• Home
 • »
 • News
 • »
 • entertainment
 • »
 • ಚಾಲೆಂಜಿಂಗ್​ ಸ್ಟಾರ್​ ದರ್ಶನ್​ಗೆ ಇಂದು ಮರೆಯಲಾಗದ ದಿನ; ಯಾಕೆ ಗೊತ್ತೇ?

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ಗೆ ಇಂದು ಮರೆಯಲಾಗದ ದಿನ; ಯಾಕೆ ಗೊತ್ತೇ?

ದರ್ಶನ್

ದರ್ಶನ್

Darshan: 'ಮೆಜೆಸ್ಟಿಕ್'​ ಸಿನಿಮಾ 2002ರಲ್ಲಿ ತೆರೆ ಕಂಡ ಸಿನಿಮಾ. P.N​ ಸತ್ಯ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾ. ಸಾಧು ಕೋಕಿಲಾ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರದಲ್ಲಿ ದರ್ಶನ್​ಗೆ ನಾಯಕಿಯಾಗಿ ರೇಖಾ ಕಾಣಿಸಿಕೊಂಡಿದ್ದರು.

 • Share this:

  ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಸ್ಯಾಂಡಲ್​ವುಡ್​ನಲ್ಲಿ ಬಣ್ಣ ಹಚ್ಚಲು ಪ್ರಾರಂಭಿಸಿ ಇಂದಿಗೆ 18 ವರ್ಷಗಳಾಗಿವೆ. ಇದೇ ದಿನದಂದು ದಾಸ ಕನ್ನಡ ಸಿನಿ ರಂಗವನ್ನು ಪ್ರವೇಶಿಸಿದರು. 'ಮೆಜೆಸ್ಟಿಕ್'​ ಸಿನಿಮಾದ ಮೂಲಕ ದರ್ಶನ್​ ಸ್ಯಾಂಡಲ್​ವುಡ್​ಗೆ ಪರಿಚಯರಾದರು. ಹಾಗಾಗಿ ಈ ದಿನ ದಾಸನಿಗೆ ಮರೆಯಲಾಗದ ದಿನವೆಂದರೆ ತಪ್ಪಾಗಲಾರದು.


  ದರ್ಶನ್ ಅವರಿಗೆ ಕನ್ನಡ ಸಿನಿಮಾ ಇಂಡಸ್ಟ್ರಿ ಮೊದಲೇ ಪರಿಚಯವಿತ್ತು. ದಾಸ​ ಸಿನಿ ಪರದೆಯಲ್ಲಿ ಕಾಣಿಸಿಕೊಳ್ಳುವುದಕ್ಕೂ ಮೊದಲೇ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ್ದರು. ಆನಂತರ 'ಮೆಜೆಸ್ಟಿಕ್'​ ಸಿನಿಮಾದಲ್ಲಿ ನಟಿಸುವ ಮೂಲಕ ತಮ್ಮ ಹಣೆಬರಹವನ್ನೇ ಬದಲಾಯಿಸಿಕೊಂಡರು.


  ದರ್ಶನ್​ ತಂದೆ ತೂಗುದೀಪ ಶ್ರೀನಿವಾಸ್​ ಸ್ಯಾಂಡಲ್​ವುಡ್​ನ ಲೆಜೆಂಡ್​ ಕಲಾವಿದ. ಅಪ್ಪನಂತೆ ಸಿನಿಮಾದಲ್ಲಿ ನಟಿಸುವ ಆಸೆ ಮಗ ದರ್ಶನ್​ಗೆ ಇತ್ತಾದರೂ ಅಂದಿನ ಕಾಲದಲ್ಲಿ ಅದು ಸುಲಭವಾಗಿರಲಿಲ್ಲ. ದರ್ಶನ್​ ಸಾಕಷ್ಟು ಕಷ್ಟಪಟ್ಟು ಇಂಡಸ್ಟ್ರಿಯಲ್ಲಿ ದುಡಿಯುತ್ತಿದ್ದರು. ಹೀಗೆ ಬಹಳಷ್ಟು ಆಸೆಗಳ ಕನಸನ್ನಿಟ್ಟುಕೊಂಡಿದ್ದ ದರ್ಶನ್​ಗೆ ಮೊದಲ ಅವಕಾಶ ಸಿಕ್ಕಿದ್ದು 'ಮೆಜೆಸ್ಟಿಕ್'​ ಸಿನಿಮಾದ ಮೂಲಕ. ಅಂದಿನಿಂದ ದರ್ಶನ್​ ಅವರ ಹಣೆಬರಹವೇ ಬದಲಾಯಿತು.


  'ಮೆಜೆಸ್ಟಿಕ್'​ ಸಿನಿಮಾ 2002ರಲ್ಲಿ ತೆರೆ ಕಂಡ ಸಿನಿಮಾ. P.N​ ಸತ್ಯ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾ. ಸಾಧು ಕೋಕಿಲಾ ಈ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರದಲ್ಲಿ ದರ್ಶನ್​ಗೆ ನಾಯಕಿಯಾಗಿ ರೇಖಾ ಕಾಣಿಸಿಕೊಂಡಿದ್ದರು.


  Dboss Darshan Starrer Majestic Film Completed 18 Years
  Dboss Darshan Starrer Majestic Film Completed 18 Years


  ಇಂದು ನಟ ದರ್ಶನ್​ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕರ್ನಾಟಕದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟನಾಗಿ ಯಜಮಾನ ಗುರುತಿಸಿಕೊಂಡಿದ್ದಾರೆ.


  ಮೆಜೆಸ್ಟಿಕ್​ ಸಿನಿಮಾದ ಮೂಲಕ ಸಿನಿ ರಂಗ ಪ್ರವೇಶಿಸಿದ ದರ್ಶನ್​ ಇಂದಿಗೆ 59ಕ್ಕೂ ಹೆಚ್ಚಿ ಸಿನಿಮಾಗಳಲ್ಲಿ ನಾಯಕನಾಗಿ ನಟಿಸುತ್ತಾ  ಬಂದಿದ್ದಾರೆ.  ಕಳೆದ ವರ್ಷ ‘ಮುನಿರತ್ನ ಕುರುಕ್ಷೇತ್ರ‘,‘ಯಜಮಾನ‘, ‘ಒಡೆಯ‘ ಹೀಗೆ ಸಾಲು-ಸಾಲು ಹಿಟ್​​ ಸಿನಿಮಾಗಳ ಮೂಲಕ ಅಭಿಮಾನಿಗಳ ಎದುರಿಗೆ ಬಂದಿದ್ದರು. ಈ ವರ್ಷ ಬಹು ನಿರೀಕ್ಷೆಯ 'ರಾಬರ್ಟ್​' ಸಿನಿಮಾದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದು, ಅಭಿಮಾನಿಗಳು ಸಹ ಕಾತರರಾಗಿದ್ದಾರೆ.

  Published by:Harshith AS
  First published: