Roberrt: ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ವಿರುದ್ಧ ಗರಂ ಆದ ದರ್ಶನ್​ ಅಭಿಮಾನಿಗಳು..!

ಒಡೆಯ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿರುವ ಅರ್ಜುನ್​ ಜನ್ಯ ಅವರೇ ದರ್ಶನ್​ರ ಮುಂದಿನ ಸಿನಿಮಾ ರಾಬರ್ಟ್​ಗೂ ಸಂಗೀತ ನೀಡುತ್ತಿದ್ದಾರೆ. ಇಲ್ಲಿಯವರೆಗೆ ಬಿಡುಗಡೆಯಾಗಿರುವ ಒಡೆಯ ಚಿತ್ರದ ಹಾಡುಗಳು ಅಂದುಕೊಂಡ ಮಟ್ಟಕ್ಕೆ ಸದ್ದು ಮಾಡಲಿಲ್ಲ.

Anitha E | news18-kannada
Updated:December 11, 2019, 2:48 PM IST
Roberrt: ಸಂಗೀತ ನಿರ್ದೇಶಕ ಅರ್ಜುನ್​ ಜನ್ಯ ವಿರುದ್ಧ ಗರಂ ಆದ ದರ್ಶನ್​ ಅಭಿಮಾನಿಗಳು..!
ದರ್ಶನ್​ ಹಾಗೂ ಅರ್ಜುನ್​ ಜನ್ಯ
  • Share this:
ಸಿನಿಮಾಗಳಿಗೆ ಕತೆ ಎಷ್ಟು ಮುಖ್ಯವೋ ಹಾಡುಗಳೂ ಅಷ್ಟೇ ಮುಖ್ಯ. ಎಷ್ಟು ಸಲ ಕತೆಗಿಂತ ಹೆಚ್ಚಾಗಿ ಸಿನಿಮಾ ಹಾಡುಗಳಿಂದಲೇ ಅಂದರೆ ಮ್ಯೂಸಿಕಲ್​ ಹಿಟ್​ ಆಗಿರುವ ಉದಾಹರಣೆಗಳಿವೆ. ಇದೇ ಕಾರಣದಿಂದಲೇ ಸದ್ಯ ಡಿಬಾಸ್​ ದರ್ಶನ್​ ಅಭಿಮಾನಿಗಳು ಸಂಗೀತ ನಿರ್ದೇಶಕ ಅರ್ಜುನ್ಯ ಜನ್ಯ ವಿರುದ್ಧ ಗರಂ ಆಗಿದ್ದಾರೆ.

'ಒಡೆಯ' ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿರುವ ಅರ್ಜುನ್​ ಜನ್ಯ ಅವರೇ ದರ್ಶನ್​ರ ಮುಂದಿನ ಸಿನಿಮಾ 'ರಾಬರ್ಟ್​'ಗೂ ಸಂಗೀತ ನೀಡುತ್ತಿದ್ದಾರೆ. ಇಲ್ಲಿಯವರೆಗೆ ಬಿಡುಗಡೆಯಾಗಿರುವ 'ಒಡೆಯ' ಚಿತ್ರದ ಹಾಡುಗಳು ಅಂದುಕೊಂಡ ಮಟ್ಟಕ್ಕೆ ಸದ್ದು ಮಾಡಲಿಲ್ಲ.

Odeya Trailer
ಇದರ ನಡುವೆ ಡಿಸೆಂಬರ್ 12 ರಂದು ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ಒಡೆಯ'ನಾಗಿ ಎಂಟ್ರಿ ಕೊಡಲಿದ್ದಾರೆ.


ಯೂಟ್ಯೂಬ್​ನಲ್ಲಿ ದರ್ಶನ್​ ಸಿನಿಮಾದ ಹಾಡುಗಳಿಗೆ ಸಿಗುತ್ತಿದ್ದ ಪ್ರತಿಕ್ರಿಯೆ 'ಒಡೆಯ'ನಿಗೆ ಸಿಗುತ್ತಿಲ್ಲ. ನಿನ್ನೆಯಷ್ಟೆ 'ಮಳವಳ್ಳಿ ಮಾವನ ಮಗನೆ...' ಹಾಡು ಬಿಡುಗಡೆಯಾಗಿದೆ. ಇದೊಂದು ಪಕ್ಕಾ ಮಾಸ್​ ಸಾಂಗ್​ ಆಗಿದ್ದು, ಇದು ದಚ್ಚು ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಅಲ್ಲದೆ ಈ ಹಿಂದೆ ಬಿಡುಗಡೆಯಾಗಿರುವ ಹಾಡುಗಳು ಸಹ ತಕ್ಕ ಮಟ್ಟಿಗೆ ವೀಕ್ಷಣೆ ಪಡೆದುಕೊಂಡಿವೆ. ಇದರಿಂದಾಗಿ ದರ್ಶನ್​ ಅಭಿಮಾನಿಗಳು ಅರ್ಜುನ್​ ಜನ್ಯರ ಮೇಲೆ ಸಿಟ್ಟು ಮಾಡಿಕೊಂಡಿದ್ದಾರೆ.ಇದನ್ನೂ ಓದಿ: ಕನ್ನಡತಿ ಅನುಷ್ಕಾ ಶೆಟ್ಟಿಗೆ ಮುತ್ತಿಟ್ಟ ಆ ಇಬ್ಬರು: ಪೋಟೋ ವೈರಲ್​..!

ಅರ್ಜುನ್ಯ ಜನ್ಯ ಅವರನ್ನು 'ರಾಬರ್ಟ್​' ಸಿನಿಮಾದಿಂದ ತೆಗೆದು ಅವರ ಜಾಗಕ್ಕೆ ಹರಿಕೃಷ್ಣ ಅವರನ್ನು ತರಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಅದರಲ್ಲೂ ದರ್ಶನ್​ ಅವರ 'ಒಡೆಯ' ಚಿತ್ರದ 'ಮಳವಳ್ಳಿ ಮಾವ ಹಾಡು ...' ನಿರೀಕ್ಷಿಸಿದಷ್ಟು ಮಟ್ಟಕ್ಕೆ ಚೆನ್ನಾಗಿಲ್ಲ ಎಂದು ಬೇಸರಗೊಂಡಿದ್ದಾರೆ. ಇದೇ ಕಾರಣಕ್ಕೆ ಅರ್ಜುನ್​ ಜನ್ಯ ಅವರನ್ನು 'ರಾಬರ್ಟ್​' ಸಿನಿಮಾದಿಂದ ತೆಗೆದು ಹರಿಕೃಷ್ಣ ಅವರನ್ನು ತೆಗೆದುಕೊಳ್ಳಬೇಕು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಒತ್ತಾಯಿಸುತ್ತಿದ್ದಾರೆ.Disha Patani: ಬೋಲ್ಡ್​​ ಫೋಟೋಶೂಟ್​ನಿಂದ ಪಡ್ಡೆಗಳ ನಿದ್ದೆ ಕದ್ದ ದಿಶಾ..!
First published: December 11, 2019, 1:23 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading