Darshan-Vijay: ಸಂಚಾರಿ ವಿಜಯ್ ಮೂಲಕ ವಿಜಯ ಸೇತುಪತಿಗೆ ಟಕ್ಕರ್ ಕೊಟ್ಟಿದ್ದ ಡಿಬಾಸ್ ದರ್ಶನ್!

ದರ್ಶನ್-ಸಂಚಾರಿ ವಿಜಯ್, ವಿಜಯ ಸೇತುಪತಿ

ದರ್ಶನ್-ಸಂಚಾರಿ ವಿಜಯ್, ವಿಜಯ ಸೇತುಪತಿ

ಪರಭಾಷೆಯಲ್ಲಿ ಬಂದಿದ್ದೆಲ್ಲಾ ಸೂಪರ್​ ಎನ್ನುವ ಮೊದಲ ಕನ್ನಡ ಸಿನಿಮಾ ನೋಡ್ರಯ್ಯ ಎಂದು ಗದರಿದ್ದರು ಸ್ಯಾಂಡಲ್​ವುಡ್​ ಸಾರತಿ.

  • Share this:

ಕನ್ನಡ ಚಿತ್ರರಂಗಕ್ಕೆ ರಾಷ್ಟ್ರ ಪ್ರಶಸ್ತಿ ತಂದು ಕೊಟ್ಟಿದ್ದ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್​​ ರಸ್ತೆ ಅಪಘಾತಕ್ಕೆ ಬಲಿಯಾಗಿದ್ದಾರೆ. ಅವನಲ್ಲ ಅವಳು ಸಿನಿಮಾ ಮೂಲಕ ನಟ ಸಂಚಾರಿ ವಿಜಯ್​​ ಭಾರತ ಚಿತ್ರತಂಡದ ಗಮನ ಸೆಳೆದಿದ್ದರು. ಅವಕಾಶಗಳಿಗಾಗಿ ಅಲೆದಾಡಿದ್ದ ಸಂಚಾರಿ ವಿಜಯ್​​​​​​​​ರನ್ನು ಅವನಲ್ಲ ಅವಳು ಎಲ್ಲರ ಮನೆ-ಮನ ತಲುಪುವಂತೆ ಮಾಡಿತ್ತು. ಸ್ಯಾಂಡಲ್​ವುಡ್​ ಕೂಡ ಸಂಚಾರಿ ವಿಜಯ್​​ ಅವರ​ ಅಮೋಘ ನಟನೆಗೆ ಬಹುಪರಾಕ್​ ಕೂಗಿತ್ತು. ಪುನೀತ್​​, ಸುದೀಪ್​​, ದರ್ಶನ್​ ಸೇರಿದಂತೆ ಹಲವು ನಟರು ಸಂಚಾರಿ ವಿಜಯ್​ರನ್ನು ಕೊಂಡಾಡಿದ್ದರು. ಡಿಬಾಸ್​ ದರ್ಶನ್​​ ಕೂಡ ಸಿನಿಮಾವೊಂದರ ಸುದ್ದಿಗೋಷ್ಠಿ ಸಮಯದಲ್ಲಿ ಸಂಚಾರಿ ವಿಜಯ್​​ರನ್ನು ಮೆಚ್ಚಿ ಮಾತನಾಡಿದ್ದರು. ಜೊತೆಗೆ ಪರಭಾಷಿಗರಿಗೆ ತಮ್ಮದೇ ಶೈಲಿಯಲ್ಲಿ ಟಾಂಗ್​ ಕೊಟ್ಟಿದ್ದರು.


2019ರಲ್ಲಿ ತಮಿಳು ಸಿನಿಮಾ ಸೂಪರ್​ ಡಿಲೆಕ್ಸ್​​​ ಬಿಡುಗಡೆಗೊಂಡಿತ್ತು. ಸಿನಿಮಾದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಪಾತ್ರದಲ್ಲಿ ತಮಿಳು ನಟ ವಿಜಯ್​ ಸೇತುಪತಿ ಕಾಣಿಸಿಕೊಂಡಿದ್ದರು. ಸ್ಟಾರ್​ ನಟ ಸೀರೆಯುಟ್ಟು ಅಭಿನಯಿಸಿದ್ದನ್ನು ಕಂಡು ದಕ್ಷಿಣ ಭಾರತ ಚಿತ್ರತಂಡ ಅಚ್ಚರಿಯ ಜೊತೆಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿತ್ತು. ಕನ್ನಡದ ಮಾಧ್ಯಮಗಳೂ ವಿಜಯ್​ ಸೇತುಪತಿ ನಟನೆಯನ್ನು ಕೊಂಡಾಡಿದ್ದವು. ಇವುಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದ ದರ್ಶನ್​​ ಸುದ್ದಿಗೋಷ್ಠಿಯಲ್ಲಿ ತಿರುಗೇಟು ಕೊಟ್ಟಿದ್ದರು.


ಅವಱರೋ ತಮಿಳು ನಟನನ್ನು ಹೊಗಳಿ ಅಟ್ಟಕ್ಕೇರಿಸುತ್ತಿದ್ದೀರಲ್ವಾ ನಮ್ಮ ಕನ್ನಡದ ನಟ ಸಂಚಾರಿ ವಿಜಯ್​ ಅದೇ ರೀತಿಯ ಪಾತ್ರ ಮಾಡಿಲ್ವಾ? ಸೀರೆಯುಟ್ಟು ನಟಿಸಲೇ ಇಲ್ವಾ? ಅದಕ್ಕಾಗಿ ರಾಷ್ಟ್ರ ಪ್ರಶಸ್ತಿಯನ್ನು ತರಲಿಲ್ವಾ? ನಮ್ಮವರನ್ನು ಮೊದಲು ಬೆಳೆಸೋಣ ನಂತರ ಬೇರೆ ಭಾಷಿಗರನ್ನು ಹೊಗಳೋಣ ಎಂದು ಕಡ್ಡಿ ತುಂಡಾಗುವಂತೆ ನೇರಾನೇರ ಹೇಳಿ ಬಿಟ್ಟಿದ್ದರು. ರಾಷ್ಟ್ರ ಪ್ರಶಸ್ತಿ ಪಡೆದರೂ ಅವಕಾಶಗಳಿಗೆ ಎದುರು ನೋಡುತ್ತಿದ್ದ ಸಂಚಾರಿ ವಿಜಯ್​​ರನ್ನು ಉಲ್ಲೇಖಿಸಿ ದರ್ಶನ್​ ಅಂದು ದೊಡ್ಡತನ ಮೆರೆದಿದ್ದರು. ಪರಭಾಷೆಯಲ್ಲಿ ಬಂದಿದ್ದೆಲ್ಲಾ ಸೂಪರ್​ ಎನ್ನುವ ಮೊದಲ ಕನ್ನಡ ಸಿನಿಮಾ ನೋಡ್ರಯ್ಯ ಎಂದು ಗದರಿದ್ದರು ಸ್ಯಾಂಡಲ್​ವುಡ್​ ಸಾರತಿ.


ಇದನ್ನೂ ಓದಿ: Sanchari Vijay Mistake: ಕೊನೆ ಕ್ಷಣದಲ್ಲಿ ಸಂಚಾರಿ ವಿಜಯ್ ಅದೊಂದು ತಪ್ಪು ಮಾಡದಿದ್ದರೆ ಅನಾಹುತ ತಪ್ಪುತ್ತಿತ್ತು!


ದರ್ಶನ್​ ಹೇಳಿಕೆ ಬಳಿಕ ಅದೆಷ್ಟೋ ಕನ್ನಡ ಸಿನಿಮಾ ಪ್ರೇಕ್ಷಕರು ಸಂಚಾರಿ ವಿಜಯ್​ರತ್ತ ನೋಟ ನೆಟ್ಟಿದ್ದರು. ಹೌದಲ್ಲ ತೃತೀಯ ಲಿಂಗಿ ಪಾತ್ರವನ್ನು ತಮಿಳಿನ ಸೂಪರ್​ ಡಿಲೆಕ್ಸ್​ ಸಿನಿಮಾಗೂ ಮೊದಲೇ ಕನ್ನಡದ ನಟ ಮಾಡಿ ರಾಷ್ಟ್ರಪ್ರಶಸ್ತಿ ಗೆದ್ದಿದ್ದಾರೆಂಬುವುದು ಬಹುತೇಕರಿಗೆ ಮನವರಿಕೆಯಾಗಿತ್ತು. ಆಗ ಭಾರೀ ಸಂಖ್ಯೆಯಲ್ಲಿ ಜನ ಅವನಲ್ಲ ಅವಳು ಸಿನಿಮಾ ನೋಡಲು OTT, ಯೂಟ್ಯೂಬ್​ನಲ್ಲಿ ತಡಕಾಡಿದ್ದರು. ನಟರಕ್ಷಾಸ ಎನಿಸಿಕೊಂಡಿರುವ ವಿಜಯ್​ ಸೇತುಪತಿ ಮಟ್ಟಕ್ಕೆ ಬಹುಭಾಷಾ ನಟನಾಗಿ ಸಂಚಾರಿ ವಿಜಯ್​ ಬೆಳೆಯುತ್ತಾರೆ ಎಂದು ಸಿನಿ ಪಂಡಿತರು ಭವಿಷ್ಯ ನುಡಿದಿದ್ದರು.


ಎಷ್ಟೇ ಪ್ರತಿಮೆ, ಮನ್ನಣೆ, ಪ್ರಶಸ್ತಿಗಳಿದ್ದರೂ ನಿಧಿ ಅವೆಲ್ಲವನ್ನೂ ಮೀರಿ ಬಿಡುತ್ತೆ. ಕೊರೊನಾ ಕಷ್ಟ ಕಾಲದಲ್ಲಿ ನೊಂದವರಿಗೆ ಸಹಾಯ ಮಾಡುವ ಮೂಲಕ ಗಮನ ಸೆಳೆದಿದ್ದ ನಟ ಸಂಚಾರಿ ವಿಜಯ್​​​ ಇಂದು ಸಾವಿನ ಮನೆ ಸೇರಿಬಿಟ್ಟಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಸಾಧನೆ ಮಾಡಿದ ನಟ ಮಂಗಳವಾರ ಪಂಚಭೂತಗಳಲ್ಲಿ ಲೀನವಾಗಲಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಕೋರುವುದೊಂದೇ ಚಿತ್ರರಂಗ ಸೇರಿದಂತೆ ಅಭಿಮಾನಿಗಳ ಮುಂದಿರುವ ಆಯ್ಕೆ.

Published by:Kavya V
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು