ರಾಬರ್ಟ್ ಸಿನಿಮಾ ಬಿಡುಗಡೆ ದಿನಾಂಕ ನಿಗದಿ: ನಿರ್ದೇಶಕರು ಅದೇ ತಿಂಗಳು ರಿಲೀಸ್ ಮಾಡುತ್ತಿರೋದು ಯಾಕೆ?

Roberrt Release Date: ಈಗ ಇಂತಹ ಲಕ್ಕಿ ತಿಂಗಳಿನಲ್ಲೇ ಅದೃಷ್ಟವನ್ನು ಅರಸಿ ಬರುತ್ತಿದ್ದಾನೆ ರಾಬರ್ಟ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಈ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಕಳೆದ ಏಪ್ರಿಲ್ ನಲ್ಲಿಯೇ ರಿಲೀಸ್ ಆಗಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಮುಂದಕ್ಕೆ ಹೋಗುವಂತಾಗಿತ್ತು.

ನಟ ದರ್ಶನ್​

ನಟ ದರ್ಶನ್​

  • Share this:
ಡಿಸೆಂಬರ್ ಕನ್ನಡ ಚಿತ್ರರಂಗದ ಪಾಲಿನ ಅದೃಷ್ಟದ ತಿಂಗಳು. ವರ್ಷದ ಕೊನೆಯ ತಿಂಗಳು ಯಾವಾಗಲೂ ಚಂದನವನಕ್ಕೆ ಅದೃಷ್ಟ ಹೊತ್ತು ಬರುತ್ತೆ‌‌. ಅದರಲ್ಲೂ ಡಿಸೆಂಬರ್ ತಿಂಗಳ ಕೊನೆಯ ಎರಡು ವಾರಗಳಲ್ಲಿ ಸಿನಿಮಾ ರಿಲೀಸ್ ಆದರಂತೂ ಆ ಸಿನಿಮಾ ಇಂಡಸ್ಟ್ರಿ ಹಿಟ್ ಅನ್ನೋದು ಅಲಿಖಿತ ನಿಯಮವಾಗಿದೆ‌.‌ ಇಂತಹ ಸಾಕಷ್ಟು ನಿದರ್ಶನಗಳು ನಮ್ಮ ಕಣ್ಣಮುಂದಿವೆ. ಕನ್ನಡ ಚಿತ್ರರಂಗಕ್ಕೆ ಹೊಸ ಹೊಳಪು ಕೊಟ್ಟ ‘ಮುಂಗಾರು ಮಳೆ’ ಸಿನಿಮಾ ರಿಲೀಸ್ ಆಗಿದ್ದು ಇದೇ ಡಿಸೆಂಬರ್ ನಲ್ಲಿ‌. ಹಾಗೆಯೇ ಯಶ್ ಕೆರಿಯರ್ ಗೆ ಬೂಸ್ಟ್ ಕೊಟ್ಟ ‘ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ’ ಸಿನಿಮಾ ಸಹ ಡಿಸೆಂಬರ್ ನಲ್ಲಿಯೇ ಬಿಡುಗಡೆಯಾಗಿದ್ದು, ಅಷ್ಟೇ ಏಕೆ? ಕನ್ನಡ ಚಿತ್ರರಂಗವನ್ನ ಇನ್ನೊಂದು ಮಟ್ಟಕ್ಕೆ ಕೊಂಡೊಯ್ದಾ ‘ಕೆಜಿಎಫ್’ ಸಿನಿಮಾ ರಿಲೀಸ್ ಸಹ ಡಿಸೆಂಬರ್ ನಲ್ಲೇ ಆಗಿತ್ತು ಅನ್ನೋದು ಈ ತಿಂಗಳು ಯಾವ ಮಟ್ಟಿಗೆ ಲಕ್ಕಿ ಅನ್ನೋದನ್ನ ಸಾರುತ್ತದೆ.

ಈಗ ಇಂತಹ ಲಕ್ಕಿ ತಿಂಗಳಿನಲ್ಲೇ ಅದೃಷ್ಟವನ್ನು ಅರಸಿ ಬರುತ್ತಿದ್ದಾನೆ ರಾಬರ್ಟ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಈ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾ ಕಳೆದ ಏಪ್ರಿಲ್ ನಲ್ಲಿಯೇ ರಿಲೀಸ್ ಆಗಬೇಕಿತ್ತು. ಆದರೆ ಕೋವಿಡ್ ಕಾರಣದಿಂದ ಮುಂದಕ್ಕೆ ಹೋಗುವಂತಾಗಿತ್ತು.

ಕೊನೆಗೂ ರಾಬರ್ಟ್ ಸಿನಿಮಾ ರಿಲೀಸ್ ಗೆ ಸಕಾಲ ಒದಗಿಬಂದಿದೆ. ಡಿಸೆಂಬರ್ ಎಂಡ್ ನಲ್ಲಿ ಈ ಬಹು ನಿರೀಕ್ಷಿತ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಕೊರೋನಾ ಕಾರಣದಿಂದ ಥಿಯೇಟರ್ ಗೆ ಬರೋಕೆ ಹಿಂಜರಿಯುತ್ತಿರುವ ಪ್ರೇಕ್ಷಕರನ್ನ ಮತ್ತೆ ಥಿಯೇಟರ್ ಗೆ ಸೆಳೆಯೋ ಕೆಪಾಸಿಟಿ ಇರೋ ಸಿನಿಮಾ ರಾಬರ್ಟ್ ಎಂಬ ಮಾತು ಈಗಾಗಲೇ ಹಬ್ಬಿದ್ದು, ನಿರೀಕ್ಷೆಯಂತೆಯೆ ಬಾಕ್ಸಾಫಿಸ್ ಚಿಂದಿ ಉಡಾಯಿಸಿ, ಸ್ಯಾಂಡಲ್ ವುಡ್ ನಲ್ಲಿ ಇತಿಹಾಸ ಬರೆಯುತ್ತಾ ಕಾದು ನೋಡಬೇಕು.

Amazon Offers: ಅಮೆಜಾನ್​ ಗ್ರೇಟ್​ ಇಂಡಿಯನ್​ ಸೇಲ್​ನಲ್ಲಿ ಈ ಉತ್ಪನ್ನಗಳ ಮೇಲೆ ಶೇ.80ರಷ್ಟು ಡಿಸ್ಕೌಂಟ್​!
Published by:Harshith AS
First published: