ಪ್ರಧಾನಿ ಮೋದಿ, ಮುಖ್ಯಮಂತ್ರಿ ಶ್ಲಾಫಿಸಿದ ರೈತನ ಕುರಿತು ಸಿದ್ಧವಾಗುತ್ತಿದೆ ಸಾಕ್ಷ್ಯಚಿತ್ರ

ನಿರ್ದೇಶಕ ದಯಾಳ್​ ಪದ್ಮನಾಭನ್​​ ಅವರು ರೈತ ಕಾಮೇಗೌಡರ ಕುರಿತಾಗಿ ಸಾಕ್ಷ್ಯಚಿತ್ರ ಮಾಡುತ್ತಿದ್ದಾರೆ. ‘ದಿ ಗುಡ್​​​ ಶೆಪರ್ಡ್’​ ಟೈಟಲ್​ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

news18-kannada
Updated:June 30, 2020, 10:24 PM IST
ಪ್ರಧಾನಿ ಮೋದಿ, ಮುಖ್ಯಮಂತ್ರಿ ಶ್ಲಾಫಿಸಿದ ರೈತನ ಕುರಿತು ಸಿದ್ಧವಾಗುತ್ತಿದೆ ಸಾಕ್ಷ್ಯಚಿತ್ರ
ದಿ ಗುಡ್​ ಶೆಪರ್ಡ್
  • Share this:
ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ‘ಮನ್​ ಕಿ ಬಾತ್’​ ಕಾರ್ಯಕ್ರಮದಲ್ಲಿ ಮಂಡ್ಯದ ರೈತ ಕಾಮೇಗೌಡರ ಬಗ್ಗೆ ಮಾತನಾಡಿದ್ದರು. ಅವರ ಸಾಧನೆಯನ್ನು ಗಮನಿಸಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದೆ ಸುಮಲತಾ ಅಂಬರೀಶ್​​​​ ಪ್ರಶಂಸೆ ವ್ಯಕ್ತಪಡಿಸಿದ್ದರು. 17 ಕೆರೆಗಳನ್ನು ನಿರ್ಮಿಸಿರುವ ಕುರಿಗಾಯಿ ಕಾಮೇಗೌಡರ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಎಲ್ಲರಿಗೂ ಗೊತ್ತಾಗುವಂತೆ ಮಾಡಿದ್ದರು. ಇದೀಗ ಈ ರೈತನ ಕುರಿತು ಅವರ ಸಾಧನೆಯ ಕುರಿತು ಸಾಕ್ಷ್ಯಚಿತ್ರವೊಂದು ನಿರ್ಮಾಣವಾಗುತ್ತದೆ. 

ನಿರ್ದೇಶಕ ದಯಾಳ್​ ಪದ್ಮನಾಭನ್​​ ಅವರು ರೈತ ಕಾಮೇಗೌಡರ ಕುರಿತಾಗಿ ಸಾಕ್ಷ್ಯಚಿತ್ರ ಮಾಡುತ್ತಿದ್ದಾರೆ. ‘ದಿ ಗುಡ್​​​ ಶೆಪರ್ಡ್’​ ಟೈಟಲ್​ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅನಕ್ಷರಸ್ಥರಾಗಿರುವ ಕಾಮೇಗೌಡರು 17 ಕೆರೆಗಳನ್ನು ಹೇಗೆ ನಿರ್ಮಿಸಿದರು ಅದರ ಹಿಂದಿನ ಶ್ರಮವನ್ನು ಸಾಕ್ಷ್ಯಚಿತ್ರದ ಮೂಲಕ ತೋರಿಸಲು ದಯಾಳ್​​ ಪದ್ಮನಾಭನ್​ ಮುಂದಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ನಿರ್ದೇಶಕ ದಯಾಳ್​ ಪದ್ಮನಾಭನ್​, ‘ದಿ ಗುಡ್​ ಶೆಪರ್ಡ್’​​​​ ಸಾಕ್ಷ್ಯಚಿತ್ರದ ಶೂಟಿಂಗ್​​​ ಜುಲೈ ಮೊದಲ ವಾರದಿಂದ ಶುರುವಾಗುತ್ತದೆ. ಸುಮಾರು 20 ನಿಮಿಷಗಳಲ್ಲಿ ತೋರಿಸಲಿದ್ದೇವೆ. ಕನ್ನಡ ಮತ್ತು ಇಂಗ್ಲೀಷ್​ ಭಾಷೆಯಲ್ಲಿ ಈ ಸಾಕ್ಷ್ಯಚಿತ್ರ ಮೂಡಿ ಬರಲಿದೆ ಎಂದಿದ್ದಾರೆ.

‘ಆಧುನಿಕ ಭಗೀರಥ’ ಕಾಮೇಗೌಡರು

ಕಾಮೇಗೌಡರು ಮಂಡ್ಯದ ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ನಿವಾಸಿ. ಊರಿನಲ್ಲಿ‌ ಇವರನ್ನು ಕಲ್ಮನೆ ಕಾಮೇಗೌಡ ಎಂದೇ ಕರೆಯುತ್ತಾರೆ. ಅನಕ್ಷರಸ್ಥರಾಗಿದ್ದರೂ ಇವರು ಮಾಡಿರುವ ಕೆಲಸಕ್ಕೆ ಇಂದು ಇಡೀ ದೇಶವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ತಮ್ಮ ಗ್ರಾಮದ ಪಕ್ಕದಲ್ಲಿರುವ ಕುಂದೂರು ಬೆಟ್ಟದಲ್ಲಿ ಸುಮಾರು ‌17 ಕೆರೆಗಳನ್ನು  ಜೀವನದಲ್ಲಿ ದುಡಿದ ಸ್ವಂತ ಹಣದಲ್ಲಿ ನಿರ್ಮಿಸಿದ್ದಾರೆ.

ಕಾಮೇಗೌಡ


ಇವರು ಕೇವಲ ಕೆರೆ ಮಾತ್ರವಲ್ಲದೆ  ಬೆಟ್ಟದ ತಪ್ಪಲಿನಲ್ಲಿ  ಇದುವರೆಗೂ ಸಾವಿರಾರು ಮರಗಿಡಗಳನ್ನು ನೆಟ್ಟು ತಮ್ಮ ಪರಿಸರ ಕಾಳಜಿ ಮೆರೆದಿದ್ದಾರೆ. ತಪ್ಪಲಿನ ಬಂಡೆಗಳ ಮೇಲೆ ತಮ್ಮ ಜೀವನದ ಅನುಭವದ ಮಾತುಗಳನ್ನು ಬರೆಸಿದ್ದಾರೆ. ಇವರ ಈ ಕಾರ್ಯದಿಂದ ಇಂದಿಗೂ ಬೆಟ್ಟದ ತಪ್ಪಲು ಹಚ್ಚ ಹಸಿರಾಗಿದೆ. ಕೆರೆಗಳ ನಿರ್ಮಾಣದಿಂದ ಈ ಭಾಗದಲ್ಲಿನ ಅಂತರ್ಜಲ ವೃದ್ದಿಸಿದೆ.
First published: June 30, 2020, 10:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading