Darshan: ಸ್ನೇಹಿತರೊಂದಿಗೆ ಟ್ರ್ಯಾಕ್ಟರ್​ ಹತ್ತಿ ರಸ್ತೆಗಿಳಿದ ದರ್ಶನ್​..!

ಸ್ನೇಹಿತರರೊಂದಿಗೆ ಟ್ರ್ಯಾಕ್ಟರ್​ ಹತ್ತಿದ ದರ್ಶನ್​

ಸ್ನೇಹಿತರರೊಂದಿಗೆ ಟ್ರ್ಯಾಕ್ಟರ್​ ಹತ್ತಿದ ದರ್ಶನ್​

ಕಾರುಗಳೆಂದರೆ ಸಖತ್​ ಕ್ರೇಜ್​ ಇರುವ ದರ್ಶನ್​ ಈಗ ಟ್ರ್ಯಾಕ್ಟರ್ ಹತ್ತಿ ರಸ್ತೆಗಿಳಿದಿದ್ದಾರೆ. ಅವರು ಟ್ರ್ಯಾಕ್ಟರ್​ ಓಡಿಸುವ ಫೋಟೋಗಳು ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  • Share this:

ದರ್ಶನ್​ ಅವರಿಗೆ ದುಬಾರಿ ಬೆಲೆಯ ಬೈಕ್​ ಹಾಗೂ ಕಾರುಗಳೆಂದರೆ ಸಖತ್​ ಕ್ರೇಜ್​. ಹೊಸ ಬೈಕ್​ ಅಥವಾ ಕಾರು ಖರೀದಿಸಿದ ಕೂಡಲೇ ಅವರು ಅದನ್ನು ಪೂಜೆ ಮಾಡಿಸಲು ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆಗೆದುಕೊಂಡು ಹೋಗುತ್ತಾರೆ. ಜೊತೆಗೆ ಬಿಡುವಿನ ವೇಳೆಯಲ್ಲಿ ತಮ್ಮಿಷ್ಟದ ಕಾರನ್ನು ತೆಗೆದುಕೊಂಡು ರಸ್ತೆಗಿಳಿಯುತ್ತಾರೆ. 


ಕಾರುಗಳೆಂದರೆ ಸಖತ್​ ಕ್ರೇಜ್​ ಇರುವ ದರ್ಶನ್​ ಈಗ ಟ್ರ್ಯಾಕ್ಟರ್ ಹತ್ತಿ ರಸ್ತೆಗಿಳಿದಿದ್ದಾರೆ. ಅವರು ಟ್ರ್ಯಾಕ್ಟರ್​ ಓಡಿಸುವ ಫೋಟೋಗಳು ಹಾಗೂ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.



ಇನ್ನು ದರ್ಶನ್​ ಈ ಟ್ರ್ಯಾಕ್ಟರ್​ ಹತ್ತಲೂ ಒಂದು ಕಾರಣವಿದೆ. ಅದು ಅವರು ತಮ್ಮ ತೋಟಕ್ಕೆಂದು ಹೊಸ ಟ್ರ್ಯಾಕ್ಟರ್​ ಖರೀದಿಸಿದ್ದಾರೆ. ಜೊತೆಗೆ ಸ್ನೇಹಿತರೊಂದಿಗೆ ಒಂದು ಸುತ್ತು ಹಾಕಿದ್ದಾರಂತೆ.



ದರ್ಶನ್​ ಟ್ರ್ಯಾಕ್ಟರ್​ ಹತ್ತಿ, ಸುತ್ತಲೂ ಸ್ನೇಹಿತರನ್ನು ಕೂರಿಸಿಕೊಂಡು ರಸ್ತೆಯಲ್ಲಿ ಟ್ರ್ಯಾಕ್ಟರ್​ ಓಡಿಸುತ್ತಿರುವ ವಿಡಿಯೋ ಈಗ ಅವರ ಅಭಿಮಾನಿಗಳ ಪುಟಗಳಲ್ಲಿ ವೈರಲ್​ ಆಗುತ್ತಿದೆ. ಅಭಿಮಾನಿಗಳು ಹಾಗೂ ಸ್ನೇಹಿತರ ವಿಷಯಕ್ಕೆ ಬಂದರೆ ದರ್ಶನ್​ ಯಾವಾಗಲು ಕೈಗೆಟುಕುವಂತೆಯೇ ಇರುತ್ತಾರೆ.



ಹೆಚ್ಚಾಗಿ ಮೈಸೂರಿನಲ್ಲಿರುವ ತೋಟದ ಮನೆಯಲ್ಲೇ ಕಾಲ ಕಳೆಯುವ ದರ್ಶನ್​, ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಬೆಂಗಳೂರಿನಿಂದ ಮೈಸೂರಿಗೆ ಹೋಗಿದ್ದಾರೆ. ಕೆಲ ಸಮಯದಿಂದ ಅಲ್ಲೇ ಇರುವ ದರ್ಶನ್​, ತಮ್ಮ ಸಾಕು ಪ್ರಾಣಿಗಳ ಆರೈಕೆಯಲ್ಲಿ ತೊಡಗಿದ್ದಾರೆ.


ರಾಜಕುಮಾರ ಖ್ಯಾತಿಯ ನಟ ಶರತ್​ ಕುಮಾರ್ ಅವರ ಫೋಟೋಗಳು




ದರ್ಶನ್​ ಅಭಿನಯದ ಮದಕರಿ ನಾಯಕ ಚಿತ್ರದ ಚಿತ್ರೀಕರಣ ಮುಂದಕ್ಕೆ ಹೋಗಿದೆ. ಇನ್ನು ರಿಲೀಸ್​ಗೆ ರೆಡಿಯಾಗಿರುವ ರಾಬರ್ಟ್​ ಚಿತ್ರತಂಡ ಲಾಕ್​ಡೌನ್​ನಿಂದಾಗಿ ಬಿಡುಗಡೆ ದಿನಾಂಕವನ್ನು ಮುಂದಿನ ವರ್ಷಕ್ಕೆ ಮುಂದೂಡಿದೆಯಂತೆ.


ಇದನ್ನೂ ಓದಿ: Jaggesh: ಅಭಿಮಾನಿಗಳಿಗೆ ತಮ್ಮ ನಂದಗೋಕುಲವನ್ನು ಪರಿಚಯಿಸಿದ ಜಗ್ಗೇಶ್​..!

Published by:Anitha E
First published: