ಹುಲಿ ಸಂತತಿ ಬೆಳೆಸಲು ಕಾಡನ್ನು ಬೆಳೆಸಿ ಎಂದು ಮನವಿ ಮಾಡಿದ ದರ್ಶನ್: ಇಲ್ಲಿದೆ ವಿಡಿಯೋ​..!

International Tiger Day: ಇಂದು ಅಂತರಾಷ್ಟ್ರೀಯ ಹುಲಿ ದಿನಾಚರಣೆ. ಅರಣ್ಯ ಇಲಾಖೆ ಹುಲಿ ಸಂತತಿ ಉಳಿಸುವ ಹಾಗೂ ಅರಣ್ಯ ಕಾಪಾಡುವ ಕುರಿತಾಗಿ ಅರಿವು ಮೂಡಿಸುವ ವಿಡಿಯೋ ಮಾಡಿದ್ದು, ಅದನ್ನು ಇಂದು ಬಿಡುಗಡೆ ಮಾಡಿದೆ. ಇದರಲ್ಲಿ ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ದರ್ಶನ್​ ಸಹ ಕಾಣಿಸಿಕೊಂಡಿದ್ದಾರೆ.

ನಟ ದರ್ಶನ್​

ನಟ ದರ್ಶನ್​

  • Share this:
ನಟ ದರ್ಶನ್​ ಅವರಿಗೆ ಪರಿಸರ, ಪ್ರಾಣಿ-ಪಕ್ಷಿ ಎಂದರೆ ಎಲ್ಲಿಲ್ಲದ ಪ್ರೀತಿ ಹಾಗೂ ಕಾಳಜಿ. ತೋಟದ ಮನೆಯಲ್ಲಿ ಇಷ್ಟದ ಪ್ರಾಣಿ-ಪಕ್ಷಿಗಳನ್ನು ಸಾಕಿಕೊಂಡಿರುವ ಡಿಬಾಸ್​, ಮೈಸೂರು ಮೃಗಾಲಯದಲ್ಲಿ ವನ್ಯಜೀವಿಗಳನ್ನು ದತ್ತು ಪಡೆದು ಸಾಕುತ್ತಿದ್ದಾರೆ. 

ಅರಣ್ಯದ ವಿಷಯಕ್ಕೆ ಬಂದರೆ, ಅರಣ್ಯ ಒತ್ತುವರಿಯನ್ನು ವಿರೋಧಿಸುವ ದಾಸ, ಕಾಡನ್ನು ಬೆಳೆಸಿ, ಉಳಿಸುವ ಕಾರ್ಯದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಇನ್ನು ದರ್ಶನ್​, ರಾಜ್ಯ ಅರಣ್ಯ ಇಲಾಖೆಯ ರಾಯಭಾರಿಯಾಗಿದ್ದಾರೆ.

Global Tiger day 2020https://t.co/VQMpL38RX3#india #karnataka #forest #wildlife #saplings #trees #nature #conservation #afforestation #ecologyಇಂದು ಅಂತರಾಷ್ಟ್ರೀಯ ಹುಲಿ ದಿನಾಚರಣೆ. ಅರಣ್ಯ ಇಲಾಖೆ ಹುಲಿ ಸಂತತಿ ಉಳಿಸುವ ಹಾಗೂ ಅರಣ್ಯ ಕಾಪಾಡುವ ಕುರಿತಾಗಿ ಅರಿವು ಮೂಡಿಸುವ ವಿಡಿಯೋ ಮಾಡಿದ್ದು, ಅದನ್ನು ಇಂದು ಬಿಡುಗಡೆ ಮಾಡಿದೆ. ಇದರಲ್ಲಿ ಅರಣ್ಯ ಇಲಾಖೆಯ ರಾಯಭಾರಿಯಾಗಿರುವ ದರ್ಶನ್​ ಸಹ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಭಿಮಾನಿಗಳನ್ನು ರಂಜಿಸಲು ಹೊಸ ಮಾರ್ಗ ಹುಡುಕಿದ ಡೇವಿಡ್​ ವಾರ್ನರ್​..!

ಹುಲಿಗಳು ಕಾಡಿನಲ್ಲಿ ಜೀವಿಸಲು ಅವುಗಳಿಗೆ ಅಗತ್ಯವಿರುವ ವ್ಯಾಪ್ತಿ ಬಗ್ಗೆಯೂ ದರ್ಶನ್​ ಈ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ. ಜೊತೆಗೆ ಹುಲಿ ಸಂತತಿ ಉಳಿಸಲು ಮೊದಲು ಅರಣ್ಯ ಒತ್ತುವರಿ ನಿಲ್ಲಬೇಕು. ಜೊತೆಗೆ ಅರಣ್ಯವನ್ನು ಉಳಿಸಿ, ಬೆಳೆಸಬೇಕು ಎಂದು ಮನವಿ ಮಾಡಿದ್ದಾರೆ.ಈ ಹಿಂದೆಯೂ ಬಂಡೀಪುರದಲ್ಲಿ ಅಗ್ನಿಅವಘಡ ನಡೆದಾಗಲೂ ದರ್ಶನ್, ಕಾಡು ಉಳಿಸಲು ಕೈ ಜೋಡಿಸಿ ಎಂದು ಕರೆ ನೀಡಿದ್ದರು. ಅಲ್ಲದೆ ಕಾಡಿನಲ್ಲಿ ಕೆಲಸ ಮಾಡುವ ಗುತ್ತಿಗೆ ಸಿಬ್ಬಂದಿಗಳಿಗೆ ಆರ್ಥಿಕ ಸಹಾಯ ಸಹ ಮಾಡಿದ್ದಾರೆ.
Published by:Anitha E
First published: