್ದವು. ಅಲ್ಲದೆ ತಮ್ಮ ತೋಟಕ್ಕೆ ಎರಡು ಹೊಸ ಕುದುರೆಗಳನ್ನೂ ಖರೀದಿಸಿದ್ದರು ದರ್ಶನ್​. 

ಲಾಕ್​ಡೌನ್​ ಸಡಿಲಗೊಂಡ ನಂತರ ಸಿನಿಮಾ ಚಿತ್ರೀಕರಣ ಮುಗಿಸಿರುವ ಅಭಿಮಾನಿಗಳ ದಾಸ ದರ್ಶನ್​ ಈಗ ಬೈಕ್​ ಟ್ರಿಪ್​ನಲ್ಲಿದ್ದಾರೆ. ತಮ್ಮ ಸ್ನೇಹಿತರೊಂದಿಗೆ ದರ್ಶನ್​ ಬೈಕ್​ ರೈಡ್​ ಹೊರಟಿದ್ದಾರೆ.

ಇಂದು ಬೆಳಿಗ್ಗೆ ಸುಮಾರು 10 ಗಂಟೆಗೆ ತಮ್ಮ ಮನೆಯಿಂದ ಸ್ನೇಹಿತರೊಂದಿಗೆ ಬೈಕ್​ ಟ್ರಿಪ್​ಗೆ ಹೋಗಿದ್ದಾರಂತೆ. ಅವರ ಬೈಕ್​ ರೈಡ್​ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.


ದರ್ಶನ್​ ಅವರೊಂದಿಗೆ ಅವರ ಸ್ನೇಹಿತರಾದ ಪ್ರಜ್ವಲ್​ ದೇವರಾಜ್​, ನಿರಂಜನ್​, ಪ್ರದೇಶ್​, ರಾಬರ್ಟ್​ ಸಿನಿಮಾದ ನಿರ್ಮಾಪಕ ಉಮಾಪತಿ ಸೇರಿದಂಥೆ ಇತರರು ಇದ್ದಾರೆ. ಈ ಬೈಕ್​ ಪ್ರವಾಸ 2-3 ದಿನಗಳದ್ದಾಗಿದ್ದು, ರಾಜ್ಯದಲ್ಲೇ ದರ್ಶನ್​ ಸುತ್ತಾಡಲಿದ್ದಾರೆ ಎಂದು ನಟನ ಆಪ್ತ ಮೂಲಗಳಿಂದ ತಿಳಿದು ಬಂದಿದೆ.
ದರ್ಶನ್​ ಅವರು ಆಗಾಗ ಬೈಕ್​ ಟ್ರಿಪ್​ಗೆ ಹೋಗುತ್ತಿರುತ್ತಾರೆ. ಈ ಹಿಂದೆ ಸಹ ಮೈಸೂರಿನಲ್ಲಿರುವ ಅವರ ಸ್ನೇಹಿತರೊಂದಿಗೆ ಬೈಕ್​ ರೈಡ್​ಗೆ ಹೋಗಿದ್ದರು. ಈಗಲೂ ಸಹ ತಮ್ಮ ಬಳಿ ಇರುವ ನೀಲಿ ಬಣ್ಣದ ಹಾರ್ಲಿ ಡೇವಿಡ್​ಸನ್​ ಬೈಕ್​ನಲ್ಲಿ ಪ್ರವಾಸ ಪ್ಲಾನ್​ ಮಾಡಿದ್ದಾರೆ. ಈ ವಿಡಿಯೋದಲ್ಲಿ ಮೊದಲಿಗೆ ಇರುವುದು ದರ್ಶನ್​ ಅವರು.

ದರ್ಶನ್​ ಅವರಿಗೆ ದುಬಾರಿ ಬೆಲೆಯ ಕಾರುಗಳು ಹಾಗೂ ಬೈಕ್​ ಬಗ್ಗೆ ಇರುವ ಕ್ರೇಜ್​ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಬೇಸರವಾದಾಗಲೆಲ್ಲ ದರ್ಶನ್ ತಮ್ಮ ಕಾರು ಅಥವಾ ಬೈಕ್​ ಏರಿ ರಸ್ತೆಗಿಳಿಯುತ್ತಾರೆ. ಈ ಹಿಂದೆಯೂ ಅವರ ಸಾಕಷ್ಟು ವಿಡಿಯೋಗಳು ವೈರಲ್​ ಆಗಿವೆ. ಅಷ್ಟೇ ಅಲ್ಲ ಪರಿಸರ ಹಾಗೂ ವನ್ಯಜೀವಗಳನ್ನು ಇಷ್ಟಪಡುವ ದರ್ಶನ್​ ವನ್ಯಜೀವಿಗಳ ಫೋಟೋ ತೆಗೆಯಲು ಕಾಡಿಗೂ ಹೋಗುತ್ತಿರುತ್ತಾರೆ.
Published by:Anitha E
First published: