Darshan: ಪುಟ್ಟ ಪೋರಿಯೊಂದಿಗೆ ಡಿಬಾಸ್ ಸ್ಟೆಪ್​​: ದರ್ಶನ್​ರ​ ಕತಾರ್​ ವಿಡಿಯೋ ವೈರಲ್​

DBoss Darshan Dance: ಕಳೆದ ವರ್ಷ ದರ್ಶನ್​ ಕತಾರ್​ಗೆ ಹೋಗಿದ್ದು, ಅಲ್ಲಿ ನಡೆದ ಡಿನ್ನರ್​ ಪಾರ್ಟಿಯಲ್ಲಿ ದಚ್ಚು ಅವರ ಸಿನಿಮಾದ ಹಾಡಿಗೆ ಡಾನ್ಸ್​ ಮಾಡಿದ್ದರು. ಆ ವಿಡಿಯೋ ಈಗ ವೈರಲ್​ ಆಗುತ್ತಿದೆ. 

Anitha E | news18-kannada
Updated:October 9, 2019, 1:25 PM IST
Darshan: ಪುಟ್ಟ ಪೋರಿಯೊಂದಿಗೆ ಡಿಬಾಸ್ ಸ್ಟೆಪ್​​: ದರ್ಶನ್​ರ​ ಕತಾರ್​ ವಿಡಿಯೋ ವೈರಲ್​
DBoss Darshan Dance: ಕಳೆದ ವರ್ಷ ದರ್ಶನ್​ ಕತಾರ್​ಗೆ ಹೋಗಿದ್ದು, ಅಲ್ಲಿ ನಡೆದ ಡಿನ್ನರ್​ ಪಾರ್ಟಿಯಲ್ಲಿ ದಚ್ಚು ಅವರ ಸಿನಿಮಾದ ಹಾಡಿಗೆ ಡಾನ್ಸ್​ ಮಾಡಿದ್ದರು. ಆ ವಿಡಿಯೋ ಈಗ ವೈರಲ್​ ಆಗುತ್ತಿದೆ. 
  • Share this:
ದರ್ಶನ್​ ಅಭಿಮಾನಿಗಳು ಎಂದರೆ ಜೀವ ಬಿಡುವ ನಟ. ತಮ್ಮ ಫ್ಯಾನ್ಸ್​ಗಳೇ ಸೆಲೆಬ್ರಿಟಿಗಳು ಎಂದು ಹೇಳುವ ಮೂಲಕ ಅವರು ಅಭಿಮಾನಿಗಳಿಗೆ ತಮ್ಮ ಹೃದಯದಲ್ಲಿ ಕೊಟ್ಟಿರುವ ಸ್ಥಾನವನ್ನು ತೋರಿಸಿದ್ದರು.

ಅವರಿಗೆ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ನಾನಾ ಭಾಗಗಳಲ್ಲಿಯೂ ಅಭಿಮಾನಿಗಳಿದ್ದಾರೆ. ಅವರನ್ನು ಏನೇ ಕಾರ್ಯಕ್ರಮ ಅಥವಾ ಯಾವುದೇ ದೊಡ್ಡ ಸಮಾರಂಭಗಳಾದರೂ ತಾವಿರು ದೇಶಕ್ಕೆ ಆಹ್ವಾನಿಸುತ್ತಾರೆ.

ಕಳೆದ ವರ್ಷ ದರ್ಶನ್​ ಕತಾರ್​ಗೆ ಹೋಗಿದ್ದು, ಅಲ್ಲಿ ನಡೆದ ಡಿನ್ನರ್​ ಪಾರ್ಟಿಯಲ್ಲಿ ದಚ್ಚು ಅವರ ಸಿನಿಮಾದ ಹಾಡಿಗೆ ಡಾನ್ಸ್​ ಮಾಡಿದ್ದರು. ಆ ವಿಡಿಯೋ ಈಗ ವೈರಲ್​ ಆಗುತ್ತಿದೆ.ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಮಾನ್ಯವಾಗಿ ಸಿನಿಮಾ ಕಾರ್ಯಕ್ರಮಗಳಲ್ಲಿ ಅಥವಾ ಯಾವುದೇ ಸಾರ್ವಜನಿಕ ಸಮಾರಂಭಗಳಲ್ಲಿ ಮಾತನಾಡುವುದು ಕಡಿಮೆ. ಇಂತಹ ದಚ್ಚು ಕಳೆದ ವರ್ಷ ಕತಾರ್​ನಲ್ಲಿ ವ್ಯಾಸರಾಜ್ ಮತ್ತು ಜ್ಯೋತಿ ವ್ಯಾಸರಾಜ್ ಅವರ ಲೈವ್ ಸಿಂಗಿಂಗ್‍ಗೆ ಪುಟಾಣಿ ಹುಡುಗಿಯ ಜೊತೆ ಸ್ಟೆಪ್​ ಹಾಕಿದ್ದರು. ಚಿಕ್ಕ ಹುಡುಗಿಯ ಜೊತೆ ತಮ್ಮದೇ 'ಚಕ್ರವರ್ತಿ' ಚಿತ್ರದ ' ಒಂದು ಮಳೆಬಿಲ್ಲು...' ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

ಈ ಮಗು ಜೊತೆ ದರ್ಶನ್​ ಹೆಜ್ಜೆ ಹಾಕಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ದಚ್ಚು ಅಭಿಮಾನಿಗಳ ಪುಟಗಳಲ್ಲಿ ಶೇರ್​ ಆಗುತ್ತಿದೆ.ಈ ಹಿಂದೆ ಮರಾಠಿ ಹಾಡಿಗೆ ಖಾಸಗಿ ಪಾರ್ಟಿಯಲ್ಲಿ ದರ್ಶನ್​ ಹೆಜ್ಜೆ ಹಾಕಿದ್ದ ವಿಡಿಯೋ ವೈರಲ್​ ಆಗಿತ್ತು.ಅಭಿಮಾನಿಗಳ ದಾಸ ದರ್ಶನ್​ ಸದ್ಯ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಒಡೆಯ' ಹಾಗೂ 'ರಾಬರ್ಟ್​'. ದಸರಾ ಹಬ್ಬದ ಅಂಗವಾಗಿ 'ಒಡೆಯ' ಚಿತ್ರದ ಮೋಷನ್​ ಪೋಸ್ಟರ್ ಬಿಡುಗಡೆಯಾಗಬೇಕಿತ್ತು. ಆದರೆ ತಾಂತ್ರಿಕ ಕಾರಣಗಳಿಂದಾಗಿ ಅದನ್ನು ಮುಂದೂಡಲಾಯಿತು.

 

Akanksha Singh: ಮಾಲ್ಡೀವ್ಸ್​ನಲ್ಲಿ ಮುತ್ತಿನ ಮಳೆ ಸುರಿಸುತ್ತಿದ್ದಾರೆ ಪೈಲ್ವಾನ್​ ಬೆಡಗಿ ಆಕಾಂಕ್ಷಾ ಸಿಂಗ್​..!


 
First published:October 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading