ಡಿಫರೆಂಟ್ ಆಗಿ ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಿದ ಡೇವಿಡ್ ವಾರ್ನರ್: ವಿಡಿಯೋ ನೋಡಿ

ಡೇವಿಡ್​ ವಾರ್ನರ್​ ಪುನೀತ್​ ರಾಜ್​ಕುಮಾರ್​ ಅವರ ಬೊಂಬೆ ಹೇಳುತೈತೆ ಹಾಡಿಗೆ ಫೇಸ್​ ಸ್ವಾಪ್​ ಮಾಡಿ ಪೋಸ್ಟ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ಮಾಡಿದ್ದಾರೆ. ಅಪ್ಪು ಅವರ ಮುಖಕ್ಕೆ ಇವರ ಮುಖಕ್ಕೆ ಜೋಡಿಸಿ ಎಡಿಟ್​ ಮಾಡಿ ವಿಡಿಯೋ ಪೋಸ್ಟ್​ ಮಾಡಿದ್ದಾರೆ. ಜೊತೆಗೆ ರೆಸ್ಪೆಕ್ಟ್ ಎಂದು ಬರೆದುಕೊಂಡು ಈ ವಿಡಿಯೋವನ್ನು ಶೇರ್​ ಮಾಡಿದ್ದಾರೆ.

ಪುನೀತ್​ ರಾಜ್​ಕುಮಾರ್​, ಡೇವಿಡ್​ ವಾರ್ನರ್​

ಪುನೀತ್​ ರಾಜ್​ಕುಮಾರ್​, ಡೇವಿಡ್​ ವಾರ್ನರ್​

  • Share this:
ಪವರ್​ ಸ್ಟಾರ್​ ಅಪ್ಪು(Power Star Appu) ಅವರ ನೆನಪು ನಿದ್ದೆ(Sleep)ಯಲ್ಲೂ ಬಂದರೂ ಕಣ್ಣೀರು ಸುರಿಯುತ್ತೆ. ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​​ ನಮ್ಮನೆಲ್ಲ ಬಿಟ್ಟುಹೋಗಿ ಒಂದು ತಿಂಗಳಾಗಿದೆ. ಆದರೂ ನೋವು ಕಡಿಮೆಯಾಗಿಲ್ಲ, ಅದು ಎಂದಿಗೂ ಕಡಿಮೆಯಾಗೋದಿಲ್ಲ. ಇಡೀ ಕರುನಾಡು ಮಾತ್ರ ಪ್ರತಿದಿನ ಅಪ್ಪು ಅವರನ್ನು ನೆನದು ಕೊರಗುತ್ತಿದೆ. ಅವರ ಅಭಿಮಾನಿಗಳು(Fans) ಇನ್ನೂ ಆ ಶಾಕ್(Shock)​ನಿಂದ ಹೊರಬರಲಾಗದೇ ನೋವು ತಿಂತಿದ್ದಾರೆ. ಬೇಸರದ ರಾಟೆಯೂ ಎದೆಯಲ್ಲಿ ತಿರುಗಿ... ತಿರುಗುವ ಈ ಭೂಮಿಯೇ ನಿಂತಿದೆ ಕೊರಗಿ.. ಹೌದು, ಪುನೀತ್​ ರಾಜ್​ಕುಮಾರ್(Puneeth Rajkumar)​ ಅಗಲಿಕೆಯ ನೋವು ಪ್ರತಿಯೊಂದು ಮನೆ(Every Home)ಯಲ್ಲೂ ಆವರಿಸಿದೆ. ಆ ಸತ್ಯವನ್ನು ಇನ್ನೂ ಜೀರ್ಣಿಸಿಕೊಳ್ಳು ಆಗುತ್ತಿಲ್ಲ. ಇಡೀ ಕರುನಾಡು ಶೋಕಸಾಗರದಲ್ಲಿ ಮುಳುಗಿದೆ. ಅಪ್ಪು ಸಾವಿನ ಸುದ್ದಿಯನ್ನು ಮರೆಯಲಾಗದೇ ಮರುಕಪಡುತ್ತಿದ್ದಾರೆ.  ಎಲ್ಲೆ ನೋಡು.. ಅಪ್ಪು ಗುರುತು..ಬಾಳೋದೇಗೆ ಎಲ್ಲ ಮರೆತು ಅಂತ ಅವರ ಅಭಿಮಾನಿಗಳು(Fans) ಕಣ್ಣೀರಿಡುತ್ತಿದ್ದಾರೆ.  ಆದರೂ, ಈ ಸತ್ಯವನ್ನು ಎಲ್ಲರು ಒಪ್ಪಿಕೊಳ್ಳಬೇಕಿದೆ.  ಅಪ್ಪು ಸಾವು ಅವರ ಅಭಿಮಾನಿಗಳಿಗೆ ತೀವ್ರ ನೋವು ತಂದಿದೆ.

ಪ್ರತಿದಿನ ಅಪ್ಪು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮಗಳು ನಡೆಯುತ್ತಿವೆ. ಸಿನಿಮಾ ರಂಗದವರು, ಕಿರುತೆರೆಯವರು ಹೀಗೆ ಎಲ್ಲರೂ ಅಪ್ಪುಗೆ ಶ್ರದ್ದಾಂಜಲಿ ಸಲ್ಲಿಸುತ್ತಿದ್ದಾರೆ. ಇದೀಕ , ಆಸ್ಟ್ರೇಲಿಯಾ ತಂಡದ ಡೇವಿಡ್​ ವಾರ್ನರ್(David warner​ ಕೂಡ ಅಪ್ಪುಅವರನ್ನು ನೆನೆಸಿಕೊಂಡಿದ್ದಾರೆ. ಡಿಫ್ರೆಂಟ್ ಆಗಿ ಪವರ್​ ಸ್ಟಾರ್​​ ಪುನೀತ್​ ರಾಜ್​​ಕುಮಾರ್​ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಈ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಇದನ್ನು ಓದಿ : ಅಪ್ಪು ನೆನೆದು ಮತ್ತೆ ಮಗುವಿನಂತೆ ಅತ್ತ ಶಿವಣ್ಣ: ಮರೆಯಲಾಗುತ್ತಿಲ್ಲ ಪುನೀತ್​ ರಾಜಕುಮಾರ್​ ನಗು ಮುಖವ..!

ಬೊಂಬೈ ಹೇಳುತೈತೆ ಹಾಡಿಗೆ ಫೇಸ್​ ಸ್ವಾಪ್​ ಮಾಡಿದ ವಾರ್ನರ್​​!

ಡೇವಿಡ್​ ವಾರ್ನರ್​ಗೆ ಭಾರತದ ಮೇಲೆ ಪ್ರೀತಿ ಜಾಸ್ತಿ ಎಂದು ಎಲ್ಲರಿಗೂ ಗೊತ್ತಿದೆ. ಐಪಿಎಲ್ ಆಡಲು ಬೆಂಗಳೂರಿಗೆ ಬಂದಾಗ ಅವರಿಗೆ ಬೆಂಗಳೂರಿನ ಜನ ತೋರಿಸಿದ ಪ್ರೀತಿ ತುಂಬಾ ಇಷ್ಟ. ಪ್ರತಿ ಬಾರಿ ತಮ್ಮ ಟಿಕ್​ಟಾಕ್​ ಮೂಲಕವೇ ವಾರ್ನರ್​ ರಂಜಿಸುತ್ತಿರುತ್ತಾರೆ. ಈ  ಬಾರಿಯೂ ಡೇವಿಡ್​ ವಾರ್ನರ್​ ಪುನೀತ್​ ರಾಜ್​ಕುಮಾರ್​ ಅವರ ಬೊಂಬೆ ಹೇಳುತೈತೆ ಹಾಡಿಗೆ ಫೇಸ್​ ಸ್ವಾಪ್​ ಮಾಡಿ ಪೋಸ್ಟ್​ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್​ಮಾಡಿದ್ದಾರೆ. ಅಪ್ಪು ಅವರ ಮುಖಕ್ಕೆ ಇವರ ಮುಖಕ್ಕೆ ಜೋಡಿಸಿ ಎಡಿಟ್​ ಮಾಡಿ ವಿಡಿಯೋ ಪೋಸ್ಟ್​ ಮಾಡಿದ್ದಾರೆ. ಜೊತೆಗೆ ರೆಸ್ಪೆಕ್ಟ್ ಎಂದು ಬರೆದುಕೊಂಡು ಈ ವಿಡಿಯೋವನ್ನು ಶೇರ್​ ಮಾಡಿದ್ದಾರೆ.ಕನ್ನಡದಲ್ಲೇ ಧನ್ಯವಾದ ತಿಳಿಸಿದ ನಿರ್ದೇಶಕ ಸಿಂಪಲ್​ ಸುನಿ

ಡೇವಿಡ್​ ವಾರ್ನರ್​ ಅವರ ವಿಡಿಯೋ ಕಂಡು ಅಪ್ಪು ಅಭಿಮಾನಿಗಳು ವಾರ್ನರ್​ಗೆ ಧನ್ಯವಾದ ಅರ್ಪಿಸಿದ್ದಾರೆ. ಕನ್ನಡ ಮೇಲಿರುವ ಪ್ರೀತಿ, ಅಪ್ಪು ಮೇಲಿರುವ ಗೌರವಕ್ಕೆ ಧನ್ಯವಾದ ಅಂತ ಅಪ್ಪು ಅಭಿಮಾನಿಗಳು ವಾರ್ನರ್​ ಅವರ ಪೋಸ್ಟ್​​ಗೆ ಕಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕನ್ನಡದ ನಿರ್ದೇಶಕ ಸಿಂಪಲ್​ ಸುನಿ ಕೂಡ ಡೇವಿಡ್​ ವಾರ್ನರ್​ ಅವರ ಪೋಸ್ಟ್​​ಗೆ ಕಮೆಂಟ್​ ಮಾಡಿದ್ದಾರೆ. ಹೃದಯಂತರಾಳದ ನಮನಗಳು ಎಂದು ಕನ್ನಡದಲ್ಲಿಯೇ ಸಿಂಪಲ್​ ಸುನಿ ಕಮೆಂಟ್​ ಮಾಡಿದ್ದಾರೆ.
ಇನ್ನೂ ನಾಳೆ ಅಪ್ಪು ಅವರ ವೈಲ್ಡ್​ ಲೈಫ್​ ಡಾಕ್ಯುಮೆಂಟ್ ಟೈಟಲ್ ಲಾಂಚ್​ ಆಗಲಿದೆ. ಅಪ್ಪು ಇದ್ದಾಗ ನವೆಂಬರ್​ ಒಂದರಂದು ಟೈಟಲ್ ಲಾಂಚ್​ ಮಾಡುವುದಾಗಿ ಟ್ವೀಟ್​ ಮಾಡಿದ್ದರು. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಅಪ್ಪು ನಮ್ಮ ಜೊತೆ ಇರದಿದ್ದರು, ನಮ್ಮ ಮನಸ್ಸಿನಲ್ಲಿ ಅಮರ.. ಅಜರಾಮರ...
Published by:Vasudeva M
First published: