Mahesh Babu: ಮೈಂಡ್ ಬ್ಲಾಕ್​ ಎನ್ನುತ್ತಲೇ ಪ್ರಿನ್ಸ್​ ಮಹೇಶ್ ಬಾಬುಗೆ ಚಾಲೆಂಜ್​ ಕೊಟ್ಟ ಡೇವಿಡ್​ ವಾರ್ನರ್​..!

David Warner Magicbat Challenge: ಲಾಕ್​ಡೌನ್​ನಿಂದಾಗಿ ಮಕ್ಕಳು ಹಾಗೂ ಹೆಂಡತಿ ಜೊತೆ ಮನೆಯಲ್ಲಿರುವ ಡೇವಿಡ್​ ವಾರ್ನರ್​ ಸಾಕಷ್ಟು ಟಿಕ್​ಟಾಕ್ ವಿಡಿಯೋಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ಅವರು ಟಾಲಿವುಡ್​ ಸಿನಿಮಾಗಳ ಹಾಡುಗಳಿಗೆ ಹೆಜ್ಜೆ ಹಾಕುತ್ತಿರುವ ವಿಡಿಯೋಗಳು ವೈರಲ್​ ಆಗುತ್ತಿವೆ. ಇದರಿಂದಾಗಿ ಅವರಿಗೆ ಟಾಲಿವುಡ್​ ಸಿನಿ ಪ್ರಿಯರೂ ಫಿದಾ ಆಗಿದ್ದಾರೆ.  

ಡೇವಿಡ್ ವಾರ್ನರ್​ ಹಾಗೂ ಮಹೇಶ್​ಬು ಬಾ

ಡೇವಿಡ್ ವಾರ್ನರ್​ ಹಾಗೂ ಮಹೇಶ್​ಬು ಬಾ

  • Share this:
ಕ್ರಿಕೆಟಿಗ ಡೇವಿಡ್​ ವಾರ್ನರ್​ಗೆ ಈಗಾಗಲೇ ದೊಡ್ಡ ಅಭಿಮಾನಿ ಬಳಗವೇ ಇದೆ. ಅದರ ಜೊತೆಗೆ ಅವರು ಟಿಕ್​ಟಾಕ್​ ವಿಡಿಯೋಗಳಿಂದ ಮತ್ತಷ್ಟು ಮಂದಿ ಅವರನ್ನು ಇಷ್ಟಪಡಲಾರಂಭಿಸಿದ್ದಾರೆ. 

ಲಾಕ್​ಡೌನ್​ನಿಂದಾಗಿ ಮಕ್ಕಳು ಹಾಗೂ ಹೆಂಡತಿ ಜೊತೆ ಮನೆಯಲ್ಲಿರುವ ಡೇವಿಡ್​ ವಾರ್ನರ್​ ಸಾಕಷ್ಟು ಟಿಕ್​ಟಾಕ್ ವಿಡಿಯೋಗಳನ್ನು ಮಾಡುತ್ತಿದ್ದಾರೆ. ಅದರಲ್ಲೂ ಅವರು ಟಾಲಿವುಡ್​ ಸಿನಿಮಾಗಳ ಹಾಡುಗಳಿಗೆ ಹೆಜ್ಜೆ ಹಾಕುತ್ತಿರುವ ವಿಡಿಯೋಗಳು ವೈರಲ್​ ಆಗುತ್ತಿವೆ. ಇದರಿಂದಾಗಿ ಅವರಿಗೆ ಟಾಲಿವುಡ್​ ಸಿನಿ ಪ್ರಿಯರೂ ಫಿದಾ ಆಗಿದ್ದಾರೆ. 
View this post on Instagram
 

He and she are back again 😂😂 @candywarner1 thoughts?? What’s the song?? #challengeaccepted #next #family #fun @alluarjunonline


A post shared by David Warner (@davidwarner31) on


ಇತ್ತೀಚೆಗಷ್ಟೆ ಜೂನಿಯರ್​ ಎನ್​ಟಿಆರ್​ ಅವರ ಹುಟ್ಟುಹಬ್ಬಕ್ಕೂ ಜನತಾ ಗ್ಯಾರೇಜ್​ ಸಿನಿಮಾದ ಹಾಡಿಗೆ ಸ್ಟೆಪ್​ ಹಾಕುವ ಮೂಲಕ ವಿಶ್ ಮಾಡಿದ್ದರು. ಈ ಹಿಂದೆಯೂ ಅಲಾ ವೈಕುಂಠಪುರಂಲೋ ಸಿನಿಮಾದ ಹಾಡುಗಳಾದ ಬುಟ್ಟ ಬೊಮ್ಮಾ... ಹಾಗೂ ರಾಮುಲೊ ರಾಮುಲಾ... ಹಾಡಿಗೆ ಟಿಕ್​ಟಾಕ್​ ವಿಡಿಯೋ ಮಾಡಿದ್ದರು. ಅದನ್ನು ನೋಡಿದ್ದ ಅಲ್ಲು ಅರ್ಜುನ್​ ಧನ್ಯವಾದ ಸಹ ತಿಳಿಸಿದ್ದರು. 
View this post on Instagram
 

Happy birthday @jrntr have a great day. We tried but wow the dance is fast 😂😂 @candywarner1 #jrntr #birthday #fun #dance


A post shared by David Warner (@davidwarner31) on

ಈಗ ಡೇವಿಡ್​ ವಾರ್ನರ್​ ಟಾಲಿವುಡ್​ ಪ್ರಿನ್ಸ್​ ಮಹೇಶ್ ಬಾಬು ಅವರ ಸರಿಲೇರು ನೀಕೆವ್ವರು ಚಿತ್ರದ ಮೈಂಡ್ ಬ್ಲಾಕ್​ ಹಾಡಿಗೆ ಬ್ಯಾಟ್​ ಬೀಸಿದ್ದಾರೆ. ಈ ವಿಡಿಯೋದಲ್ಲಿ ಬ್ಯಾಟ್ ಬೀಸಿ, ತಲೆ ಮೇಲೆ ಬ್ಯಾಟ್​ ಎತ್ತುತ್ತಿದ್ದಂತೆಯೇ ಮೆಲ್ಲನೆ ಮಾಯವಾಗುತ್ತಾರೆ. ಅವರು ಬೀಸಿದ್ದು ಮ್ಯಾಜಿಕ್​ ಬ್ಯಾಟ್ ಅಂತೆ. ಅದಕ್ಕೆ ವಾರ್ನರ್​ ಈಗ ಮಹೇಶ್​ ಬಾಬು ಅವರಿಗೆ ಮ್ಯಾಜಿಕ್​ ಬ್ಯಾಟ್​ ಚಾಲೆಂಜ್​ ಕೊಟ್ಟಿದ್ದಾರೆ. 
View this post on Instagram
 

Shadow batting and then you hear the wife and kids are home😂😂 see ya later guys. #magicbat #fun #challenge @urstrulymahesh


A post shared by David Warner (@davidwarner31) on


ಮಹೇಶ್ ಬಾಬು ಸಾಮಾಜಿಕ ಜಾಲತಾಣದಲ್ಲಿ ಆಗೊಂದು ಈಗೊಂದು ಪೋಸ್ಟ್ ಮಾಡುತ್ತಾರೆ. ಬಹಳ ಹಿಂದೆ ಅವರಿಗೆ ನೀಡಲಾಗಿದ್ದ ಗೋ ಗ್ರೀನ್ ಎನ್ನುತ ಸಸಿ ನೆಡುವ​ ಚಾಲೆಂಜೆ ಸ್ವೀಕರಿಸಿದ್ದರು. ನಂತರ ಮತ್ತಾವುದೇ ಚಾಲೆಂಜ್​ ಅನ್ನು ಅವರು ಸ್ವೀಕರಿಸಿಲ್ಲ. ಈಗ ಡೇವಿಡ್​ ವಾರ್ನರ್​ ಅವರು ಟಿಕ್​ಟಾಕ್​ ವಿಡಿಯೋ ಮೂಲಕ ಕೊಟ್ಟಿರುವ ಸವಾಲನ್ನು ಯಾವಾಗ ಸ್ವೀಕರಿಸುತ್ತಾರೆ ಎಂದು ಕಾದುನೋಡಬೇಕಷ್ಟೆ.

Renuka-Ashutosh Rana: ವಾಯ್ಸ್​ ಮೇಲ್​ನಿಂದ ಆರಂಭವಾದ ರೇಣುಕಾ-ಅಶುತೋಷ್​ರ ಕ್ಯೂಟ್​ ಲವ್​ ಸ್ಟೋರಿಗೆ 19 ವರ್ಷ..!​

First published: