ಬಹು ನಿರೀಕ್ಷಿತ 'ದಿ ವಿಲನ್​' ಸಿನಿಮಾದ ಟೀಸರ್​ ಬಿಡುಗಡೆಗೆ ದಿನಾಂಕ ನಿಗದಿ!

news18
Updated:June 23, 2018, 3:13 PM IST
ಬಹು ನಿರೀಕ್ಷಿತ 'ದಿ ವಿಲನ್​' ಸಿನಿಮಾದ ಟೀಸರ್​ ಬಿಡುಗಡೆಗೆ ದಿನಾಂಕ ನಿಗದಿ!
news18
Updated: June 23, 2018, 3:13 PM IST
ರಕ್ಷಾ ಜಾಸ್ಮೀನ್​, ನ್ಯೂಸ್ 18 ಕನ್ನಡ

'ದಿ ವಿಲನ್'... ಸದ್ಯ ಸ್ಯಾಂಡಲ್‍ವುಡ್‍ನ ಗಲ್ಲಿಗಳಲ್ಲಿ ಗುಲ್ಲೆಬ್ಬಿಸುತ್ತಿರುವ ಸಿನಿಮಾ. ಲೇಟ್ ಆದರೂ ಲೇಟೆಸ್ಟ್ ಆಗಿ ಬಹಳ ಅದ್ಧೂರಿಯಾಗಿ ತಯಾ ರಾಗುತ್ತಿರೋ 'ದಿ ವಿಲನ್' ಸಿನಿಮಾವನ್ನ ಕಣ್ಣುತುಂಬಿಕೊಳ್ಳಲು ಅದೆಷ್ಟೊ ಕುಲಕೋಟಿ ಕಣ್ಣುಗಳು ಕಾಯುತ್ತಿವೆ. ಹೀಗಾಗಿಯೇ ನಿರ್ದೇಶಕ ಪ್ರೇಮ್, ಅಭಿಮಾನಿಗಳ ಹೃದಯ ಬಡಿತ ಅರಿತು ಸದ್ಯಕ್ಕೆ ಚಿತ್ರದ ಟೀಸರ್ ನೋಡಿ, ಆಮೇಲೆ ಸಿನಿಮಾ ರಿಲೀಸ್ ಮಾಡ್ತಿವಿ ಅಂತಿದ್ದಾರೆ.

ಚಿತ್ರ ಸೆಟ್ಟೇರಿದಾಗಿನಿಂದ ಹಿಡಿದು ಚಿತ್ರೀಕರಣ ಮುಗಿಯೋವರೆಗೂ ಪಿನ್ ಟು ಪಿನ್ ನ್ಯೂಸ್ ನಿಮಗೆ ನೀಡಿದ್ದೇವೆ. ಅಂತೆಯೇ ಇವತ್ತು 'ದಿ ವಿಲನ್' ಚಿತ್ರದ ಟೀಸರ್ ರಿಲೀಸ್ ಸುದ್ದಿಯನ್ನ ಹೊತ್ತು ಬಂದಿದ್ದೇವೆ. ಚಿತ್ರದ ಟೀಸರ್ ಸಂಕ್ರಾಂತಿಗೆ, ದಸರಾಗೆ ಬಿಡುಗಡೆ ಮಾಡುವುದಾಗಿ ಹೇಳಿಕೊಂಡು ಬಂದ ಪ್ರೇಮ್ ಇದೀಗ ಖಚಿತವಾದ ದಿನಾಂಕವನ್ನು ಕೊಟ್ಟಿರೋದಾಗಿ ಹೇಳಿ ಅಭಿಮಾನಿಗಳ ದಿಲ್ ಖುಷ್ ಮಾಡಿದೆ. ಈ ಸಲ ಖಚಿವಾಗಿ ಇದೇ ತಿಂಗಳ 28ಕ್ಕೆ 'ದಿ ವಿಲನ್' ಚಿತ್ರದ ಟೀಸರ್  ಭರ್ರಿಜರಿಯಾಗಿ ಬಿಡುಗಡೆಯಾಗುತ್ತಿದೆ.

ಜೋಗಿ ಪ್ರೇಮ್ ನಿರ್ದೇಶನದಲ್ಲಿ ಬರುತ್ತಿರೋ ಈ ಸಿನಿಮಾ ಅದ್ಯಾಕೋ ಕೊಂಚ ನಿಧಾನ ಆಯಿತು ಅಂತ ಅನ್ನಿಸಿದರೂ ಕೂಡ, ಬಹುತಾರಗಣದ ಸಿನಿಮಾ ಆಗಿರುವ ಕಾರಣಕ್ಕೆ ಕಲಾವಿದರ ದಿನಾಂಕ ಹೊಂದಾಣಿಕೆಗೆ ರಿಲೀಸ್ ಕೊಂಚ ಆಚೆಈಚೆ ಆಗಿದೆ ಎನ್ನುತ್ತಾರೆ ನಿರ್ದೇಶಕ ಪ್ರೇಮ್.

ಇದೇ ತಿಂಗಳ 28ರಂದು ಸಂಜೆ 7 ಗಂಟೆಗೆ ನಗರದ ಜಿ.ಟಿ ವರ್ಲ್ಡ್​ ಮಾಲ್‍ನಲ್ಲಿ 'ದಿ ವಿಲನ್' ಟೀಸರ್ ಅದ್ಧೂರಿಯಾಗಿ ಲಾಂಚ್ ಆಗಲಿದೆ. ಟೀಸರ್ ಲಾಂಚ್ ಹಿಂದೆಯೂ ಒಂದೊಳ್ಳೆ ಉದ್ದೇಶ ಇಟ್ಟುಕೊಂಡು ಲಾಂಚ್ ಮಾಡುತ್ತಿರೋ ಚಿತ್ರತಂಡ, ಟೀಸರ್ ರಿಲೀಸ್ ಕಾರ್ಯಕ್ರಮದ ಎಂಟ್ರಿಗೆ 500 ರುಪಾಯಿ ಟಿಕೆಟ್ ನಿಗದಿ ಮಾಡಿದೆ. ಅಯ್ಯೋ 500 ರುಪಾಯಿ ಕೊಟ್ಟು ಟೀಸರ್ ಲಾಂಚ್‍ಗೆ ಹೋಗಬೇಕಾ ಹುಬ್ಬೇರಿಸಬೇಡಿ. ಇದಕ್ಕೆ ಒಂದು ಒಳ್ಳೆ ಕಾರಣ ಇದೆ.

ಒಂದು ಸಿನಿಮಾದ ನಿಜವಾದ ನಾಯಕ ಅದರ ನಿರ್ದೇಶಕ. ಆದರೆ ಅದೆಷ್ಟೋ ನಿರ್ದೇಶಕರು ಇಂದು ಸಂಕಷ್ಟದಲ್ಲಿದ್ದಾರೆ. ಅಂಥವರಿಗೆ ಈ ಟೀಸರ್ ಪ್ರದರ್ಶನ ಅರ್ಪಿತ. ಅಳಿಲು ಸೇವೆಯಂತೆ ನೀವು ನೀಡಿದ ಟಿಕೆಟ್ ಮೊತ್ತವನ್ನು ಟೀಸರ್ ಬಿಡುಗಡೆಯಂದೇ  ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರಿಂದ ಆಯ್ದ ನಿರ್ದೇಶಕರಿಗೆ ಈ ಹಣ ನೀಡಲಿದ್ದೇವೆ ಎನ್ನುತ್ತಿದೆ 'ದಿ ವಿಲನ್' ತಂಡ.

ಇದೇ ನೋಡಿ.  ದಿ ವಿಲನ್ ಚಿತ್ರತಂಡ ಹೊಂದಿರೋ ಒಳ್ಳೆಯದೊಂದು ಉದ್ದೇಶ. ಸಂಕಷ್ಟದಲ್ಲಿರೋ ನಿರ್ದೇಶಕರಿಗೆ ನೀವು ನೀಡಿದ ಹಣ ತಲುಪಲಿದೆ. ಹೀಗಾಗಿ ಯಾರು ಕೂಡ ಅನ್ಯತಾ ಭಾವಿಸುವ ಅಗತ್ಯ ಇಲ್ಲ. ಹಾಗೆ ಟೀಸರ್ ಲಾಂಚ್ ದಿನ ಮತ್ತೊಂದು ಸಪ್ರೈಸ್ ಇದೆ. ಮೊದಲ ಬಾರಿಗೆ 'ದಿ ವಿಲನ್' ಚಿತ್ರದ ಪ್ರಚಾರಕ್ಕಾಗಿ ಟು ಇನ್ ಒನ್ ಚಾಕೋ ಆರೆಂಜ್ ಐಸ್ ಕ್ರೀಮ್ ಅನ್ನು ಪರಿಚಯಿಸಲಾಗುತ್ತಿದೆ. ಇದು ಕೂಡ ಟೀಸರ್ ಲಾಂಚ್ ಕಾರ್ಯಕ್ರಮದಂದೇ ಲಾಂಚ್ ಆಗಲಿದ್ದು, ನಾಲಗೆ ಚಪ್ಪರಿಸುವ ರುಚಿಯಲ್ಲಿ 'ದಿ ವಿಲನ್' ಐಸ್ ಕ್ರೀಮ್ ನಿಮಗಾಗಿ ಮಾರುಕಟ್ಟೆಗೆ ಬರಲಿದೆ.
Loading...

ಅಂತೂ ಅಭಿಮಾನಿಗಳು ಕಾಯುತ್ತಿದ ಆ ಕ್ಷಣಕ್ಕೆ ದಿನಗಣನೆ ಆರಂಭವಾಗಿದೆ. ಶಿವರಾಜ್​ಕುಮಾರ್​ ಮತ್ತು ಕಿಚ್ಚಾ ಸುದೀಪ್ ಕಾಂಬಿನೇಷನ್‍ನಲ್ಲಿ ಬರುತ್ತಿರೋ ಸಿನಿಮಾ ಇದಾಗಿದ್ದರಿಂದ ಮಲ್ಟಿಸ್ಟಾರ್ ಅಭಿಮಾನಿಗಳು ಕಣ್ಣಿಗೆ ಎಣ್ಣೆ ಬಿಟ್ಟು ಟೀಸರ್ ಅನ್ನು ಕಣ್ಣುತುಂಬಿಕೊಳ್ಳಲು ಕಾತುರರಾಗಿದ್ದಾರೆ.
First published:June 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ