Yajamana Movie: 'ಯಜಮಾನ'ನ ಅಬ್ಬರಕ್ಕೆ ದಾಖಲೆಗಳೆಲ್ಲ ಪುಡಿ ಪುಡಿ: ಭಾವುಕರಾಗಿ ಹರಸಿದ ಜಗ್ಗೇಶ್​..!

ನವರಸ ನಾಯಕ ಜಗ್ಗೇಶ್​ ಸಾಮಾನ್ಯವಾಗಿ ಕನ್ನಡ ಸಿನಿ ರಂಗದಲ್ಲಿ ಯಾರಾದರೂ ಸಾಧನೆ ಮಾಡಿದರೆ ಸಾಕು ಅವರಿಗೆ ಮನಪೂರ್ತಿಯಾಗಿ ಶುಭ ಕೋರುತ್ತಾರೆ. ಆದರೆ ಈ ಬಾರಿ ದರ್ಶನ್​ ಸಾಧನೆಗೆ ಭಾವುಕರಾಗಿ ಹರಸಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ 'ಯಜಮಾನ'ನ ಅಬ್ಬರಕ್ಕೆ ಸಾಕಷ್ಟು ದಾಖಲೆಗಳು ಪುಡಿ ಪುಡಿಯಾಗಿವೆ.

'ಯಜಮಾನ'ನಿಗೆ ಶೂಭ ಕೋರಿದ ನಟ ಜಗ್ಗೇಶ್​

'ಯಜಮಾನ'ನಿಗೆ ಶೂಭ ಕೋರಿದ ನಟ ಜಗ್ಗೇಶ್​

  • News18
  • Last Updated :
  • Share this:
-ಅನಿತಾ ಈ, ಆನಂದ್​ ಸಾಲುಂಡಿ, 

'ಯಜಮಾನ'ನ ಅಬ್ಬರಕ್ಕೆ ದಾಖಲೆಗಳೆಲ್ಲ ಪುಡಿ ಪುಡಿ... ಕನ್ನಡದ `ಯಜಮಾನ'ನ ದಂಡಯಾತ್ರೆಗೆ ಸಿಲುಕಿ ತಮಿಳು, ತೆಲುಗು ಸಿನಿಮಾಗಳ ಹೆಸರಲ್ಲಿದ್ದ ದಾಖಲೆಗಳು ಕೂಡ ಕೈವಶವಾಗಿವೆ. ಇನ್ನು ದರ್ಶನ್​ ಸಾಧನೆಗೆ ಮೆಚ್ಚಿದ ಜಗ್ಗೇಶ್​ ಭಾವುಕರಾಗಿ ಹರಸಿದ್ದಾರೆ. ಆ ಕುರಿತ ಒಂದು ವರದಿ ಇಲ್ಲಿದೆ ಓದಿ...

ಇದನ್ನೂ ಓದಿ: Yajamana Movie: ಟ್ರೆಂಡಿಂಗ್​ನಲ್ಲಿ ಪ್ರಥಮ ಸ್ಥಾನದಲ್ಲಿದೆ 'ಯಜಮಾನ'ನ ಆನೆ..!

ಸ್ಯಾಂಡಲ್‍ವುಡ್ 'ಯಜಮಾನ'ನ ಅಬ್ಬರ ಜೋರಾಗಿದೆ. ಇವನ ಆರ್ಭಟಕ್ಕೆ ಬೇರೆ ಭಾಷೆಯ ಸಿನಿ ಇಂಡಸ್ಟ್ರಿ ಸಹ ನಡುಗುತ್ತಿದೆ. ಇಷ್ಟು ದಿನ ಪರಭಾಷೆ ಸಿನಿಮಾಗಳ ಹೆಸರಲ್ಲಿದ್ದ ದಾಖಲೆಗಳೆಲ್ಲ ಕನ್ನಡ ಚಿತ್ರವೊಂದರ ಪಾಲಾಗಿವೆ. ಹೌದು, 'ಯಜಮಾನ' ಟ್ರೈಲರ್​ಗೆ ಕನ್ನಡ ಚಿತ್ರರಂಗ ಕಂಡು ಕೇಳರಿಯದಷ್ಟು ದೊಡ್ಡ ಮಟ್ಟದ ಪ್ರತಿಕ್ರಿಯೆ ಸಿಕ್ಕಿದೆಡ.

ಯೂಟ್ಯೂಬ್‍ನಲ್ಲಿ ದರ್ಶನ್ ಅಭಿಮಾನಿಗಳದ್ದೇ ಕಾರುಬಾರು. ಪರಿಣಾಮ ಬಿಡುಗಡೆಯಾದ ಒಂದೇ ದಿನದಲ್ಲಿ ಯಜಮಾನ ಟ್ರೈಲರ್​ಗೆ ಒಂದು ಕೋಟಿಗೂ ಹೆಚ್ಚು ವೀಕ್ಷಣೆ ಸಿಕ್ಕಿದೆ.  ದಕ್ಷಿಣ ಸಿನಿ ಇಂಡಸ್ಟ್ರಿಯಲ್ಲಿ ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟೊಂದು ವೀಕ್ಷಣೆ ಪಡೆದ ಎರಡನೇ ಟ್ರೈಲರ್ ಎಂಬ ಹೆಗ್ಗಳಿಕೆ ಪಾತ್ರನಾಗಿದ್ದಾನೆ 'ಯಜಮಾನ'.

ಇದನ್ನೂ ಓದಿ: ಮಹೇಶ್​ ಬಾಬು ಅಭಿನಯದ 'ಮಹರ್ಷಿ' ಸಿನಿಮಾದ ಸ್ಟೋರಿ ಲೀಕ್​: ಅಭಿಮಾನಿಗಳು ಶಾಕ್​..!

ಅದಕ್ಕಾಗಿಯೇ ಯೂಟ್ಯೂಬ್​ ಇಂಡಿಯಾ ತನ್ನ ಅಧಿಕೃತ ಟ್ವಿಟರ್​ ಖಾತೆಯಲ್ಲಿ 'ಯಜಮಾನ'ನಿಗೆ ಮೆಚ್ಚುಗೆ ವ್ಯಕ್ತಪಡಿಸಿದೆ.ನಟ ಜಗ್ಗೇಶ್​ ಸಹ 'ಯಜಮಾನ'ನ ಟ್ರೈಲರ್​ ಅಬ್ಬರಕ್ಕೆ ಖುಷಿಯಾಗಿದ್ದಾರೆ. ಹೌದು, ಅದಕ್ಕೆ ಈ ಸಿನಿಮಾವನ್ನು ಚಿತ್ರಮಂದಿರದಲ್ಲೇ ವೀಕ್ಷಿಸುವುದಾಗಿ ಟ್ವೀಟ್​ ಮಾಡುವ ಮೂಲಕ ಶುಭ ಕೋರಿದ್ದಾರೆ.ಜಗ್ಗೇಶ್​ ಟ್ವೀಟ್​ಗೆ ದರ್ಶನ್​ ಧನ್ಯವಾದ ತಿಳಿಸಿದರೆ, ಅದಕ್ಕೆ ಮತ್ತೆ ರೀಟ್ವೀಟ್​ ಮಾಡಿರುವ ಜಗ್ಗೇಶ್​, ನೀನು ತಂದೆಗೆ ತಕ್ಕ ಮಗ, ನಿನ್ನ ಸಾಧನೆ ನೋಡಲು ಸೀನಣ್ಣ ಇರಬೇಕಿತ್ತು. ಸ್ವರ್ಗದಿಂದಲೇ ನಿನಗೆ ಹರಸುತ್ತಾರೆ' ಎಂದು ಭಾವುಕರಾಗಿ ಬರೆದಿದ್ದಾರೆ.

 ಅಂದಹಾಗೆ ಮೊದಲ ಸ್ಥಾನದಲ್ಲಿ ವಿಜಯ್ ನಟನೆಯ 'ಮರ್ಸೆಲ್' ಸಿನಿಮಾ ಟ್ರೈಲರ್ ಇದ್ದು, ಇದಕ್ಕೆ ಒಂದೇ ದಿನದಲ್ಲಿ 1ಕೋಟಿ 10 ಲಕ್ಷ ವೀಕ್ಷಣೆ ಸಿಕ್ಕಿತ್ತು. ಹಾಗೆ ಪ್ರಿನ್ಸ್​ ಮಹೇಶ್​ಬಾಬು ಅಭಿನಯದ 'ಭರತ್ ಅನೆ ನೇನು' ಸಿನಿಮಾದ ಟ್ರೈಲರ್​  9 ಕೋಟಿ 10 ಲಕ್ಷ ವೀಕ್ಷಣೆ ಪಡೆದುಕೊಂಡು ಮೂರನೇ ಸ್ಥಾನದಲ್ಲಿದ್ದರೆ, 4 ನೇ ಸ್ಥಾನದಲ್ಲಿ 8 ಕೋಟಿ 70 ಲಕ್ಷ  ವೀಕ್ಷಣೆ ಪಡೆದಿದ್ದ 'ಕಾಲಾ' ಸಿನಿಮಾ ಟ್ರೈಲರ್ ಇದೆ.

Yajamana Trailer: ಅಭಿಮಾನಿಗಳೊಂದಿಗೆ 'ಯಜಮಾನ'ನ ಸಂಭ್ರಮಾಚರಣೆ..!
First published: