Kurukshetra: ಕುರುಕ್ಷೇತ್ರ ಆಡಿಯೋ ಲಾಂಚ್​ಗೆ ಆರಂಭದಲ್ಲೇ ವಿಘ್ನ: ಸಿಟ್ಟಾಗಿದ್ದ ಅಭಿಮಾನಿಗಳಿಗೆ ಡಿಬಾಸ್ ದರ್ಶನ್​​ ಹಿತನುಡಿ..!

Kurukshetra: ಈಗಾಗಲೇ ಈ ಕಾರ್ಯಕ್ರಮದ ಪಾಸ್​ಗಳು ಪ್ರಿಂಟ್​ ಆಗಿದ್ದು, ಅಭಿಮಾನಿಗಳು ಅದನ್ನು ಕೊಳ್ಳಲು ಮುಗಿಬಿದ್ದಿದ್ದಾರೆ. ಅದರಲ್ಲೂ ದಚ್ಚು ಅಭಿಮಾನಿಗಳಂತೂ ಕೇಳಬೇಕಾ..? ಆದರೆ ಪಾಸ್​ ತೆಗೆದುಕೊಳ್ಳುವಾಗ ಇದ್ದ ಖುಷಿ ಅದನ್ನು ನೋಡಿದ ನಂತರ ಉಳಿಯಲಿಲ್ಲ. ಕಾರಣ ಇಷ್ಟೆ....

Anitha E | news18
Updated:July 1, 2019, 3:34 PM IST
Kurukshetra: ಕುರುಕ್ಷೇತ್ರ ಆಡಿಯೋ ಲಾಂಚ್​ಗೆ ಆರಂಭದಲ್ಲೇ ವಿಘ್ನ: ಸಿಟ್ಟಾಗಿದ್ದ ಅಭಿಮಾನಿಗಳಿಗೆ ಡಿಬಾಸ್ ದರ್ಶನ್​​ ಹಿತನುಡಿ..!
ಕರುಕ್ಷೇತ್ರ ಸಿನಿಮಾದಲ್ಲಿ ದರ್ಶನ್​
  • News18
  • Last Updated: July 1, 2019, 3:34 PM IST
  • Share this:
- ಅನಿತಾ ಈ, 

'ಕುರುಕ್ಷೇತ್ರ' ಆಡಿಯೋ ಲಾಂಚ್​ಗೆ ದಿನ ಗಣನೆ ಆರಂಭವಾಗಿದೆ. ಇದೇ ಭಾನುವಾರ ಅಂದರೆ ಜುಲೈ 7ರಂದು ಅದ್ಧೂರಿಯಾಗಿ ಸಂಗೀತ ಕಾರ್ಯಕ್ರಮದ ಮೂಲಕ ದರ್ಶನ್​ ಪ್ರಮುಖ ಪಾತ್ರದಲ್ಲಿ ಅಭಿನಯದ ಈ'ಕುರುಕ್ಷೇತ್ರ' ಸಿನಿಮಾದ ಆಡಿಯೋ ಲಾಂಚ್​ ಕಾರ್ಯಕ್ರಮ ನಡೆಯಲಿದೆ.

ಈಗಾಗಲೇ ಈ ಕಾರ್ಯಕ್ರಮದ ಪಾಸ್​ಗಳು ಪ್ರಿಂಟ್​ ಆಗಿದ್ದು, ಅಭಿಮಾನಿಗಳು ಅದನ್ನು ಕೊಳ್ಳಲು ಮುಗಿಬಿದ್ದಿದ್ದಾರೆ. ಅದರಲ್ಲೂ ದಚ್ಚು ಅಭಿಮಾನಿಗಳಂತೂ ಕೇಳಬೇಕಾ..? ಆದರೆ ಪಾಸ್​ ತೆಗೆದುಕೊಳ್ಳುವಾಗ ಇದ್ದ ಖುಷಿ ಅದನ್ನು ನೋಡಿದ ನಂತರ ಉಳಿಯಲಿಲ್ಲ. ಕಾರಣ ಇಷ್ಟೆ....

— DBoss Hudugaru Official ® (@DBoss_Hudugaru_) July 1, 2019ದರ್ಶನ್​ ಅಭಿನಯದ 50ನೇ ಸಿನಿಮಾದ ಆಡಿಯೋ ಲಾಂಚ್​ನ ಪಾಸ್​ನಲ್ಲಿ ಮುನಿರತ್ನ ಅವರ ಚಿತ್ರವಿದೆ. ಆದರೆ ಅಲ್ಲಿ ದರ್ಶನ್​ ಅವರ ಫೋಟೋ ಇಲ್ಲವಂತೆ. ಈ ವಿಷಯ ಈಗ ದಚ್ಚು ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

DBoss Darshan requests his fans to stay calm and to participate in the kurukshetra audio launch
'ಕುರುಕ್ಷೇತ್ರ' ಸಿನಿಮಾದ ಆಡಿಯ ಲಾಂಚ್​ ಪಾಸ್
ಹೌದು, ಆಡಿಯೋ ಲಾಂಚ್​ ಪಾಸ್​ನಲ್ಲಿ ದರ್ಶನ್​ ಅವರ ಫೋಟೋ ಹಾಕಬೇಕಿತ್ತು. ಆದರೆ ಅದನ್ನು ಯಾವ ಕಾರಣಕ್ಕಾಗಿ ಹಾಕಿಲ್ಲ ಎಂದೆಲ್ಲ ಅಭಿಮಾನಿಗಳು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಡುತ್ತಿದ್ದಾರೆ.

ಇದನ್ನೂ ಓದಿ: Rocking Star Yash: ದಚ್ಚು-ಪುನೀತ್​ ನಂತರ ರಾಕಿಂಗ್​ ಸ್ಟಾರ್​ ಸರದಿ: ಪುಟ್ಟ ಅಭಿಮಾನಿಗೆ ಸಾಂತ್ವನ ಹೇಳಿದ ಯಶ್​..!

ಇದನ್ನು ಕಂಡ ನಟ ದರ್ಶನ್​ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. 'ಈ ಸಿನಿಮಾದಲ್ಲಿ ಬಹು ತಾರಾಗಣವಿದೆ. ಒಬ್ಬ ನಟನ ಚಿತ್ರ ಹಾಕುವುದು ಸರಿಯಲ್ಲ. ಸಮಾನತೆ ಕಾಪಾಡಿಕೊಳ್ಳಬೇಕು. ಇಷ್ಟು ಚಿಕ್ಕ ವಿಷಯಕ್ಕೆ ಬೇಸರ ಮಾಡಿಕೊಳ್ಳುವ ಅವಶ್ಯಕತೆ ಇಲ್ಲ. ಎಲ್ಲರೂ ಆರಾಮಾಗಿ ಖುಷಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿ' ಎಂದು ಬರೆದುಕೊಂಡಿದ್ದಾರೆ.

ಸ್ಯಾಂಡಲವವುಡ್​ ಹಾಗೂ ರಾಜ್ಯಾದ್ಯಂತ ನಟ ದರ್ಶನ್​ ಅವರಿಗೆ ಇರುವ ಅಭಿಮಾನಿ ಬಳಗದ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಸಾಕಷ್ಟು ಬಾರಿ ಸಿನಿಮಾ ಸಂಬಂಧಪಟ್ಟ ವಿಷಯಗಳಿಗೆ ಬೇರೆ ನಟರ ಅಭಿಮಾನಿಗಳೊಂದಿಗೆ ಸಾಮಾಜಿಕ ತಾಣದದಲ್ಲಿ ಟ್ವೀಟ್​ ವಾರ್​ ನಡೆದದ್ದೂ ಇದೆ. ಹೀಗಿರುವಾಗ ಈಗ ಆಡಿಯೋ ಲಾಂಚ್​ ಪಾಸ್​ನ ವಿಷಯದಲ್ಲಿ ಮತ್ತೆ ಅಭಿಮಾನಿಗಳ ಬೇಸರ ಯಾವ ಮಟ್ಟಕ್ಕೆ ತಲುಪುತ್ತಿತ್ತೋ ಗೊತ್ತಿಲ್ಲ..? ಆದರೆ ದರ್ಶನ್​ ಮಧ್ಯ ಪ್ರವೇಶಿಸಿ, ಅಭಿಮಾನಿಗಳ ಮನವೊಲಿಸಿದ್ದು ಉತ್ತಮ ಬೆಳವಣಿಗೆಯೇ ಸರಿ.

DBoss Darshan: ರಾಬರ್ಟ್​ ಚಿತ್ರೀಕರಣದ ನಡುವೆ ಧರ್ಮಸ್ಥಳಕ್ಕೆ ಭೇಟಿ ನೀಡಿದ ದರ್ಶನ್​
First published:July 1, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ