Bahubali: ಮತ್ತೆ ಬಾಹುಬಲಿ ಅವತಾರದಲ್ಲಿ ದರ್ಶನ ಕೊಟ್ಟ ಡೇವಿಡ್​ ವಾರ್ನರ್..!​

David Warner Videos: ಟಾಲಿವುಡ್​ ಸಿನಿಮಾಗಳ ಹಾಡುಗಳಿಗೆ ಹೆಜ್ಜೆ ಹಾಕುತ್ತಾ ತೆಲುಗು ಸಿನಿ ಪ್ರಿಯರ ಮನ ಗೆದ್ದಿರುವ ಡೇವಿಡ್ ವಾರ್ನರ್​ ಅವರಿಗೆ ಬಾಹುಬಲಿ ತುಂಬಾ ಇಷ್ಟವಾದಂತಿದೆ. ಈ ಹಿಂದೆ ಪ್ರಭಾಸ್​ ಹೇಳಿದ್ದ ಡೈಲಾಗ್​ಗೆ ಲಿಪ್​ ಸಿಂಕ್ ಮಾಡಿದ್ದ ವಿಡಿಯೋ ಹಂಚಿಕೊಂಡಿದ್ದರು.

ಪ್ರಭಾಸ್​ ಹಾಗೂ ಡೇವಿಡ್​ ವಾರ್ನರ್​

ಪ್ರಭಾಸ್​ ಹಾಗೂ ಡೇವಿಡ್​ ವಾರ್ನರ್​

  • Share this:
ಕ್ರಿಕೆಟಿಗ ಡೇವಿಡ್ ವಾರ್ನರ್​ ಈಗಾಗಲೇ ತಮ್ಮ ಆಟದಿಂದ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ಅದರ ಜೊತೆಗೆ ಈಗ ಟಿಕ್ಟಾಕ್​ ವಿಡಿಯೋಗಳು ಹಾಗೂ ಇನ್​ಸ್ಟಾಗ್ರಾಂನಲ್ಲಿ ಮಾಡುವ ಸೃಜನಶೀಲ ಪೋಸ್ಟ್​ಗಳಿಂದಾಗಿ ಇವರ ಅಭಿಮಾನಿ ಬಳಗ ವ್ಯಾಪ್ತಿ ಬೆಳೆಯುತ್ತಾ ಇದೆ.

ಟಾಲಿವುಡ್​ ಸಿನಿಮಾಗಳ ಹಾಡುಗಳಿಗೆ ಹೆಜ್ಜೆ ಹಾಕುತ್ತಾ ತೆಲುಗು ಸಿನಿ ಪ್ರಿಯರ ಮನ ಗೆದ್ದಿರುವ ಡೇವಿಡ್ ವಾರ್ನರ್​ ಅವರಿಗೆ ಬಾಹುಬಲಿ ತುಂಬಾ ಇಷ್ಟವಾದಂತಿದೆ. ಈ ಹಿಂದೆ ಪ್ರಭಾಸ್​ ಹೇಳಿದ್ದ ಡೈಲಾಗ್​ಗೆ ಲಿಪ್​ ಸಿಂಕ್ ಮಾಡಿದ್ದ ವಿಡಿಯೋ ಹಂಚಿಕೊಂಡಿದ್ದರು.

  
View this post on Instagram
 

Guess the movie!! @sunrisershyd


A post shared by David Warner (@davidwarner31) on


ಈಗ ಇದೇ ಡೇವಿಡ್​ ವಾರ್ನರ್ ಮತ್ತೆ ಬಾಹುಬಲಿ ಅವತಾರದಲ್ಲಿ ದರ್ಶನ ಕೊಟ್ಟಿದ್ದಾರೆ. ಬಾಹುಬಲಿ ಪಾತ್ರದಲ್ಲಿ ನಟಿಸಿದ್ದ ಪ್ರಭಾಸ್ ಅವರ ಫೋಟೋ ಜೊತೆಗೆ ಬಾಹುಬಲಿ ಅವತಾರದಲ್ಲಿರುವ ತಮ್ಮ ಚಿತ್ರವನ್ನು ಸೇರಿಸಿ ಪೋಸ್ಟ್ ಮಾಡಿದ್ದಾರೆ. 
View this post on Instagram
 

Who’s costume do you prefer? 😂😂 @baahubalimovie #bahubali #prabhas #funny #fun


A post shared by David Warner (@davidwarner31) on


ತಾವೇ ಸಿದ್ಧಪಡಿಸಿದ ಬಾಹುಬಲಿ ಕಾಸ್ಟ್ಯೂಮ್​ ತೊಟ್ಟ ಡೇವಿಡ್​ ವಾರ್ನರ್​ ನಿಮಗೆ ಯಾರ ಡ್ರೆಸ್​ ಇಷ್ಟ ಎಂದು ಪ್ರಶ್ನಿಸಿದ್ದಾರೆ. ಡೇವಿಡ್​ ಅವರ ಪೋಸ್ಟ್​ಗೆ ನೆಟ್ಟಿಗರು ನಾನಾ ರೀತಿಯ ಕಮೆಂಟ್​ ಮಾಡುತ್ತಿದ್ದಾರೆ.

Nikhil-Revathi: ಬಿಡದಿಯ ತೋಟದಲ್ಲಿ ನಿಖಿಲ್​-ರೇವತಿ: ಮತ್ತೆ ಕವಿಯಾದ ಯುವರಾಜ..!

First published: