Robert Poster: ವಿವಾದದಲ್ಲಿ ರಾಬರ್ಟ್​ ಪೋಸ್ಟರ್​: ಏನಂತಾರೆ ನಿರ್ದೇಶಕ ತರುಣ್​ ಸುಧೀರ್..?

ಡಿಬಾಸ್​ ಸಿನಿಮಾದ ಪೋಸ್ಟರ್​, ಹಾಡು, ಏನೇ ಆಗಲಿ ಅದು ಬಿಡುಗಡೆಯಾಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್​ ಆಗುತ್ತದೆ. ಅದಕ್ಕೆ ಕಾರಣ ದಚ್ಚು ಅಭಿಮಾನಿಗಳು. ಆದರೆ ಈಗಲೂ ಸಹ ರಾಬರ್ಟ್​ ಸಿನಿಮಾದ ಥೀಮ್​ ಪೋಸ್ಟರ್​ ಸದ್ಯ ಬೇರೆಯದ್ದೇ ಕಾರಣಕ್ಕೆ ಸದ್ದು ಮಾಡುತ್ತಿದೆ.

Anitha E | news18
Updated:June 6, 2019, 6:38 PM IST
Robert Poster: ವಿವಾದದಲ್ಲಿ ರಾಬರ್ಟ್​ ಪೋಸ್ಟರ್​: ಏನಂತಾರೆ ನಿರ್ದೇಶಕ ತರುಣ್​ ಸುಧೀರ್..?
ರಾಬರ್ಟ್​ ಪೋಸ್ಟರ್ ವಿವಾದ
  • News18
  • Last Updated: June 6, 2019, 6:38 PM IST
  • Share this:
- ಅನಿತಾ ಈ, 

ಡಿಬಾಸ್​ ದರ್ಶನ್​ ಅವರ ಬಹು ನಿರೀಕ್ಷಿತ ಸಿನಿಮಾ 'ರಾಬರ್ಟ್'. ಈ ಸಿನಿಮಾದ ಪೋಸ್ಟರ್​ ನಿನ್ನೆಯಷ್ಟೆ ಈದ್​ ಅಂಗವಾಗಿ ಬಿಡುಗಡೆಯಾಗಿದ್ದು, ಸದ್ಯದ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಅಲ್ಲದೆ ದಚ್ಚು ಅಭಿಮಾನಿಗಳ ಕ್ರೇಜ್​ ಎಷ್ಟಿದೆ ಅಂದರೆ 'ರಾಬರ್ಟ್​' ಪೋಸ್ಟರ್​ ಅನ್ನು ಹೇಗಾದರೂ ಮಾಡಿ ವೈರಲ್​ ಮಾಡಲೇಬೇಕು ಅಂತ ನಿರ್ಧರಿಸಿಬಿಟ್ಟಿದ್ದಾರೆ.

ಇಂತಹ 'ರಾಬರ್ಟ್' ಪೋಸ್ಟರ್ ಈಗ ವಿವಾದಕ್ಕೀಡಾಗಿದೆ. ಈ ಪೋಸ್ಟರ್ ನಕಲಿ ಎಂಬ ಸುದ್ದಿ ಕೇಳಿ ಬಂದಿದೆ.  ಈ ಪೋಸ್ಟರ್​ ಅನ್ನು ನಕಲು ಮಾಡಲಾಗಿದೆ ಎಂಬ ಮಾತು ಹರಿದಾಡುತ್ತಿದೆ.ಹೌದು, ದರ್ಶನ್​ ಅವರ ಹೊಸ ಪೋಸ್ಟರ್​ ಹಾಲಿವುಡ್​ನ ಖ್ಯಾತ ನಟ ಹಾಗೂ ರಾಕ್​ ಎಂದೇ ಖ್ಯಾತರಾಗಿರುವ ಡ್ವೇನ್​ ಜಾನ್ಸನ್​ ಅವರ ಇನ್​ಸ್ಟಾಗ್ರಾಂನ ಪೋಟೊ ಒಂದರ ನಕಲು ಎಂದು ಹೇಳಲಾಗುತ್ತಿದೆ.

ಆದರೆ ಅದಕ್ಕೆ ಡಿಬಾಸ್​ ಅಭಿಮಾನಿಗಳು ಕೊಡುತ್ತಿರುವ ಉತ್ತರ ಮತ್ತಷ್ಟು ಆಸಕ್ತಿಕರವಾಗಿದೆ.ಡ್ವೇನ್​ ಅವರೇ 'ರಾಬರ್ಟ್​' ಚಿತ್ರ ಪೋಸ್ಟರ್​ ನೋಡಿ ಈ ರೀತಿಯ ಚಿತ್ರ ಪೋಸ್ಟ್​ ಮಾಡಿದ್ದಾರೆ ಎಂದು ದಚ್ಚು ಅಭಿಮಾನಿಗಳು ಟ್ವೀಟ್​ ಮಾಡುತ್ತಿದ್ದಾರೆ.ಈ ವಿವಾದ ಕುರಿತಂತೆ ನಿರ್ದೇಶಕ ತರುಣ್​ ಸುಧೀರ್​ ಸಹ ಹೇಳಿಕೆ ನೀಡಿದ್ದು, 'ಆದ ರ್ಶ್ ಮೋಹನ್​ ಎಂಬುವರು ರಾಬರ್ಟ್​ ಪೋಸ್ಟರ್​ ಅನ್ನು ಡಿಸೈನ್​ ಮಾಡಿದ್ದು, ನಾವು ಮೊದಲೇ ವಿನ್ಯಾಸಗೊಳಿಸಿದ್ದೆವು. ಅದಾದ ನಂತರ ರಾಕ್​ ಅವರು  ಮೇ 15ಕ್ಕೆ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಚಿತ್ರವನ್ನು ಪ್ರಕಟಿಸಿದ್ದಾರೆ' ಎಂದು ಹೇಳಿದ್ದಾರೆ.ಇದನ್ನೂ ಓದಿ: #RoberrtThemePoster: ಟ್ವಿಟರ್​ನಲ್ಲಿ ಟ್ರೆಂಡಿಂಗ್​ನಲ್ಲಿದ್ದಾನೆ ರಾಬರ್ಟ್​: ಸಾಮಾಜಿಕ ಜಾಲತಾಣದಲ್ಲಿ ರಾಬರ್ಟ್​-ಪೈಲ್ವಾನ್​ ಪೋಸ್ಟರ್​ ವಾರ್

ಇದರಲ್ಲಿ ಯಾವುದು ಸತ್ಯವೋ, ಯಾರನ್ನ ಯಾರು ನಕಲು ಮಾಡಿದರೋ ಗೊತ್ತಿಲ್ಲ. ಆದರೆ ಒಳ್ಳೆಯ ಕಾರಣಕ್ಕೋ ಅಥವಾ ಬೇರೆ ಕಾರಣಕ್ಕೋ ರಾಬರ್ಟ್ ಪೋಸ್ಟರ್ ಮಾತ್ರ ಸದ್ದು ಮಾಡುತ್ತಿದೆ.

Photos: ಬೋಲ್ಡ್​ ಉಡುಗೆ ತೊಟ್ಟು ಟೀಕೆಗೆ ಗುರಿಯಾದ ನಟಿ ಪ್ರಿಯಾಂಕಾ ಚೋಪ್ರಾ..!
First published:June 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading