ಲಾಕ್ಡೌನ್ ಸಮಯದಲ್ಲಿ ಡೇವಿಡ್ ವಾನರ್ ಹಾಗೂ ಅವರ ಕುಟುಂಬ ತಮ್ಮ ಟಿಕ್ಟಾಕ್ ವಿಡಿಯೋಗಳ ಮೂಲಕ ಜನರನ್ನು ರಂಜಿಸಿದ್ದಾರೆ. ಭಾರತೀಯ ಸಿನಿಮಾಗಳ ಹಾಡುಗಳಿಗೆ ಸ್ಟೆಪ್ ಹಾಕುವುದರೊಂದಿಗೆ ಬಾಹುಬಲಿ ಸಿನಿಮಾದ ಡೈಲಾಗ್ ಅನ್ನೂ ಹೇಳುವ ಮೂಲಕ ಸಿನಿ ರಸಿಕರ ಮನ ಗೆದ್ದಿದ್ದಾರೆ.
ದಿನಕ್ಕೊಂದು ವಿಡಿಯೋ ಹಂಚಿಕೊಳ್ಳುವ ಡೇವಿಡ್ ವಾರ್ನರ್ ಅವರ ವಿಡಿಯೋಗಳು ಪೋಸ್ಟ್ ಮಾಡುತ್ತಿದ್ದಂತೆಯೇ ವೈರಲ್ ಆಗುತ್ತವೆ. ಅವರ ವಿಡಿಯೋಗಳಿಗೆ ಅರ್ಧಗಂಟೆಯೊಳಗೆ ಲಕ್ಷಾಂತರ ವೀಕ್ಷಣೆ ಸಿಗುತ್ತದೆ.
ಡೇವಿಡ್ ವಾರ್ನರ್ ಕೇವಲ ಡ್ಯಾನ್ಸ್ ಅಲ್ಲದೆ ಡೈಲಾಗ್ ಹಾಗೂ ಇತರೆ ವಿಭಿನ್ನ ಟಿಕ್ಟಾಕ್ ವಿಡಿಯೋಗಳನ್ನೂ ಮಾಡುತ್ತಾರೆ. ಈಗ ಟಿಕ್ಟಾಕ್ನಲ್ಲಿ ಮ್ಯಾಜಿಕ್ ಸಹ ಮಾಡಿದ್ದಾರೆ ವಾರ್ನರ್. ಡ್ಯಾನ್ಸ್ ಮಾಡುವ ಬದಲು ಗಾಳಿಯಲ್ಲಿ ತೇಲುತ್ತಿದ್ದಾರೆ.
ಅವರ ಈ ಲೆಟೆಸ್ಟ್ ವಿಡಿಯೋ ಸಖತ್ ಆಗಿದೆ. ಇದರಲ್ಲಿ ವಾರ್ನರ್ ಮ್ಯಾಜಿಕ್ ಮಾಡಿದ್ದಾರಂತೆ. ನೀವು ಇದನ್ನು ಮಾಡಿ ನೋಡಿ ಎಂದು ವಾರ್ನರ್ ಹೇಳಿದ್ದಾರೆ. ಗಾಳಿಯಲ್ಲಿ ತೇಲುವುದು ಸುಲಭದ ಮಾತಲ್ಲ. ಆದರೆ ಡೇವಿಡ್ ವಾರ್ನರ್ ಅವರಿಗೆ ಮಾತ್ರ ಇದು ಕಷ್ಟವಲ್ಲ.
ಇದನ್ನೂ ಓದಿ: ಬಿ-ಟೌನ್ನಲ್ಲಿರುವ ಸ್ವಜನಪಕ್ಷಪಾತದ ವಿರುದ್ಧ ಅಸಮಾಧಾನ ಹೊರ ಹಾಕಿದ ನಟ ರಣವೀರ್ ಶೌರಿ
ಡೇವಿಡ್ ವಾರ್ನರ್ ಅವರ ಫನ್ನಿ ವಿಡಿಯೋಗಳು ನೆಟ್ಟಿಗರಿಗೆ ತುಂಬಾ ಇಷ್ಟವಾಗುತ್ತಿದೆ. ಅದಕ್ಕೆ ತಕ್ಕಂತೆ ದಿನೇ ದಿನೇ ಅವರ ಹಿಂಬಾಲಕರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಲಾಕ್ಡೌನ್ ಸಡಿಲಗೊಂಡಿದೆಯಾದರೂ ಇನ್ನೂ ಜನರು ಎಂದಿನಂತೆ ಸಾಮಾನ್ಯ ಜೀವನಕ್ಕೆ ಮರಳಿಲ್ಲ. ಆದರೆ ಮನೆಯಲ್ಲೇ ಇರುವವರಿಗೆ ವಾರ್ನರ್ ಹಾಗೂ ಕುಟುಂಬ ಮನರಂಜಿಸುತ್ತಿರುವುದಂತೂ ಸುಳಲ್ಲ.
Kriti Sanon-Sushant: ಕಣ್ಣೀರು ತರಿಸುತ್ತೆ ಅಗಲಿದ ಗೆಳೆಯ ಸುಶಾಂತ್ ಕುರಿತು ಕೃತಿ ಸನೋನ್ ಬರೆದ ಈ ಸಾಲುಗಳು..!
ಇದನ್ನೂ ಓದಿ: Mahesh Babu: ಮಹೇಶ್ ಬಾಬು ಸಿನಿಮಾಗಳಲ್ಲಿ ಇನ್ಮುಂದೆ ಕನ್ನಡಿಗರಿಗೂ ಸಿಗಲಿದೆ ಆದ್ಯತೆ..! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ