• Home
  • »
  • News
  • »
  • entertainment
  • »
  • D Boss Darshan: ನಿರ್ಬಂಧವಿದ್ದರೂ ಚಾಮುಂಡಿ ದೇವಾಲಯಕ್ಕೆ ಭೇಟಿ ನೀಡಿದ ದರ್ಶನ್​..!

D Boss Darshan: ನಿರ್ಬಂಧವಿದ್ದರೂ ಚಾಮುಂಡಿ ದೇವಾಲಯಕ್ಕೆ ಭೇಟಿ ನೀಡಿದ ದರ್ಶನ್​..!

ದರ್ಶನ್​

ದರ್ಶನ್​

ಆಷಾಢ ಬಂತೆಂದರೆ ಸಾಕು ದರ್ಶನ್​ ಚಾಮುಂಡೇಶ್ವರಿಯ ದರ್ಶನ ಪಡೆಯೋದನ್ನು ಮರೆಯುವುದಿಲ್ಲ. ಈಗಲೂ ಸಹ ಆಷಾಢ ಮಾಸದ ಮೂರನೇ ಶುಕ್ರವಾರ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ ದರ್ಶನ್.

  • Share this:

ದರ್ಶನ್​ ಖುಷಿ ಇರಲಿ ದುಖಃವಿರಲಿ ಮೊದಲು ನೆನೆಯೋದು ಚಾಮುಂಡಿ ತಾಯಿಯನ್ನು. ಹೀಗಾಗಿಯೇ ಡಿಬಾಸ್​ ಆಗಾಗ ಚಾಮುಂಡೇಶ್ವರಿಯ ದರ್ಶನ ಪಡೆಯಲು ದೇವಾಲಯಕ್ಕೆ ಹೋಗುತ್ತಿರುತ್ತಾರೆ. 

ಅದರಲ್ಲೂ ಆಷಾಢ ಬಂತೆಂದರೆ ಸಾಕು ದರ್ಶನ್​ ಚಾಮುಂಡೇಶ್ವರಿಯ ದರ್ಶನ ಪಡೆಯೋದನ್ನು ಮರೆಯುವುದಿಲ್ಲ. ಈಗಲೂ ಸಹ ಆಷಾಢ ಮಾಸದ ಮೂರನೇ ಶುಕ್ರವಾರ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ದರ್ಶನ ಪಡೆದಿದ್ದಾರೆ ದರ್ಶನ್.

TODAY EXCLUSIVE VIDEOಕೊರೋನ ಭೀತಿಯಿಂದಾಗಿ ಚಾಮುಂಡೇಶ್ವರ ದೇವಾಲಯದಲ್ಲಿ ಸಾರ್ವಜನಿಕರ ಭೇಟಿಗೆ ನಿರ್ಬಂಧಿಸಲಾಗಿದೆಯತೆ. ಆದರೂ ದರ್ಶನ್​ ಅವರು ಮಾತ್ರ ಸ್ನೇಹಿತರೊಂದಿಗೆ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.

ದರ್ಶನ್‌ಗೆ ವಿಶೇಷ ದರ್ಶನ!
ಇಂದು ಬೆಳಿಗ್ಗೆ ನಿತ್ಯ ಪೂಜೆಯ ಸಮಯಕ್ಕೆ ದೇವಾಲಯಕ್ಕೆ ತಮ್ಮ ಸ್ನೇಹಿತ ಮೈಸೂರು ಪಾಲಿಕೆಯ ಉಪಮೇಯರ್ ಶ್ರೀಧರ್ ಜೊತೆ ಬೆಟ್ಟಕ್ಕೆ ಬಂದಿದ್ದರು ನಟ ದರ್ಶನ್. ವಿಐಪಿಗಳ ದರ್ಶನಕ್ಕೂ ನಿಷೇಧವಿದೆ ಎಂದಿತ್ತು ಜಿಲ್ಲಾಡಳಿತ. ಆದರೂ ಇದೀಗ ವಿಐಪಿ ಆದ ಕಾರಣ ದರ್ಶನ್‌ಗೆ ವಿಶೇಷ ದರ್ಶನದ ವ್ಯವಸ್ಥೆ ಮಾಡಲಾಗಿದೆ. ಇದರಿಂದಾಗಿ ಸಾಮಾನ್ಯ ಜನರಿಗೆ ಒಂದು ನ್ಯಾಯ. ಸೆಲೆಬ್ರಿಟಿಗಳಿಗೆ ಒಂದು ನ್ಯಾಯಾನಾ ಅನ್ನೋ ಪ್ರಶ್ನೆ ಎದುರಾಗುತ್ತಿದೆ.

ದರ್ಶನ್​ ದೇವಾಲಯಕ್ಕೆ ಭೇಟಿ ಕೊಟ್ಟವೇಳೆ ಜನಜಂಗುಳಿ ಕೊಂಚ ಹೆಚ್ಚಾಗಿಯೇ ಇತ್ತು. ಎಲ್ಲರೂ ಮಾಸ್ಕ್​ ಧರಿಸಿದ್ದರಾದರೂ ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ. ಇದು ಈಗ ಕೆಲವರ ಆಕ್ರೋಶಕ್ಕೆ ಕಾರಣವಾಗಿದೆ. ಈ ವೇಳೆ ನಿರ್ಮಾಪಕ ಸಂದೇಶ್​ ನಾಗರಾಜ್​ ಸಹ ದರ್ಶನ್​ ಜೊತೆಯಲ್ಲಿದ್ದರು ಎನ್ನಲಾಗುತ್ತಿದೆ.

ಇದನ್ನೂ ಓದಿ: ಬಾಹುಬಲಿ ಸಿನಿಮಾಗೆ 5ರ ಸಂಭ್ರಮ: ಖುಷಿ ಹಂಚಿಕೊಂಡ ಪ್ರಭಾಸ್​-ರಾಣಾ..!

ಇನ್ನು ದರ್ಶನ್​ ಆಷಾಢ ಮಾಸದಲ್ಲಿ ಪ್ರತಿ ಶುಕ್ರವಾರ ವಿಶೇಷ ಪೂಜೆ ಮಾಡುತ್ತಾರಂತೆ. ಮೈಸೂರಿನ ತೋಟದ ಮನೆಯಲ್ಲಿರುವ ಚಾಮುಂಡಿ ವಿಗ್ರಹಕ್ಕೂ ಪೂಜೆ ಸಲ್ಲಿಸಲಾಗುತ್ತದೆಯಂತೆ. ಇದೇ ಕಾರಣದಿಂದ ಅವರು ಇಂದು ದೇವಾಲಯಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದಿದ್ದಾರೆ ಎನ್ನಲಾಗುತ್ತಿದೆ.

Ramya Krishnan: ಬಾಲ್ಯದ ನೆನಪುಗಳೊಂದಿಗೆ ಮೇಕಪ್​ ಇಲ್ಲದ ಫೋಟೋ ಹಂಚಿಕೊಂಡ ರಮ್ಯಾ ಕೃಷ್ಣನ್​ಇದನ್ನೂ ಓದಿ: ರಿಲೀಸ್​ ಆಯ್ತು ಪ್ರಭಾಸ್​ ನಟನೆಯ ಚಿತ್ರದ ಟೈಟಲ್​- ಫಸ್ಟ್​ಲುಕ್​ ಪೋಸ್ಟರ್​..!

Published by:Anitha E
First published: