'ದಿ ವಿಲನ್​' ಸಿನಿಮಾದ ಆಡಿಯೋ ರಿಲೀಸ್​ಗೆ ದಿನಾಂಕ ನಿಗದಿ..!

news18
Updated:August 16, 2018, 4:49 PM IST
'ದಿ ವಿಲನ್​' ಸಿನಿಮಾದ ಆಡಿಯೋ ರಿಲೀಸ್​ಗೆ ದಿನಾಂಕ ನಿಗದಿ..!
news18
Updated: August 16, 2018, 4:49 PM IST
ನ್ಯೂಸ್​ 18 ಕನ್ನಡ 

ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ `ದಿ ವಿಲನ್' ಚಿತ್ರದ ಆಡಿಯೋ ರಿಲೀಸ್‍ಗೆ ದಿನಾಂಕ ನಿಗದಿಯಾಗಿದೆ. ಬೆಂಗಳೂರಿನಲ್ಲಿ ನಡೆಯಲಿರೋ ಅದ್ಧೂರಿ ಕಾರ್ಯಕ್ರಮಕ್ಕೆ ಇಡೀ ಸ್ಯಾಂಡಲ್‍ವುಡ್ ಸಾಕ್ಷಿಯಾಗಲಿದೆ.

ನಿಮ್ಗೆಲ್ಲಾ ಗೊತ್ತಿರುವ ಹಾಗೆ ಶಿವಣ್ಣ-ಸುದೀಪ್ ಅಭಿನಯದ `ದಿ ವಿಲನ್' ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟಿಸಿದೆ. ಜೋಗಿ ಪ್ರೇಮ್ ನಿರ್ದೇಶನದ ಈ ಚಿತ್ರಕ್ಕಾಗಿ ಕನ್ನಡ ಪ್ರೇಕ್ಷಕ ಬಳಗ, ಬಿಟ್ಟ ಕಣ್ಣು ಬಿಟ್ಟಂತೆ ಕಾದು ಕುಳಿತಿದೆ. ಇಂತಹ ಸಿನಿಮಾದ ಬಗೆಗೆ ಅದು ಏನೇ ಮಾಹಿತಿ ಇರಲಿ, ಅದು ಚಿತ್ರರಸಿಕರ ಕಣ್ಣು ಅರಳಿಸಿ ನೋಡುವಂತೆ, ಕಿವಿ ಅಗಲಿಸಿ ಕೇಳುವಂತೆ ಮಾಡುವುದರಲ್ಲಿ ಅನುಮಾನವೇ ಇಲ್ಲ. ಈಗ ಅಂತುಹುದೇ ಒಂದು ಆಸಕ್ತಿಕರ ಸುದ್ದಿಯೊಂದು `ದಿ ವಿಲನ್' ಸಿನಿಮಾ ಅಡ್ಡದಿಂದ ಹೊರಬಿದ್ದಿದೆ.

ಹೌದು `ದಿ ವಿಲನ್' ಚಿತ್ರದ ಆಡಿಯೋ ರಿಲೀಸ್ ದಿನಾಂಕ ನಿಗದಿಯಾಗಿದೆ. ಇದೇ ಭಾನುವಾರ ಬೆಂಗಳೂರಿನ ದೊಡ್ಡ ಹೋಟೆಲ್ ಒಂದರಲ್ಲಿ ಅದ್ಧೂರಿ ಸಮಾರಂಭದಲ್ಲಿ ಆಡಿಯೋ ಲೋಕಾರ್ಪಣೆಯಾಗಲಿದೆ. ಈ ಸಮಾರಂಭಕ್ಕೆ ಸ್ಯಾಂಡಲ್‍ವುಡ್‍ನ ಸ್ಟಾರ್ ನಟ-ನಟಿಯರಿಗೆಲ್ಲ ಆಹ್ವಾನ ನೀಡಲಾಗಿದ್ದು, ಇಡೀ ಕಾರ್ಯಕ್ರಮ ತಾರಾ ಸಮಾಗಮಕ್ಕೆ ಸಾಕ್ಷಿಯಾಗೋದು ಖಚಿತವಾಗಿದೆ.

ಇನ್ನು ಈ ಮುಂಚೆ ಹೇಳಿದಂತೆ ದೂರದ ದುಬೈನಲ್ಲಿ ಸಹ 'ದಿ ವಿಲನ್' ಚಿತ್ರದ ಆಡಿಯೋ ಬಿಡುಗಡೆಯಾಗಲಿದ್ದು, ಇದೇ ತಿಂಗಳ 24ರಂದು ಈ ಕಾರ್ಯಕ್ರಮ ಜರುಗಲಿದೆ. ಈ ಕಾರ್ಯಕ್ರಮದಲ್ಲಿ ಶಿವಣ್ಣ-ಸುದೀಪ್, ಆಮಿ ಜಾಕ್ಸನ್ ಸೇರಿದಂತೆ ಇಡೀ ಚಿತ್ರತಂಡ ಭಾಗವಹಿಸಲಿದ್ದು, ಸಾಗರದಾಚೆಯೂ ಕನ್ನಡ ಚಿತ್ರದ ಘಮವನ್ನ ಹಬ್ಬಿಸಲು ಚಿತ್ರತಂಡ ಸಜ್ಜಾಗಿದೆ.

ಒಟ್ಟಾರೆ ಕನ್ನಡ ಚಿತ್ರರಂಗದ ಈ ಬಹುನಿರೀಕ್ಷಿತ ಚಿತ್ರ ಒಂದೊಂದೇ ಹಂತದಲ್ಲಿ ಕ್ರೇಜನ್ನ ದುಪ್ಪಟ್ಟು ಮಾಡುತ್ತಿದ್ದು, ರಿಲೀಸ್ ವೇಳೆಗೆ ದಿ ವಿಲನ್ ಮೇನಿಯಾ ಯಾವ ಮಟ್ಟ ಮುಟ್ಟಲಿದೆ ಅನ್ನೋದನ್ನ ಕಾದು ನೋಡಬೇಕು.

 
Loading...

 
First published:August 16, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ