Yajamana Movie: ಟ್ರೆಂಡಿಂಗ್​ನಲ್ಲಿ ಪ್ರಥಮ ಸ್ಥಾನದಲ್ಲಿದೆ ಯಜಮಾನನ ಆನೆ..!

ಸಾಮಾಜಿಕ ಜಾಲತಾಣದ ಕಿಂಗ್​ ಎಂದರೆ ಅದು ದರ್ಶನ್​ ಎಂದೇ ಹೇಳಬಹುದು. ಹೌದು, ದರ್ಶನ್​ ಸಿನಿಮಾದ ಹಾಡು, ಟೀಸರ್ ಹಾಗೂ ಟ್ರೈಲರ್​ ಬಿಡುಗಡೆಯಾದರೆ ಸಾಕು ಅದು ಯೂಟ್ಯೂಬ್​ನಲ್ಲಿ ಟ್ರೆಂಡಿಂಗ್​ನಲ್ಲಿರುತ್ತದೆ. ಈಗಲೂ ಅಷ್ಟೆ ಯಜಮಾನ ಸಿನಿಮಾದ ಟ್ರೈಲರ್​ ಟ್ರೆಂಡಿಂಗ್​ನಲ್ಲಿ ಪ್ರಥಮ ಸ್ಥಾನದಲ್ಲಿದೆ.

Anitha E | news18
Updated:February 11, 2019, 5:27 PM IST
Yajamana Movie: ಟ್ರೆಂಡಿಂಗ್​ನಲ್ಲಿ ಪ್ರಥಮ ಸ್ಥಾನದಲ್ಲಿದೆ ಯಜಮಾನನ ಆನೆ..!
ಯಜಮಾನ ಸಿನಿಮಾದಲ್ಲಿ ದರ್ಶನ್​
Anitha E | news18
Updated: February 11, 2019, 5:27 PM IST
-ಅನಿತಾ ಈ,

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಸಿನಿಮಾಗಳ ವಿಷಯವಾಗಲಿ ಅಥವಾ ದರ್ಶನ್​ಗೆ ಸಂಬಂಧಿಸಿದ ವಿಷಯವಾಗಲಿ ಅದು ಸದಾ ಟ್ರೆಂಡಿಂಗ್​ನಲ್ಲಿರುತ್ತದೆ. ಕಾರಣ ದಚ್ಚುಗೆ ಸಾಮಾಜಿಕ ಜಾಲತಾಣದಲ್ಲಿರುವ ಅಭಿಮಾನಿ ಬಳಗ. ಹೌದು ಈ ಹಿಂದೆ 'ಯಜಮಾನ' ಸಿನಿಮಾದ ಮೊದಲ ಹಾಡು ಬಿಡುಗಡೆಯಾಗುತ್ತಿದ್ದಂತೆಯೇ ಅದು ಲಕ್ಷಗಟ್ಟಲೆ ವೀಕ್ಷಣೆ ಪಡೆದಿತ್ತು. ಅಲ್ಲದೆ ಸತತ ಮೂರು ದಿನಗಳ ಕಾಲ ಟ್ರೆಂಡಿಂಗ್​ನಲ್ಲಿತ್ತು.

ಇದನ್ನೂ ಓದಿ: ವಿವಾಹದ ನಂತರ ಸಲಿಂಗಿಯಾದ ನಟ ರಣವೀರ್​ ಸಿಂಗ್​..!

ಮತ್ತೆ ಈಗ 'ಯಜಮಾನ' ಚಿತ್ರದ ಟ್ರೈಲರ್ ಟ್ರೆಂಡಿಂಗ್​ನಲ್ಲಿದೆ. ಹೌದು, ನಿನ್ನೆಯಷ್ಟೇ ಬಿಡುಗಡೆಯಾದ ಈ ಟ್ರೈಲರ್​ಗೆ ಚಿತ್ರಪ್ರೇಮಿಗಳಿಂದ ಭರ್ಜರಿ ಪ್ರತಿಕ್ರಿಯೆ ಸಿಗುತ್ತಿದೆ. ಯೂಟ್ಯೂಬ್‍ನಲ್ಲಿ 'ಯಜಮಾನ' ಟ್ರೈಲರ್ ಈಗ ಮತ್ತೊಂದು ಹೊಸ ದಾಖಲೆ ಬರೆದಿದೆ.

ಒಂದೂವರೆ ವರ್ಷಗಳ ನಂತರ `ಯಜಮಾನ' ಮೂಲಕ ದರ್ಶನ್ ಮತ್ತೆ ತೆರೆಗಪ್ಪಳಿಸೋಕೆ  ಸಜ್ಜಾಗಿದ್ದಾರೆ. ಈ ಸಿನಿಮಾದ 2 ನಿಮಿಷ 46 ಸೆಕೆಂಡುಗಳ ಟ್ರೈಲರ್ ಕಂಡು ದರ್ಶನ್ ಅಭಿಮಾನಿಗಳು ಹಬ್ಬ ಆಚರಿಸುತ್ತಿದ್ದಾರೆ.

'ಯಜಮಾನ'ನ ಟ್ರೈಲರ್ ನೋಡಲು ದಾಸನ ಅಭಿಮಾನಿಗಳು ಯೂಟ್ಯೂಬ್‍ಗೆ ಲಗ್ಗೆ ಇಡುತ್ತಿದ್ದಾರೆ. ಅದರ ಪರಿಣಾಮವೇ 'ಯಜಮಾನ' ಟ್ರೈಲರ್ ಯ್ಯೂಟ್ಯೂಬ್​ನಲ್ಲಿ ಹೊಸ ದಾಖಲೆ ಬರೆದಿದ್ದು, ಯೂಟ್ಯೂಬ್ ಟ್ರೆಂಡಿಂಗ್‍ನಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಬಿಡುಗಡೆಯಾದ 24 ಗಂಟೆಯೊಳಗೆ 80 ಲಕ್ಷ ವೀಕ್ಷಣೆ ಪಡೆದುಕೊಂಡು ಮುನ್ನುಗ್ಗುತ್ತಿದೆ.

'ಯಜಮಾನ' ಈ ಅಬ್ಬರಕ್ಕೆ ಯೂಟ್ಯೂಬ್‌ ಸಹ ಫಿದಾ ಆಗಿದೆ. ಅದಕ್ಕೆ 'ಯಜಮಾನ'ನ ಗುಣಗಾನ ಮಾಡಿ ಯೂಟ್ಯೂಬ್ ಇಂಡಿಯಾ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ 'ಯಜಮಾನ' ಟ್ರೈಲರ್​ ಶೇರ್​ ಮಾಡಿದೆ.ಇದನ್ನೂ ಓದಿ: ಪ್ರಿನ್ಸ್​ ಮಹೇಶ್​ ಬಾಬು ಜತೆ ಸೆಲ್ಫಿಗೆ ಇಲ್ಲಿದೆ ಸುವರ್ಣಾವಕಾಶ..!

ಶೈಲಜಾ ನಾಗ್-ಬಿ.ಸುರೇಶ್​ ನಿರ್ಮಾಣದ 'ಯಜಮಾನ' ಸಿನಿಮಾವನ್ನು ಪೊನ್ ಕುಮಾರ್ ನಿರ್ದೇಶಿಸಿದ್ದಾರೆ. ದೇವರಾಜ್, ಡಾಲಿ ಧನಂಜಯ್, ರಶ್ಮಿಕಾ ಮಂದಣ್ಣ, ಸಾಧು ಕೋಕಿಲಾ, ಹೀಗೆ ದೊಡ್ಡ ತಾರಾಬಳಗವೇ ಇದರಲ್ಲಿದೆ. ಈಗಾಗಲೇ ಹಾಡುಗಳಿಂದಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ 'ಯಜಮಾನ' ತೆರೆಗಪ್ಪಳಿಸಿದ ಮೇಲೆ ಯಾವ ರೀತಿ ಜಾದೂ ಮಾಡುತ್ತೋ ಕಾದುನೋಡಬೇಕಿದೆ.

ನಿಕ್​-ಪ್ರಿಯಾಂಕಾ ಅರಿಶಿಣ ಶಾಸ್ತ್ರದಲ್ಲಿ ವರನ ಅಂಗಿಗೆ ಕೈ ಹಾಕಿದ ಹುಡುಗಿ ಯಾರು..?

First published:February 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...