HOME » NEWS » Entertainment » DBOSS DARSHAN WAS PLAYED WITH RISHAB SHETTYS SON RANVIT SHETTY AE

DBoss Darshan: ರಣ್​ವಿತ್ ಶೆಟ್ಟಿಯನ್ನು ಎತ್ತಿ ಮುದ್ದಾಡಿದ ಡಿಬಾಸ್​ ದರ್ಶನ್​

DBoss Darshan: ಪುಟ್ಟ ಡಿಟೆಕ್ಟೀವ್​ಗೆ ರಣ್​ವಿತ್​ ಎಂದು ನಾಮಕರಣ ಮಾಡಲಾಗಿದ್ದು, ಅವರ ಹೆಸರಿನ ಟೀಸರ್​ ಯಾವ ಸಿನಿಮಾ ಟೀಸರ್​ಗೇನೂ ಕಡಿಮೆ ಇರಲಿಲ್ಲ. ನಾಮಕರಣವಾದ ನಂತರ ಇದೇ ಮೊದಲ ಬಾರಿಗೆ ಪುಟ್ಟ ಡಿಟೆಕ್ಟೀವ್​ ಹಾಗೂ ಡಿಬಾಸ್​ ಮುಖಾಮುಖಿಯಾಗಿದ್ದಾರೆ.

Anitha E | news18-kannada
Updated:December 4, 2019, 11:24 AM IST
DBoss Darshan: ರಣ್​ವಿತ್ ಶೆಟ್ಟಿಯನ್ನು ಎತ್ತಿ ಮುದ್ದಾಡಿದ ಡಿಬಾಸ್​ ದರ್ಶನ್​
ರಿಷಭ್​ ಶೆಟ್ಟಿ ಕುಟುಂಬದ ಜತೆ ಡಿಬಾಸ್ ದರ್ಶನ್​
  • Share this:
ನಟ ಹಾಗೂ ನಿರ್ದೇಶಕ ರಿಷಭ್​ ಶೆಟ್ಟಿ ಸದ್ಯ ತಮ್ಮ ಕಥಾಸಂಗಮ ಸಿನಿಮಾದ ಕೆಸಲಗಳಲ್ಲಿ ವ್ಯಸ್ತವಾಗಿದ್ದಾರೆ. ಇದರ ನಡುವೆಯೇ ಮಗನ ಹೆಸರನ್ನು ರಿವೀಲ್​ ಮಾಡಲು ಇತ್ತೀಚೆಗಷ್ಟೆ ಪುಟ್ಟ ಟೀಸರ್​ವೊಂದನ್ನು ಮಾಡುವ ಮೂಲಕ ಅಭಿಮಾನಿಗಳನ್ನು ಬೆರಗುಗೊಳಿಸಿದ್ದರು.

ಪುಟ್ಟ ಡಿಟೆಕ್ಟೀವ್​ಗೆ ರಣ್​ವಿತ್​ ಎಂದು ನಾಮಕರಣ ಮಾಡಲಾಗಿದ್ದು, ಅವರ ಹೆಸರಿನ ಟೀಸರ್​ ಯಾವ ಸಿನಿಮಾ ಟೀಸರ್​ಗೇನೂ ಕಡಿಮೆ ಇರಲಿಲ್ಲ. ನಾಮಕರಣವಾದ ನಂತರ ಇದೇ ಮೊದಲ ಬಾರಿಗೆ ಪುಟ್ಟ ಡಿಟೆಕ್ಟೀವ್​ ಹಾಗೂ ಡಿಬಾಸ್​ ಮುಖಾಮುಖಿಯಾಗಿದ್ದಾರೆ.ಹೌದು, ಇತ್ತೀಚೆಗಷ್ಟೆ ಫನ್​ವರ್ಲ್ಡ್​ನಲ್ಲಿ ನಡೆದ ರಾಕಿಂಗ್​ ದಂಪತಿಯ ಪುಟ್ಟ ಸಿಂಡ್ರೆಲಾಳ ಮೊದಲ ಹುಟ್ಟುಹಬ್ಬದ ಪಾರ್ಟಿಯಲ್ಲಿ ದರ್ಶನ್​ ಹಾಗೂ ರಣ್​ವಿತ್​ ಭೇಟಿಯಾಗಿತ್ತು. ಪತ್ನಿ ಹಾಗೂ ಮಗನೊಂದಿಗೆ ರಿಷಭ್​ ಶೆಟ್ಟಿ ಸಹ ಪಾರ್ಟಿಗೆ ಬಂದಿದ್ದರು. ಅಲ್ಲೇ ಇದ್ದ ದರ್ಶನ್​ ಅಂದು ರಣ್​ವಿತ್​ನನ್ನು ಎತ್ತಿಕೊಂಡು ಮುದ್ದಾಡಿದ್ದಾರೆ.

Dboss Darshan was played with Rishab Shetty's son Ranvit Shetty
ರಿಷಭ್​ ಶೆಟ್ಟಿ ಕುಟುಂಬದ ಜತೆ ಡಿಬಾಸ್ ದರ್ಶನ್​


ಈ ಅಪರೂಪದ ಮಿಲನದ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಇದರ ಜತೆಗೆ ಯಶ್​ ಮುದ್ದು ಮಗಳ ಹುಟ್ಟುಹಬ್ಬದಲ್ಲಿ ಸ್ಯಾಂಡಲ್​ವುಡ್​ ತಾರೆಗಳ ಸಂಗಮವೇ ಆಗಿತ್ತು. ಅಲ್ಲಿ ಸಿಕ್ಕ ತಾರೆಗಳ ಕೆಲವು ಅಪರೂಪದ ಚಿತ್ರಗಳು ಈಗ ವೈರಲ್​ ಆಗುತ್ತಿವೆ.

Bigg Boss: ಬಾತ್​ಟಬ್​ನಲ್ಲಿರುವ ಬೋಲ್ಡ್​ ಫೋಟೋಗಳನ್ನು ಹಂಚಿಕೊಂಡ ಬಿಗ್​ ಬಾಸ್​ ಖ್ಯಾತಿಯ ಈ ನಟಿ..!

 
First published: December 4, 2019, 11:10 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories