DBoss Darshan: ಪಂಚೆಯುಟ್ಟ ದರ್ಶನ್​ ಲುಕ್​ಗೆ ಅಭಿಮಾನಿಗಳು ಫಿದಾ: ಕಿಚ್ಚ ಸುದೀಪ್​ ಇದ್ದ ಜಾಹೀರಾತಿನಲ್ಲೀಗ ಡಿಬಾಸ್​..!

DBoss Darshan In Add: ತಮ್ಮ ಸಿನಿಮಾಗಳ ಪ್ರಚಾರ ಹಾಗೂ ಸ್ನೇಹಿತ ಸೃಜನ್​ ಲೋಕೇಶ್​ ಅವರ ಸ್ನೇಹದ ಸಲುವಾಗಿ ಮಜಾ ಟಾಕೀಸ್​ಗೆ ಬಂದು ಹೋಗಿದ್ದರು. ಅಲ್ಲದೆ ಅರಣ್ಯ ನಾಶ, ವನ್ಯಜೀವಿಗಳ ರಕ್ಷಣೆ ಹಾಗೂ ಪರಿಸರ ಕಾಳಜಿಯ ವಿಷಯ ಬಂದಾಗ ದರ್ಶನ್​ ಹಲವಾರು ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದೂ ಇದೆ. ಇಂತಹ ನಟ ಬಹಳ ಸಮಯದ ನಂತರ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದಾರೆ. 

Anitha E | news18-kannada
Updated:March 11, 2020, 2:13 PM IST
DBoss Darshan: ಪಂಚೆಯುಟ್ಟ ದರ್ಶನ್​ ಲುಕ್​ಗೆ ಅಭಿಮಾನಿಗಳು ಫಿದಾ: ಕಿಚ್ಚ ಸುದೀಪ್​ ಇದ್ದ ಜಾಹೀರಾತಿನಲ್ಲೀಗ ಡಿಬಾಸ್​..!
ಜಾಹೀರಾತಿನಲ್ಲಿ ಸುದೀಪ್​ ಹಾಗೂ ದರ್ಶನ್​
  • Share this:
ಸ್ಯಾಂಡಲ್​ವುಡ್​ ಸುಲ್ತಾನ ದರ್ಶನ್ ಕಿರುತೆರೆಯಲ್ಲಿ ಎಸ್​ ನಾರಾಯಣ್​ ನಿರ್ದೇಶನದ 'ಅಂಬಿಕಾ' ಧಾರಾವಾಹಿಯಲ್ಲಿ ಪುಟ್ಟ ಪಾತ್ರದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು. ಇದಾದ ನಂತರ ದರ್ಶನ್​ ಕಿರುತೆರೆ ಹಾಗೂ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದು ತೀರಾ ಕಡಿಮೆ.

ತಮ್ಮ ಸಿನಿಮಾಗಳ ಪ್ರಚಾರ ಹಾಗೂ ಸ್ನೇಹಿತ ಸೃಜನ್​ ಲೋಕೇಶ್​ ಅವರ ಸ್ನೇಹದ ಸಲುವಾಗಿ 'ಮಜಾ ಟಾಕೀಸ್​'ಗೆ ಬಂದು ಹೋಗಿದ್ದರು. ಅಲ್ಲದೆ ಅರಣ್ಯ ನಾಶ, ವನ್ಯಜೀವಿಗಳ ರಕ್ಷಣೆ ಹಾಗೂ ಪರಿಸರ ಕಾಳಜಿಯ ವಿಷಯ ಬಂದಾಗ ದರ್ಶನ್​ ಹಲವಾರು ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದೂ ಇದೆ. ಇಂತಹ ನಟ ಬಹಳ ಸಮಯದ ನಂತರ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

Dboss Darshan tugudeep Roberrt Film created history
'ರಾಬರ್ಟ್' ಸಿನಿಮಾದಲ್ಲಿ ದರ್ಶನ್​


ಇದೇ ಮೊದಲ ಬಾರಿಗೆ ಪಂಚೆ ಜಾಹೀರಾತಿನಲ್ಲಿ ದರ್ಶನ್ ನಟಿಸಿದ್ದಾರೆ. ಖ್ಯಾತ ಖಾಸಗಿ ಕಂಪೆನಿಯೊಂದರ ಜಾಹೀರಾತಿನಲ್ಲಿ ದರ್ಶನ್​ ಶುದ್ಧ ಬಿಳಿ ಬಣ್ಣದ ಪಂಚೆ ಹಾಗೂ ಅಂಗಿ ತೊಟ್ಟು ಸ್ಟೆಪ್​ ಹಾಕಿದ್ದಾರೆ. ಆರಡಿ ಉದ್ದದ ಕಟೌಟ್​ನಂತಿರುವ ದಚ್ಚು ಪಂಚೆಯುಟ್ಟಿರುವ ಸ್ಟೈಲ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.ಸಿನಿಮಾದ ಟ್ರೈಲರ್​ನಂತಿರುವ ಈ ಜಾಹೀರಾತಿನಲ್ಲಿ ದೇಸಿ ಸ್ಟೈಲ್​ನಲ್ಲಿ ಕಾಣಿಸಿಕೊಂಡಿರುವ ದರ್ಶನ್​ ಅವರನ್ನು ನೋಡಿ ಅಭಿಮಾನಿಗಳು ಥ್ರಿಲ್​ ಆಗಿದ್ದಾರೆ. ಈ ಹಿಂದೆ ಇದೇ ಜಾಹೀರಾತಿನಲ್ಲಿ ಕಿಚ್ಚ ಸುದೀಪ್​ ಕಾಣಿಸಿಕೊಂಡಿದ್ದರು. ಅದಕ್ಕೂ ಮೊದಲು ಅರ್ಜುನ್​ ಸರ್ಜಾ, ಮಲಯಾಳಂ ನಟ ಜಯರಾಮ್​ ಸಹ ಈ ಜಾಹೀರಾತಿನಲ್ಲಿ ನಟಿಸಿದ್ದರು.

Dboss Darshan replaced Kichcha Sudeep in Ramraj Kannada Add
ಜಾಹೀರಾತಿನಲ್ಲಿ ಸುದೀಪ್​ ಹಾಗೂ ದರ್ಶನ್​


ಈ ಹಿಂದೆ ಕಿಚ್ಚ ಸುದೀಪ್​ ಈ ಬ್ರ್ಯಾಂಡ್​ನ ರಾಯಭಾರಿಯಾಗಿದ್ದರು. ಈಗ ಸುದೀಪ್​ ಅವರ ಜಾಗವನ್ನು ನಟ ದರ್ಶನ್​ ತುಂಬಿದ್ದಾರೆ. ಅಲ್ಲದೆ ದರ್ಶನ್​ ಈ ಜಾಹೀರಾತನ್ನು ಒಪ್ಪಿಕೊಳ್ಳಲು ಕಾರಣವೂ ಇದೆ ಎನ್ನಲಾಗುತ್ತಿದೆ. ಅದು ನೇಕಾರರಿಗೆ ಸಹಾಯವಾಗಲಿದೆ ಅನ್ನೋ ಕಾರಣಕ್ಕೆ ದಚ್ಚು ಇದಕ್ಕೆ ಓಕೆ ಮಾಡಿದ್ದಾರೆ ಎನ್ನಲಾಗುತ್ತಿದೆ.

Holi Celebration By Sunny Leone: ಗಂಡ-ಮಕ್ಕಳೊಂದಿಗೆ ಬಣ್ಣದಲ್ಲಿ ಮಿಂದೆದ್ದ ಸನ್ನಿ ಲಿಯೋನ್​..!
First published:March 11, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading