ಕಾಡಿನ ರಕ್ಷಣೆಗೆ ಟೊಂಕ ಕಟ್ಟಿದ ಡಿಬಾಸ್​ : ಸಸಿ ನೆಡಲು ದರ್ಶನ್​ ಮನವಿ ​

ಬೆಂಕಿಗೆ ಆಹುತಿಯಾದ ಬಂಡೀಪುರದ ಕಾಡಿನಲ್ಲಿ ಪ್ರತಿಯೊಬ್ಬರು ಒಂದೊಂದು ಸಸಿ ನೀಡಿ, ಅದನ್ನು ಪೋಷಿಸಿ, ಮತ್ತೆ ಹಸಿರನ್ನಾಗಿಸಿ ಎಂದು ದರ್ಶನ್​ ಕರೆ ನೀಡಿದ್ದಾರೆ.

ದರ್ಶನ್​

ದರ್ಶನ್​

  • News18
  • Last Updated :
  • Share this:
- ಅನಿತಾ ಈ, 

ದರ್ಶನ್​ಗೆ ಕಾಡು,​ ಪ್ರಾಣಿ, ಪಕ್ಷಿ ಒಟ್ಟಾರೆ ಪರಿಸರದ ಮೇಲೆ ತುಂಬಾ ಪ್ರೀತಿ. ಹೀಗಾಗಿಯೇ ಅರಣ್ಯ ಅಭಿವೃದ್ದಿ, ವನ್ಯಜೀವಿಗಳ ರಕ್ಷಣೆ, ಅರಣ್ಯ ರಕ್ಷಕರು ಹಾಗೂ ಅರಣ್ಯ ಇಲಾಖೆಯಲ್ಲಿ ಗುತ್ತಿಗೆ ನೌಕರರಾಗಿ ಕೆಲಸ ಮಾಡುವವರ ಕಲ್ಯಾಣಕ್ಕಾಗಿ ಸದಾ ಶ್ರಮಿಸುತ್ತಾರೆ ದರ್ಶನ್​.

ಇದನ್ನೂ ಓದಿ: Amar Trailer: ಅಭಿಷೇಕ್ ಜತೆ ದರ್ಶನ್​ ತೆರೆ ಹಂಚಿಕೊಂಡಿರುವ 'ಅಮರ್​' ಸಿನಿಮಾದ ಟ್ರೈಲರ್​ ಬಿಡುಗಡೆಗೆ ಕ್ಷಣ ಗಣನೆ ಆರಂಭ

ಕಳೆದ ಶುಕ್ರವಾರ ಬಂಡೀಪುರ ಅಭಯಾರಣ್ಯಕ್ಕೆ ಬೆಂಕಿ ಬಿದ್ದು, ವನ್ಯಜೀವಿಗಳು ಸಂಕಷ್ಟಕ್ಕೆ ಒಳಗಾಗಿದ್ದವು. ಹಗಲು ರಾತ್ರಿ ಎನ್ನದೆ ಹರಡುತ್ತಿದ್ದ ಬೆಂಕಿಯ ಕೆನ್ನಾಲಿಗೆಗೆ 40 ಸಾವಿರ ಏಕರೆಗೂ ಹೆಚ್ಚು ಅರಣ್ಯ ಆಹುತಿಯಾಗಿತ್ತು.

ಈ ವಿಷಯ ತಿಳಿಯುತ್ತಿದ್ದಂತೆಯೇ ದರ್ಶನ್​ ಬೆಂಕಿ ನಂದಿಸುವ ಕೆಲಸದಲ್ಲಿ ಸಹಾಯ ಮಾಡುವಂತೆ ಅಭಿಮಾನಿಗಳಿಗೆ ಕರೆಕೊಟ್ಟರು. ಸಾಮಾಜಿಕ ಜಾಲತಾಣದಲ್ಲಿ ಅವರಿಗಿರುವ ಅಭಿಮಾನಿ ಬಳಗ ಹಾಗೂ ಬೆಂಬಲಿಗರ ಸಂಖ್ಯೆ ಬಗ್ಗೆ ಹೇಳುವಂತಿಲ್ಲ. ಹೀಗಾಗಿಯೇ ಅವರು ಟ್ವಿಟರ್​ ಹಾಗೂ ಫೇಸ್​ಬುಕ್​ ಮೂಲಕ ಸ್ವಯಂಸೇವಕರಿಗಾಗಿ ಮನವಿ ಮಾಡಿದ್ದರು.ಮೊನ್ನೆಯಷ್ಟೆ ಬೆಂಗಳೂರಿನಲ್ಲಿ ನಡೆದ 'ಪ್ರೀಮಿಯರ್​ ಪದ್ಮಿನಿ' ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ದರ್ಶನ್​ ಭಾಗವಹಿಸಿದ್ದರು. ಅಲ್ಲೂ ಸಹ ಅವರು ಬಂಡೀಪುರದಲ್ಲಿ ನಡೆದ ಬೆಂಕಿ ಅನಾಹುತ ಹಾಗೂ ಅರಣ್ಯ ರಕ್ಷಣೆ ಬಗ್ಗೆ ಮಾತನಾಡಿದ್ದಾರೆ. ಅರಣ್ಯ ರಕ್ಷಣೆ ನಮ್ಮ ಜವಾಬ್ದಾರಿ. ಕೇವಲ ಸಸಿ ನೆಟ್ಟು ಸೆಲ್ಫಿ ಹಾಕುವುದಕ್ಕಿಂತ, ನೆಟ್ಟ ಸಸಿಗೆ ನೀರು ಹಾಕಿ, ಪೋಷಿಸಿ ಪ್ರತಿ ವರ್ಷ ಅದರ ಜತೆ ಸೆಲ್ಫಿ ತೆಗೆದು ಹಂಚಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಅಲ್ಲದೆ ಬೆಂಕಿಗಾಹುತಿಯಾಗಿರುವ ಕಾಡಿನಲ್ಲಿ ಒಬ್ಬೊಬರು ಒಂದೊಂದು ಸಸಿ ನೆಡಲು ಕೈಜೋಡಿಸಿ ಎಂದು ಕರೆ ಕೊಟ್ಟಿದ್ದಾರೆ.

ಗಿಡ ನೆಟ್ಟು ವರ್ಷಕ್ಕೊಂದು ಸೆಲ್ಫಿ ಕಳಿಸಿ ಎಂದ ಡಿಬಾಸ್​ ದರ್ಶನ್ಈ ಹಿಂದೆ ದರ್ಶನ್​ ಅವರೇ ಸೆರೆ ಹಿಡಿದಿರುವ ವನ್ಯಜೀವಿಗಳ ಛಾಯಾಚಿತ್ರಗಳ ಪ್ರದರ್ಶನವನ್ನು ಮೈಸೂರಿನಲ್ಲಿ ಆಯೋಜಿಸಲಾಗಿತ್ತು. ಅದರಿಂದ ಬಂದ ಹಣವನ್ನು ವನ್ಯ ಜೀವಿಗಳ ಸಂರಕ್ಷಣೆಗೆ ಬಳಸುವುದಾಗಿ ತಿಳಿಸಿದ್ದರು.ಅದಕ್ಕೂ ಹಿಂದೆ ಅರಣ್ಯವನ್ನು ಅಭಿವೃದ್ಧಿಪಡಿಸಲು ಹಣ ಸಹಾಯ ಮಾಡಿರುವ ದರ್ಶನ್​, ಅರಣ್ಯ ಇಲಾಖೆಯಲ್ಲಿ ಗುತ್ತಿಗೆ ನೌಕರರಿಗೂ ಆರ್ಥಿಕವಾಗಿ ನೆರವಾಗಿದ್ದಾರೆ. ಇದರೊಂದಿಗೆ ಮೈಸೂರು ಮೃಗಾಲಯದಲ್ಲಿ ಕೆಲವು ವನ್ಯಜೀವಿಗಳನ್ನೂ ದತ್ತು ಪಡೆದು ಸಾಕುತ್ತಿದ್ದಾರೆ.

PHOTOS: ಜಿಮ್​ಗೆ ಹೋಗುವ ಮುನ್ನ ಕ್ಯಾಮೆರಾಗೆ ಪೋಸ್​ ಕೊಟ್ಟ ನಟಿ ಸಾರಾ ಅಲಿಖಾನ್​ರ ಕೆಲ ಚಿತ್ರಗಳು..!
First published: