ಸಂಕ್ರಾಂತಿ ಹಬ್ಬಕ್ಕೆ 'ಶಿವನಂದಿ'ಯನ್ನು ಉಡುಗೊರೆಯಾಗಿ ಕೊಡುತ್ತಿರುವ ಡಿ-ಬಾಸ್​ 'ಯಜಮಾನ'

ಸಂಕ್ರಾಂತಿಗೆ ಬಿಡುಗಡೆಯಾಗಲಿದೆ 'ಯಜಮಾನ' ಸಿನಿಮಾದ ಮೊದಲ ಹಾಡು. ಹರಿಕೃಷ್ಣ ಸಂಗೀತಕ್ಕೆ ಬಹದ್ದೂರ್​ ಚೇತನ್​ ಸಾಹಿತ್ಯ ರಚಿಸಿರುವ 'ಶಿವನಂದಿ....' ಹಾಡನ್ನು ಜನವರಿ15ಕ್ಕೆ ಬಿಡುಗಡೆ ಮಾಡಲಿದೆ ಚಿತ್ರತಂಡ.

Anitha E | news18
Updated:January 15, 2019, 11:41 AM IST
ಸಂಕ್ರಾಂತಿ ಹಬ್ಬಕ್ಕೆ 'ಶಿವನಂದಿ'ಯನ್ನು ಉಡುಗೊರೆಯಾಗಿ ಕೊಡುತ್ತಿರುವ ಡಿ-ಬಾಸ್​ 'ಯಜಮಾನ'
ಯಜಮಾನ ಚಿತ್ರದ ಪೋಸ್ಟರ್​
Anitha E | news18
Updated: January 15, 2019, 11:41 AM IST
-ಅನಿತಾ ಈ,

ಬಾಕ್ಸಾಫಿಸ್ ಸುಲ್ತಾನ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ 'ಯಜಮಾನ' ಚಿತ್ರ ಇನ್ನೇನು ತೆರೆ ಕಾಣಲು ಸಜ್ಜಾಗಿದೆ. ಕೇವಲ ಪೋಸ್ಟರ್​ ಹಾಗೂ ಸ್ಟಿಲ್​ಗಳಿಂದಲೇ ನಿರೀಕ್ಷೆ ಹೆಚ್ಚಿಸಿದೆ ದರ್ಶನ್​ರ ಈ ಸಿನಿಮಾ.

ಇದನ್ನೂ ಓದಿ: ಸ್ವೀಡನ್​ನಲ್ಲಿ ನಡೆದ 'ಯಜಮಾನ' ಹಾಡಿನ ಚಿತ್ರೀಕರಣದ ಸೆಟ್​ನಲ್ಲಿ 'ಡಿ-ಬಾಸ್​' ದರ್ಶನ್- ರಶ್ಮಿಕಾರ ಚಿತ್ರಗಳು

ಈಗ 'ಯಜಮಾನ' ಚಿತ್ರತಂಡ ಸಂಕ್ರಾಂತಿಗೆ  ಡಿ-ಬಾಸ್​ ಅಭಿಮಾನಿಗಳಿಗೆ ಉಡುಗೊರೆ ನೀಡಲು ನಿರ್ಧರಿಸಿದ್ದಾರೆ. ಹೌದು, 'ಯಜಮಾನ' ಸಿನಿಮಾದಿಂದ ಚಿತ್ರವನ್ನು ಪರಿಚಯಿಸುವ ಮೊದಲ ಹಾಡನ್ನು ಸಂಕ್ರಾಂತಿ ಪ್ರಯುಕ್ತ ಜನವರಿ 15 ರಂದು ಬಿಡುಗಡೆ ಮಾಡಲಿದೆ ಚಿತ್ರತಂಡ. ಹೀಗೆಂದು ಖುದ್ದು ದರ್ಶನ್​ ಟ್ವೀಟ್​ ಮಾಡಿದ್ದಾರೆ. #AudioFestival of @dasadarshan ‘s #YAJAMANA from #Sankranthi #15thJanuary starts with #1stSong #Shivanandi with Music by @harmonium lyrics by #Chethankumar . Movie produced by @shylajanag @bsuresha under #MediaHouseStudio pic.twitter.com/tiC2bnJ5uJ


ಹರಿಕೃಷ್ಣ ನೀಡಿರುವ ಸಂಗೀತಕ್ಕೆ ಬಹದ್ದೂರ್ ಚೇತನ್ ಸಾಹಿತ್ಯ ರಚಿಸಿದ್ದಾರೆ.  ಶೈಲಜಾ ನಾಗ್​ ನಿರ್ಮಾಣದ ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸಿದ್ದಾರೆ. ‬

ಇದನ್ನೂ ಓದಿ: ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ದಾಸನ​ ಬಂಪರ್​ ಕೊಡುಗೆ: ಜನವರಿಗೆ ದರ್ಶನ ನೀಡಲಿದ್ದಾನೆ 'ಯಜಮಾನ'..!
Loading...

ಈ ಸಿನಿಮಾದ ಹಾಡುಗಳ ಚಿತ್ರೀಕರಣ ಸ್ವೀಡನ್​ನಲ್ಲಿ ನಡೆಯುವಾಗಲೇ ಅಂಬಿಯ ಸಾವಿನ ಸುದ್ದಿ ಬರ ಸಿಡಿಲು ಬಡಿದಂತೆ ಬಂದಿತ್ತು. ಇದರಿಂದ ಕಂಗಾಲಾಗಿದ್ದ ಇಡೀ ಚಿತ್ರಂಡ, ತಕ್ಷಣವೇ ಚಿತ್ರೀಕರಣ ನಿಲ್ಲಿಸಿ, ಅಲ್ಲಿಂದ ನಾನಾ ಪಾಡು ಪಟ್ಟುಕೊಂಡು ಬೆಂಗಳೂರಿಗೆ ಬಂದಿದ್ದರು. ಅಲ್ಲದೆ ನಂತರ ದರ್ಶನ್​ ಮತ್ತೆ ಅರ್ಧಕ್ಕೆ ನಿಂತಿದ್ದ ಹಾಡಿನ ಚಿತ್ರೀಕರಣಕ್ಕಾಗಿ ಸ್ವೀಡನ್​ನತ್ತ ಮುಖ ಮಾಡುವುದಿಲ್ಲ ಎಂದು ಪ್ರಯಾಣವನ್ನು ನಿಲ್ಲಿಸಿದ್ದರು.

ನಂತರ ಉಳಿದ ಹಾಡಿನ ಚಿತ್ರೀಕರಣದ ಭಾಗವನ್ನು ಬೆಂಗಳೂರಿನಲ್ಲೇ ಪೂರ್ಣಗೊಳಿಸಲಾಯಿತು. ವರ್ಷವಿಡೀ ಒಂದು ಸಿನಿಮಗಾಗಿ ಕಾದಿರೋ ಚಾಲೆಂಜಿಂಗ್‍ ಸ್ಟಾರ್ ಅಭಿಮಾನಿಗಳಿಗೆ ಈ ವರ್ಷ ಮೂರು ಸಿನಿಮಾ ನೋಡಲು ಸಿಗೋದಂತು ಖಚಿತ. 'ಯಜಮಾನ', 'ಕುರುಕ್ಷೇತ್ರ' ಜೊತೆ ಶೂಟಿಂಗ್ ಆರಂಭಿಸಿರೋ 'ಒಡೆಯ' ಕೂಡ ಈ ವರ್ಷ ತೆರೆ ಕಾಣೋದು ಪಕ್ಕಾ ಆಗಿದೆ. ಹಾಗಾಗಿ ಸಂಕ್ರಾಂತಿಯಂದೇ ಸಂಕ್ರಮಣ ಘಟ್ಟ ಶುರುವಾಗಲಿದ್ದು ಡಿ ಬಾಸ್ ಅಭಿಮಾನಿಗಳಿಗೆ ಸಂಕ್ರಾಂತಿಯೇ ಸಿನಿಮಾ ಕ್ರಾಂತಿಗೆ ನಾಂದಿ ಹಾಡಲಿದೆ. ಮತ್ತಷ್ಟು ಖುಷಿ ಕೊಡೋ ಸುದ್ದಿ ನಿಮಗಾಗಿ ಕಾದಿದೆ.

ಇದಾದ ನಂತರ ವಾರಕ್ಕೊಂದು ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಲಿದೆಯಂತೆ 'ಯಜಮಾನ' ಚಿತ್ರತಂಡ . ವರ್ಷವಿಡೀ ಬರಗಾಲದಿಂದ ಬೆಂದಿದ್ದ ದಚ್ಚು ಅಭಿಮಾನಿಗಳಿಗೆ ವಾರದ ಕಂತಿನಲ್ಲಿ ಈಗ ಬೋನಸ್​ ಸಿಗಲಿದೆ. ದರ್ಶನ್ ಅಭಿನಯದ 'ಕುರುಕ್ಷೇತ್ರ' 2018ರಲ್ಲೇ ತೆರೆಕಾಣಬೇಕಿತ್ತು. 'ಕುರುಕ್ಷೇತ್ರವೇ' ದರ್ಶನ್ 50ನೇ ಸಿನಿಮಾ ಅಂತ ಹೇಳಿಕೊಂಡಿತ್ತು ಕೂಡ. ಆದರೆ ಅದು ಕಾರಣಾಂತರಗಳಿಂದ ತಡವಾಗುತ್ತಿರುವುದರಿಂದ 'ಯಜಮಾನ' ಫೆಬ್ರುವರಿ ಮೊದಲ ವಾರದಲ್ಲೇ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆ.

 

 

ಎನ್​ಟಿಆರ್​ ಜೀವನಾಧಾರಿತ 'ಕಥಾನಯಕುಡು' ಸಿನಿಮಾದ ಕೆಲವು ಅಪರೂಪದ ಚಿತ್ರಗಳು
First published:January 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ