Glass House: ಇದು ಸಿನಿಮಾ ಮಂದಿಯ ಫೆವರೇಟ್​ ಸ್ಪಾಟ್​: ಶೂಟಿಂಗ್​​ಗಂತೂ ಮಸ್ತ್​​​​​ ಲೊಕೇಶನ್!

ದಾವಣಗೆರೆ ಇಷ್ಟು ದಿನ ಬೆಣ್ಣೆದೋಸೆಗೆ ಮಾತ್ರ ಹೆಸರಾಗಿತ್ತು. ಆದರೆ ಇನ್ನು ಮುಂದೆ ಕಣ್ಮನ ಸೆಳೆಯುವ ಗಾಜಿನ ಮನೆಗೂ ವಿಶೇಷತೆಗೆ ಹೆಸರಾಗಲಿದೆ.

ದಾವಣಗೆರೆಯ ಗಾಜಿನ ಮನೆ

ದಾವಣಗೆರೆಯ ಗಾಜಿನ ಮನೆ

  • Share this:
ನೀವು ​ಲಾಲ್​​ಬಾಗ್​ ಗ್ಲಾಸ್​ ಹೌಸ್​ ಬಗ್ಗೆ ಕೇಳಿದ್ದೀರ. ಆದರೆ, ದಾವಣಗೆರೆಯ ಗ್ಲಾಸ್​ ಹೌಸ್​​ ಬಗ್ಗೆ ಕೇಳಿದ್ದೀರ? ಈ ಸ್ಪಾಟ್​ ಸಿನಿಮಾ ಮಂದಿಗೆ ಅಚ್ಚುಮೆಚ್ಚು. ಶೂಟಿಂಗ್​ಗೆ ಅಂತೂ ಹೇಳಿ ಮಾಡಿಸಿದ ಜಾಗವಂತೆ. ಇಲ್ಲಿ ಬಂದು ಈ ಗಾಜಿನ ಮನೆಯನ್ನು ನೋಡುತ್ತಾ ನಿಂತರೆ ಸಮಯ ಕಳೆಯುವುದೇ ಗೊತ್ತಾಗಲ್ಲ. ಅಷ್ಟು ಚೆಂದ ಈ ದಾವಣಗೆರೆ ಗ್ಲಾಸ್​ ಹೌಸ್​​.  ಲಾಲ್​ಬಾಗ್​ನಲ್ಲಿರುವ ಗಾಜಿನ ಮನೆಗಿಂತ ದಾವಣಗೆರೆ ಗಾಜಿನ ಮನೆ ಹತ್ತು ಪಟ್ಟು ದೊಡ್ಡದಾಗಿದೆ. ವಿಶಾಲವಾದ 28 ಎಕರೆ ಪ್ರದೇಶ. ಪಕ್ಕದಲ್ಲಿಯೇ ಪ್ರಸಿದ್ಧ ಕುಂದವಾಡ ಕೆರೆ. ಬೆಣ್ಣೆನಗರಿಯ ಗ್ಲಾಸ್ಹೌಸ್ ಈಗ ಪ್ರವಾಸಿಗರ ಹಾಟ್ ಸ್ಫಾಟ್. ಧಾರಾವಾಹಿ, ಸಿನಿಮಾ ಶೂಟಿಂಗ್ಗಳಿಗೂ ನೆಚ್ಚಿನ ತಾಣ. ಇದು ಶೂಟಿಂಗ್​ ಮಾಡುವುದಕ್ಕೆ ಹೇಳಿ ಮಾಡಿಸಿದ ಜಾಗವಂತೆ. ದಾವಣಗೆರೆಯ ಕುಂದವಾಡ ಕೆರೆ ಪಕ್ಕ ತಲೆ ಎತ್ತಿರುವ ಗಾಜಿನ ಮನೆ ಈಗ ಜಿಲ್ಲೆಯ ಪ್ರವಾಸೋದ್ಯಮಕ್ಕೇ ಹೊಸ ಸ್ಪರ್ಶ ಕೊಟ್ಟಿದೆ. ಸುಮಾರು 10 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಗಾಜಿನ ಮನೆಗೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡ್ತಿದ್ದಾರೆ. ಗ್ಲಾಸ್ ಹೌಸ್ ಎದುರು ನಿಂತು ಸೆಲ್ಫೀ ಕ್ಲಿಕ್ಕಿಸಿಕೊಂಡು ಸಂಭ್ರಮಿಸ್ತಿದ್ದಾರೆ. ಜೊತೆಗೆ ಇಲ್ಲಿ ಸಿನಿಮಾ ಹಾಗೂ ಸೀರಿಯಲ್​ ಮಂದಿ ಭೇಟಿ ಕೊಟ್ಟು ಶೂಟಿಂಗ್​ ಮಾಡುತ್ತಿದ್ದಾರಂತೆ. 

ಮನಸ್ಸಿಗೆ ಮುದ ನೀಡುವ ಫ್ಲವರ್ ಶೋ..!

ಇನ್ನು ಮೈಸೂರು ದಸರಾ ಮಾದರಿಯಲ್ಲಿ ಫಲಪುಷ್ಪ ಪ್ರದರ್ಶನ ಸೇರಿದಂತೆ ಮಕ್ಕಳನ್ನ ಆಕರ್ಷಿಸಲು ನಾನಾ ಗೇಮ್ಸ್, ಪಕ್ಕದಲ್ಲೇ ಇರೋ ವಿಶಾಲವಾದ ಕೆರೆ ಪರಿಸರಕ್ಕೆ ಪ್ರವಾಸಿಗರು ಮಾರುಹೋಗ್ತಿದ್ದಾರೆ. KRS ಮಾದರಿಯಲ್ಲೇ ಸಂಗೀತಯುಕ್ತ ಬೆಳಕಿನ ಕಾರಂಜಿಯೂ ಇಲ್ಲಿ ರೂಪುಗೊಳ್ತಿದ್ದು, ಸ್ಮಾರ್ಟ್ ಸಿಟಿ ಯೋಜನೆಯಡಿ ವಿವಿಧ ಕಾಮಗಾರಿಗಳು ನಡೀತಿವೆ. ಹೀಗಾಗಿ ಇಲ್ಲಿ ಆಗಮಿಸುವ ಪ್ರತಿಯೊಬ್ಬ ಪ್ರವಾಸಿಗನು ಈ ಸೌಂದರ್ಯವನ್ನು ಅನುಭವಿಸಿ, ನಾಲ್ಕು ಜನರಿಗೆ ಹೋಗಿ ಈ ಬಗ್ಗೆ ಹೇಳುತ್ತಿದ್ದಾರಂತೆ. ಹೀಗಾಗಿ ಇಲ್ಲಿ ಪ್ರತಿದಿನ ಪ್ರವಾಸಿಗರ ಸಂಖ್ಯೆ ಏರುತ್ತಲೇ ಇದೆಯಂತೆ. ಇದರ ಜೊತೆಗೆ ಪ್ರೀ ವೆಡ್ಡಿಂಗ್​ ಶೂಟ್​, ಸಿನಿಮಾ, ಸೀರಿಯಲ್​ ಶೂಟಿಂಗ್​​​ಗೆ ಈ ಗ್ಲಾಸ್​ ಹೌಸ್​ ಹೆಚ್ಚು ಬಳಕೆಯಾಗುತ್ತಿರುವ ಆದಾಯ ಹೆಚ್ಚಿಸಿದೆ.


 ಇದನ್ನು ಓದಿ :  ಬಾಲಿವುಡ್ ನಲ್ಲಿ ಖಾನ್ ಗಳ ದರ್ಬಾರ್ ಖತಂ?

ಸೂಜಿಗಲ್ಲಿನಂತೆ ಗಮನ ಸೆಳೆಯುವ ಗ್ಲಾಸ್​ಹೌಸ್!

ದಾವಣಗೆರೆ ಮಾರ್ಗವಾಗಿ ಹಾದು ಹೋಗುವ ಪ್ರವಾಸಿಗರು ಸೂಜಿಗಲ್ಲಿನಂತೆ ಸೆಳೆಯುವ ಗ್ಲಾಸ್‌ಹೌಸ್‌ಗೆ ಭೇಟಿ ನೀಡಿ ವೀಕ್ಷಣೆ ಮಾಡುತ್ತಿದ್ದಾರೆ. ಇಲ್ಲಿನ ಜನರು ಸುಂದರ ತಾಣ, ಪ್ರಕೃತಿಯ ಸೌಂದರ್ಯ ಅರಸಿ ಬೆಂಗಳೂರು, ಧರ್ಮಸ್ಥಳ, ದಾಂಡೇಲಿ, ಮಂಗಳೂರು ಸೇರಿದಂತೆ ಇನ್ನಿತರ ಪ್ರವಾಸಿ ಸ್ಥಳಗಳಿಗೆ ಹೋಗುತ್ತಿದ್ದರು. ಈಗ ಅಲ್ಲಿನವರು ದಾವಣಗೆರೆ ಬರಲು ಹಾತೊರೆಯುತ್ತಿದ್ದಾರೆ. ಇಂತದೊಂದು ಹೊಸ ಟ್ರೇಂಡ್‌ನ್ನು ರಾಷ್ಟ್ರದ ಅತಿ ದೊಡ್ಡದೆಂದು ಕರೆಯಲಾಗುವ 'ದಾವಣಗೆರೆ ಗಾಜಿನ ಮನೆ' ಹುಟ್ಟು ಹಾಕಿದೆ.



ಇದನ್ನು ಓದಿ : ಗುಡ್​ ನ್ಯೂಸ್​ ಕೊಟ್ಟ ಸಂಜನಾ ಗಲ್ರಾನಿ: ಮೊದಲ ಮಗುವಿನ ನಿರೀಕ್ಷೆಯಲ್ಲಿ `ಗಂಡ-ಹೆಂಡತಿ’!

3 ಎಕರೆಯಲ್ಲಿ ನಿರ್ಮಾಣವಾಗಿದೆ ಗ್ಲಾಸ್‌ಹೌಸ್‌!

ಈ ಗಾಜಿನ ಮನೆ 108 ಮೀಟರ್‌ ಉದ್ದವಿದೆ. 68 ಮೀಟರ್‌ ಅಗಲ, 18 ಮೀಟರ್‌ ಎತ್ತರ ಹೊಂದಿದೆ. ಇದನ್ನು ಸೇಂಟ್‌ ಗೊಬೇನ್‌ ಗ್ಲಾಸ್‌ಗಳನ್ನು ಬಳಕೆ ಮಾಡಿ ವಿನೂತನ ವಿನ್ಯಾಸದಲ್ಲಿ ಇದನ್ನು ನಿರ್ಮಿಸಲಾಗಿದೆ. ಒಳಗಡೆ ಗ್ರಾನೈಟ್‌ ನೆಲಹಾಸು ಹಾಕಲಾಗಿದೆ. ಈ ಗ್ಲಾಸ್‌ಗಳು ಸೂರ್ಯನ ಶಾಖವನ್ನು ನಿಯಂತ್ರಿಸುತ್ತಿದ್ದು, ಒಳಗೆ ತಂಪಾದ ಅನುಭವ ನೀಡುತ್ತಿದೆ. ಒಟ್ಟು 12 ಎಕರೆ ಪ್ರದೇಶದ ಪೈಕಿ ಮೂರು ಎಕರೆ ಜಾಗದಲ್ಲಿ ಗ್ಲಾಸ್‌ ಹೌಸ್‌ ನಿರ್ಮಾಣವಾಗಿದೆ.ದಾವಣಗೆರೆ ಇಷ್ಟು ದಿನ ಬೆಣ್ಣೆದೋಸೆಗೆ ಮಾತ್ರ ಹೆಸರಾಗಿತ್ತು. ಆದರೆ ಇನ್ನು ಮುಂದೆ ಕಣ್ಮನ ಸೆಳೆಯುವ ಗಾಜಿನ ಮನೆಗೂ ವಿಶೇಷತೆಗೆ ಹೆಸರಾಗಲಿದೆ.
Published by:Vasudeva M
First published: