ಡಿಬಾಸ್ ದರ್ಶನ್ 'ರಾಬರ್ಟ್' ಚಿತ್ರೀಕರಣ ಮುಗಿದ ನಂತರ ಸ್ವಲ್ಪ ಬ್ರೇಕ್ ಪಡೆದು ಪಕ್ಷಿಗಳ ಛಾಯಾಗ್ರಹಣಕ್ಕೆಂದು ಹೋಗಿದ್ದರು. ಇದಾದ ನಂತರ ಈಗ ಅವರು ತಮ್ಮ ಹೊಸ ಸಿನಿಮಾ 'ರಾಜವೀರ ಮದಕರಿ ನಾಯಕ' ಚಿತ್ರೀಕರಣಕ್ಕೆ ಹಾಜರಾಗಿದ್ದಾರೆ.
ಸ್ಯಾಂಡಲ್ವುಡ್ನ ಬಹುನಿರೀಕ್ಷಿತ ಸಿನಿಮಾ 'ರಾಜವೀರ ಮದಕರಿ ನಾಯಕ'. ಈ ಚಿತ್ರದ ಚಿತ್ರೀಕರಣಕ್ಕೆ ಕಿಕ್ ಸ್ಟಾರ್ಟ್ ಸಿಕ್ಕಿದೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದ ಸಿನಿಮಾ ವೀರ ಮದಕರಿನಾಯಕ ಶೂಟಿಂಗ್ ಕೇರಳದ ಕೊಚ್ಚಿಯಲ್ಲಿ ನಡೆಯುತ್ತಿದೆ. ಅದಕ್ಕಾಗಿ ನಿನ್ನೆ ದರ್ಶನ್ ಕೊಚ್ಚಿಗೆ ಹಾರಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಅಭಿಮಾನಿಯೊಬ್ಬರ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ.
ನಮ್ಮ ಪ್ರೀತಿಯ ಯಜಮಾನ ಚಾಲೆಂಜಿಂಗ್ ಸ್ಟಾರ್ @dasadarshan ಬಾಸ್ ಅವರು ಹುಟ್ಟುಹಬ್ಬದ ಮುಂಚಿತವಾಗಿ #D54 ರಾಜವೀರ ಮದಕರಿ ನಾಯಕ ಚಿತ್ರದ ಮೊದಲ ಚಿತ್ರಿಕರಣಕ್ಕೆ ಕೊಚ್ಚಿಗೆ ಪಯಣಿಸಿರುತ್ತಿರುವಾಗ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಭಿಮಾನಿಗೆ ಫೋಟೊ ಕೊಟ್ಟ ಅದ್ಬುತ ಕ್ಷಣ
ಹ್ಯಾಪಿ ಜರ್ನಿ ಬಾಸ್ pic.twitter.com/CPDtnZQ29F
— Thoogudeepa 'D' Team - R (@DTEAM7999) February 9, 2020
ನಮ್ಮ "ಬಾಕ್ಸ್ ಆಫೀಸ್ ಸುಲ್ತಾನ್-ಚಾಲೆಂಜಿಂಗ್ ಸ್ಟಾರ್" @dasadarshan ರವರ ಮಹತ್ವಾಕಾಂಕ್ಷಿಯ ಬಹುಕೋಟಿ ವೆಚ್ಚದ ಐತಿಹಾಸಿಕ ಸಿನಿಮಾ "ರಾಜವೀರ ಮದಕರಿ ನಾಯಕ" ಶೂಟಿಂಗಿಗೆಂದು ನಮ್ಮ #ಬಾಸ್ ಇಂದು ಕೊಚ್ಚಿಗೆ ಪ್ರಯಾಣ ಬೆಳೆಸಿದರು👍ನಾಳೆಯಿಂದ ಶೂಟಿಂಗ್ ಸ್ಟಾರ್ಟ್.👏🔥#D54 #RajaveeraMadakariNayaka
#ChallengingStarDarshan#DBoss pic.twitter.com/1anG7IbY5C
— d boss fans raichur (@FansMaski) February 10, 2020
ಸುಮಲತಾ ಅಂಬರೀಷ್ ಈ ಸಿನಿಮಾದಲ್ಲಿ ದರ್ಶನ್ ಅವರ ತಾಯಿಯ ಪಾತ್ರ ಮಾಡುತ್ತಿರುವುದು ವಿಶೇಷವಾಗಿದೆ. ಸಿನಿಮಾದ ಚಿತ್ರೀಕರಣವನ್ನು ಬೆಂಗಳೂರು, ಚಿತ್ರದುರ್ಗ, ಕೇರಳ, ಮುಂಬೈ, ರಾಜಸ್ಥಾನ ಹಾಗೂ ಇತರೆ ಕಡೆಗಳಲ್ಲಿ ನಡೆಸಲಿದೆಯಂತೆ ಚಿತ್ರತಂಡ.
ಇದನ್ನೂ ಓದಿ: DBoss Darshan: ದರ್ಶನ್ ಅಭಿನಯದ ಮದಕರಿ ನಾಯಕ ಚಿತ್ರದ ಅಸಲಿ ಹೆಸರನ್ನು ರಿವೀಲ್ ಮಾಡಿದ ಚಿತ್ರತಂಡ..!
ಸಿನಿಮಾದ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಈ ಹಿಂದೆಯೇ ಹೇಳಿರುವಂತಯೇ ಈ ಚಿತ್ರ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಇತರೆ ಭಾಷೆಗಳಲ್ಲೂ ನಿರ್ಮಾಣವಾಗಲಿದೆ. ಸದ್ಯಕ್ಕೆ ಸಿನಿಮಾ ಚಿತ್ರೀಕರಣ ಆರಂಭವಾಗಿದದ್ದು, ಇದು ದಚ್ಚು ಅಭಿಮಾನಿಗಳಿಗೆ ಸಂತೋಷದ ಸುದ್ದಿ. ಅಲ್ಲದೆ ಫೆ. 16ಕ್ಕೆ ದರ್ಶನ್ ಹುಟ್ಟುಹಬ್ಬವಿದ್ದು, ಅಂದು ಅವರು ಚಿತ್ರೀಕರಣದಿಂದ ಬಿಡುವು ಮಾಡಿಕೊಂಡು ಅಭಿಮಾನಿಗಳಿಗಾಗಿ ಬೆಂಗಳೂರಿಗೆ ಬರಲಿದ್ದಾರಂತೆ.
Nikhil - Revati Engagement: ಉಂಗುರ ಬದಲಿಸಿಕೊಂಡ ನಿಖಿಲ್-ರೇವತಿ: ನಿಶ್ಚಿತಾರ್ಥಕ್ಕೆ ಬಂದ ಪವರ್ಸ್ಟಾರ್ ಪುನೀತ್..!
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ