ಬಿಡುಗಡೆಗೂ ಮುನ್ನವೇ ರಾಬರ್ಟ್ ಹೊಸ ಇತಿಹಾಸ; ಬಾಕ್ಸ್​ ಆಫೀಸ್​ ದಾಖಲೆ ಉಡೀಸ್​​

ರಾಬರ್ಟ್ ಸಿನಿಮಾ ಬಿಡುಗಡೆಗೂ ಮೊದಲೇ ಸೂಪರ್ ಹಿಟ್ ಆಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ತಾನೇ ಬಾಕ್ಸಾಫೀಸ್ ಸುಲ್ತಾನ್ ಎಂಬುದನ್ನ ಪ್ರೂ ಮಾಡಿದ್ದಾರೆ. ನಿರ್ಮಾಪಕರ ಪಾಲಿನ ಮನಿಮಿಷನ್ ಎಂಬುದಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದ್ದಾರೆ. ತಮ್ಮನ್ನ ನಂಬಿ ಭರ್ತಿ 50 ಕೋಟಿ ಹಣ ಹೂಡಿರೋ ಉಮಾಪತಿಯ ಮೊಗದಲ್ಲಿ ಗೆಲುವಿನ ಕಳೆಯನ್ನ ಹುಟ್ಟಿಸಿದ್ದಾರೆ.

'ರಾಬರ್ಟ್' ಸಿನಿಮಾದಲ್ಲಿ ದರ್ಶನ್​

'ರಾಬರ್ಟ್' ಸಿನಿಮಾದಲ್ಲಿ ದರ್ಶನ್​

  • Share this:
‘ರಾಬರ್ಟ್‘ ಸ್ಯಾಂಡಲ್‍ವುಡ್‍ನ ಮೋಸ್ಟ್ ಎಕ್ಸ್​​ಪೆಕ್ಟೆಡ್ ಸಿನಿಮಾ. 2018ರ ಸೆಕೆಂಡ್​​​​ ಹಾಫ್‍ನಲ್ಲಿ ಅನೌನ್ಸ್ ಆದ ಈ ಸಿನಿಮಾ. ಅಂದಿನಿಂದಲೇ ಕನ್ನಡ ಚಿತ್ರ ರಸಿಕರನ್ನ ಸೂಜಿಗಣ್ಣಿನಂತೆ ಆಕರ್ಷಿಸುತ್ತಿದೆ. ರಾಬರ್ಟ್ ಸಿನಿಮಾ ಸ್ಟಾರ್ಟ್ ಆದ ಮೇಲೆ ಪ್ರತಿ ಹಂತದಲ್ಲೂ ಸಿನಿಮಾ ಮೇಲಿನ ಎಕ್ಸೈಂಟ್‍ಮೆಂಟ್ ಹೆಚ್ಚಾಗುತ್ತಲೇ ಇದೆ. ಮುಹೂರ್ತ ಆಚರಿಸಿಕೊಂಡಾಗಿನಿಂದ ಪ್ರತಿ ನಿತ್ಯ ಒಂದಲ್ಲ ಒಂದು ರೀತಿಯಾಗಿ ಸದ್ದು ಸುದ್ದಿಯನ್ನ ಮಾಡುತ್ತಾ ಇದೆ ರಾಬರ್ಟ್...

ರಾಬರ್ಟ್ ಈ ಮಟ್ಟಕ್ಕೆ ಸೌಂಡ್ ಮಾಡೋಕೆ, ಕ್ರೇಜ್‍ನ ಸೃಷ್ಟಿಸೋಕೆ, ಇದು ಈವರೆಗಿನ ಎಲ್ಲಾ ದಾಖಲೆಗಳನ್ನ ಪುಡಿ ಮಾಡುತ್ತೆ ಅಂತಹೇಳೋಕೆ ಕಾರಣನೇ ಡಿ‘ಬಾಸ್​‘ ದರ್ಶನ್​​​.  ಚಾಲೆಂಜಿಂಗ್​ ಸ್ಟಾರ್​ ಸಿನಿಮಾ ಯಾವುದೇ ಆಗಿರಲಿ ಅದು ಭೂಮಿ ಭಾನು ಒಂದಾಗುವಷ್ಟು ನಿರೀಕ್ಷೆಯನ್ನ ಆಸೆಯನ್ನ ಕ್ರಿಯೇಟ್ ಮಾಡಿಬಿಡುತ್ತೆ, ಅದು ರಾಬರ್ಟ್ ವಿಷಯದಲ್ಲೂ ರಿಪೀಟ್ ಆಗಿದೆ.

ಅದಕ್ಕೆ ಸಾಕ್ಷಿ ಎಂಬಂತೆ ರಾಬರ್ಟ್ ಸಿನಿಮಾ ಹೆಸರಿಗೆ ದಾಖಲೆಯೊಂದು ಸೇರ್ಪಡೆಯಾಗಿದೆ. ಈ ದಾಖಲೆ ಅಂತಿಂಥದ್ದಲ್ಲ. ಕನ್ನಡ ಚಿತ್ರರಂಗದಲ್ಲೇ ಈ ಮಟ್ಟದ ದಾಖಲೆ ಇದುವರೆಗೂ ಯಾರೂ ಮಾಡಿರಲಿಲ್ಲ. ಅಂತದ್ದೊಂದು ದಾಖಲೆಯನ್ನ ಮಾಡಿರೋದು ಒನ್ ಅಂಡ್ ಓನ್ಲಿ ರಾಬರ್ಟ್.

ರಾಬರ್ಟ್ ಸಿನಿಮಾ ಬಿಡುಗಡೆಗೂ ಮೊದಲೇ ಸೂಪರ್ ಹಿಟ್ ಆಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ತಾನೇ ಬಾಕ್ಸಾಫೀಸ್ ಸುಲ್ತಾನ್ ಎಂಬುದನ್ನ ಪ್ರೂ ಮಾಡಿದ್ದಾರೆ. ನಿರ್ಮಾಪಕರ ಪಾಲಿನ ಮನಿಮಿಷನ್ ಎಂಬುದಕ್ಕೆ ಮತ್ತೊಮ್ಮೆ ಸಾಕ್ಷಿಯಾಗಿದ್ದಾರೆ. ತಮ್ಮನ್ನ ನಂಬಿ ಭರ್ತಿ 50 ಕೋಟಿ ಹಣ ಹೂಡಿರೋ ಉಮಾಪತಿಯ ಮೊಗದಲ್ಲಿ ಗೆಲುವಿನ ಕಳೆಯನ್ನ ಹುಟ್ಟಿಸಿದ್ದಾರೆ.

ಈಗಾಗಲೇ ರಾಬರ್ಟ್ ಸಿನಿಮಾ ದೊಡ್ಡ ಮಟ್ಟದ ಬ್ಯುಸಿನೆಸ್ ಮಾಡಿದೆಯಂತೆ. ಬಲ್ಲ ಮೂಲಗಳ ಪ್ರಕಾರ ರಿಲೀಸ್‍ಗೆ ಒಂದು ತಿಂಗಳು ಬಾಕಿ ಇರುವಾಗಲೇ, 67 ಕೋಟಿ ಬ್ಯುಸಿನೆಸ್ ಮಾಡಿದೆ ಎನ್ನಲಾಗುತ್ತಿದೆ. ಥಿಯೇಟರ್ ಬ್ಯುಸಿನೆಸ್ 35 ಕೋಟಿಯಾದರೆ. ಆಡಿಯೋ, ವೀಡಿಯೋ, ಡಬ್ಬಿಂಗ್, ಸ್ಯಾಟ್‍ಲೈಟ್, ಡಿಜಿಟಲ್  ರೈಟ್ಸ್ ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ರಾಬರ್ಟ್ ಬ್ಯುಸಿನೆಸ್ 32 ಕೋಟಿಯಾಗಿದೆಯಂತೆ. ಅಲ್ಲಿಗೆ 50 ಕೋಟಿ ಬಂಡವಾಳ ಹೂಡಿರೋ ಉಮಾಪತಿ ಸದ್ಯಕ್ಕೆ ಸೇಫ್ ಆಗಿದ್ದಾರೆ ಎಂಬುದು ಗಾಂಧಿನಗರದಲ್ಲಿ ಹಬ್ಬಿರೋ ಟಾಕ್.

ಆದರೆ ಚಿತ್ರತಂಡ ಈ ಬಗ್ಗೆ ಎಲ್ಲೂ ಪ್ರತಿಕ್ರಿಯೆ ಕೊಟ್ಟಿಲ್ಲ. ಬದಲಿಗೆ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ಡಿ‘ಬಾಸ್‘ ದರ್ಶನ್ ಸಹ ಸಖತ್ ಖುಷಿಯಾಗಿದ್ದಾರೆ. ಇದು ಅವರ ಕೆರಿಯರ್‍ನ ಮತ್ತೊಂದು ಮೈಲಿಗಲ್ಲಿನ ಸಿನಿಮಾವಾಗಲಿದೆ ಎಂಬುದು ಆಫ್ ದಿ ರೆಕಾರ್ಡ್ ಟಾಕ್.

ತರುಣ್ ಸುಧೀರ್ ರಾಬರ್ಟ್‍ಗೆ ಆಕ್ಷನ್ ಕಟ್ ಹೇಳಿದ್ದಾರೆ. ಈ ಮುನ್ನ ಚೌಕ ಸಿನಿಮಾದಲ್ಲಿ ದರ್ಶನ್ ಅವರನ್ನ ಕೆಲವೇ ಕೆಲವು ನಿಮಿಷಗಳಲ್ಲೇ ಅದ್ಭುತವಾಗಿ ತೋರಿಸಿದ್ದರು. ಈಗ ಇಡೀ ಸಿನಿಮಾದಲ್ಲಿ ಅಭಿಮಾನಿಗಳ ಪ್ರೀತಿಯ ಡಿ‘ಬಾಸ್‘ ಅನ್ನ ಹೇಗೆ ತೋರಿಸಿರಬಹುದು ಎಂಬ ಕುತೂಹಲ ಚಿತ್ರರಸಿಕರದ್ದು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕೆರಿಯರ್‍ನ ವಿಭಿನ್ನ ವಿಶಿಷ್ಟ ಸಿನಿಮಾ ಇದಾಗಲಿದೆ ಎಂಬುದು ಪೋಸ್ಟರ್, ಟೀಸರ್​ಗಲೇ ಹೇಳುತ್ತಿವೆ. ದರ್ಶನ್ ಲುಕ್ಕು ಗೆಟಪ್ ಇಲ್ಲಿ ಸ್ಪೆಷಲ್ ಆಗಿದೆ. ಹಾಗೆಯೇ ತಾಂತ್ರಿಕವಾಗಿ ಸಹ ರಾಬರ್ಟ್ ಅತಿ ಶ್ರೀಮಂತವಾಗಿ ಮೂಡಿಬಂದಿದೆ. ಪ್ರತಿ ಫ್ರೇಮ್‍ನಲ್ಲೂ ಅದ್ಧೂರಿತನ ಮೇಲೈಸಿದೆಯಂತೆ.

ರಾಬರ್ಟ್ ಸಿನಿಮಾ ಪರಭಾಷಿಗರೂ ಕೂಡ ಕಣ್ಣರಳಸಿ ನೋಡುವಂತಹ ಸಿನಿಮಾ. ಕ್ವಾಲಿಟಿಯಲ್ಲಿ ಯಾವ ಭಾಷೆಗೂ ಕಮ್ಮಿಯಿಲ್ಲದಂತೆ ಸಿನಿಮಾವನ್ನ ದೃಶ್ಯರೂಪಕ್ಕೆ ಇಳಿಸಲಾಗಿದೆ. ಹೀಗಾಗಿ ತೆಲುಗಿನಲ್ಲೂ ರಾಬರ್ಟ್ ಸಿನಿಮಾವನ್ನ ಬಿಡುಗಡೆ ಮಾಡಲು ಮುಂದಾಗಿದೆ ಚಿತ್ರತಂಡ. ಕಳೆದ ವರ್ಷ ದರ್ಶನ್ ನಟನೆಯ ಮೂರು ಸಿನಿಮಾಗಳು ರಿಲೀಸ್ ಆಗಿದ್ದವು. ಮೂರು ಸಹ ಬಾಕ್ಸಾಫೀಸ್‍ನಲ್ಲಿ ಬಿಗ್ ಸಕ್ಸಸ್ ಕಂಡಿದ್ದವು. ಆ ಸಕ್ಸಸ್ ಸವಾರಿ ರಾಬರ್ಟ್ ಕಂಟಿನ್ಯೂ ಮಾಡಡುತ್ತಾನೆ ಆ ಮೂಲಕ ಸತತವಾಗಿ ನಾಲ್ಕನೇ ಸಕ್ಸಸ್ ಫುಲ್ ಜರ್ನಿಗೆ ಚಾಲೆಂಜಿಂಗ್ ಸ್ಟಾರ್ ಸಜ್ಜಾಗಿದ್ದಾರೆ ಎನ್ನಲಾಗ್ತಿದೆ. ಒಟ್ಟಾರೆ ಮುಗಿಲು ಮುಟ್ಟೋವಷ್ಟು ನಿರೀಕ್ಷೆಯ ರಾಬರ್ಟ್ ರಿಲೀಸ್‍ಗೆ ಕೌಂಟ್‍ಡೌನ್ ಸ್ಟಾರ್ಟ್ ಆಗಿದ್ದು, ಅದೆಷ್ಟು ದಾಖಲೆಗಳು ತರಗೆಲೆಯಾಗ್ತಾವೋ ಕಾದು ನೋಡಬೇಕು.

ಇದನ್ನೂ ಓದಿ: Roberrt: ಬಣ್ಣದ ಹಬ್ಬ ಹೋಳಿಯಂದು ರಾಬರ್ಟ್ ಚಿತ್ರದ 2ನೇ ಹಾಡು ಬಿಡುಗಡೆ
First published: