Darshan: ದರ್ಶನ್ ಬಗ್ಗೆ ಸಿಕ್ತು ಹೊಸ ಅಪ್ಡೇಟ್​:​ ತೋಟದ ಮನೆಯಲ್ಲಿ ತೆಗೆದ ವಿಡಿಯೋ ವೈರಲ್​..!

Darshan Horse Riding Video: ಲಾಕ್​ಡೌನ್​ನಲ್ಲಿ ದರ್ಶನ್​ ಮೈಸೂರಿನಲ್ಲಿದ್ರಾ..? ಬೆಂಗಳೂರಿನ ಮನೆಯಲ್ಲಿ ಇದ್ದರಾ ಅನ್ನೋದು ಗೊತ್ತೇ ಇರಲಿಲ್ಲ. ಆದರೆ ಈಗ ದರ್ಶನ್​ ಅವರ ಬಗ್ಗೆ ಒಂದು ಲೆಟೆಸ್ಟ್ ಅಪ್ಡೇಟ್​ ಸಿಕ್ಕಿದೆ. ದಚ್ಚು ತಮ್ಮ ತೋಟದ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

Anitha E | news18-kannada
Updated:June 3, 2020, 10:10 PM IST
Darshan: ದರ್ಶನ್ ಬಗ್ಗೆ ಸಿಕ್ತು ಹೊಸ ಅಪ್ಡೇಟ್​:​ ತೋಟದ ಮನೆಯಲ್ಲಿ ತೆಗೆದ ವಿಡಿಯೋ ವೈರಲ್​..!
ತೋಟದ ಮನೆಯಲ್ಲಿ ದರ್ಶನ್​
  • Share this:
ಲಾಕ್​ಡೌನ್​ ಆದಾಗಿನಿಂದ ದರ್ಶನ್​ ಅವರ ಯಾವುದೇ ಅಪ್ಡೇಟ್ ಅಭಿಮಾನಿಗಳಿಗೆ ಸಿಕ್ಕಿರಲಿಲ್ಲ. ಡಿಬಾಸ್​ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಅನ್ನೋ ವಿಷಯ ಎಲ್ಲೂ ಹೊರ ಬಂದಿರಲಿಲ್ಲ. ಅದರಲ್ಲೂ ದರ್ಶನ್​ ತಮ್ಮ ವೈಯಕ್ತಿಕ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದು ತುಂಬಾನೇ ವಿರಳ.

ಲಾಕ್​ಡೌನ್​ನಲ್ಲಿ ದರ್ಶನ್​ ಮೈಸೂರಿನಲ್ಲಿದ್ರಾ..? ಬೆಂಗಳೂರಿನ ಮನೆಯಲ್ಲಿ ಇದ್ದರಾ ಅನ್ನೋದು ಗೊತ್ತೇ ಇರಲಿಲ್ಲ. ಆದರೆ ಈಗ ದರ್ಶನ್​ ಅವರ ಬಗ್ಗೆ ಒಂದು ಲೆಟೆಸ್ಟ್ ಅಪ್ಡೇಟ್​ ಸಿಕ್ಕಿದೆ. ದಚ್ಚು ತಮ್ಮ ತೋಟದ ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ.

ಬೆಳ್ಳಂ ಬೆಳಗ ನಮ್ ಬಾಸ್ ಫೋಟೋ ನೋಡಿದರೆ ಉಲ್ಲಾಸ ಆನಂದ ನೆಮ್ಮದಿ 😍 ಇಷ್ಟು ಸಾಕು ನಮಗೆ ಇನ್ನೇನು ಬೇಕು ಖುಷಿಯಾಗೋಕೆ... 



ಸಿನಿಮಾ ಕೆಲಸ ಇಲ್ಲದಾಗ ಹಾಗೂ ಸಮಯ ಸಿಕ್ಕಾಗಲೆಲ್ಲ ದರ್ಶನ್​ ಮೈಸೂರಿನಲ್ಲಿರುವ ತಮ್ಮ ತೋಟದ ಮನೆಗೆ ಹೋಗಿ ಅಲ್ಲಿರುವ ಪ್ರಾಣಿ-ಪಕ್ಷಿಗಳೊಂದಿಗೆ ಕಾಲ ಕಳೆಯುತ್ತಾರೆ. ಅಲ್ಲಿರುವುದು ಎಂದರೆ ದಚ್ಚುತುಂಬಾ ಇಷ್ಟ. ಹೀಗೆಂದು ಅವರೇ ಸಾಕಷ್ಟು ಸಲ ಹೇಳಿಕೊಂಡಿದ್ದಾರೆ. ಈಗಲೂ ಸಹ ತೋಟದಲ್ಲಿ ಕುದುರೆ ಸವಾರಿ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಅದರ ವಿಡಿಯೋ ಈಗ ವೈರಲ್​ ಆಗುತ್ತಿದೆ.

YESTERDAY EXCLUSIVE VIDEO



ದರ್ಶನ್​ ಅವರ ತೋಟದ ಮನೆಯಲ್ಲಿ ಅವರ ಕುದುರೆ ಜೊತೆ ತೆಗೆದ ಒಂದು ಫೋಟೋಗಳು ಹಾಗೂ ವಿಡಿಯೋ  ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದು ನಿನ್ನೆ ಹಾಗೂ ಇಂದು ಶೂಟ್​ ಮಾಡಲಾಗಿದೆ ಎಂದು ಅಭಿಮಾನಿಗಳು ಪೋಸ್ಟ್​ ಮಾಡುತ್ತಿದ್ದಾರೆ.

Alia Bhatt: ಹೊಸ ಕಚೇರಿಗಾಗಿ ಇಂಟೀರಿಯರ್​ ಡಿಸೈನರ್​ ಆದ ಆಲಿಯಾ ಭಟ್​..!



First published: June 3, 2020, 9:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading