ಕುದುರೆ ಆರೈಕೆಯಲ್ಲಿ ವಿಜಯಲಕ್ಷ್ಮಿ ದರ್ಶನ್​: ವೈರಲ್​ ಆಗುತ್ತಿದೆ ಫೋಟೋ..!

ಮಗ ತೆಗೆದ ಫೋಟೋ ಬಗ್ಗೆ ವಿಜಯಲಕ್ಷ್ಮಿ ಖುಷಿಯಿಂದ ಟ್ವೀಟ್​ ಮಾಡಿದ್ದಾರೆ. ಜೊತೆಗೆ ಭಾನುವಾರವನ್ನು ಸಂತೋಷದಿಂದ ಮಗನ ಜೊತೆ ತೋಟದಲ್ಲಿ ಕಳೆದಿರುವುದಾಗಿಯೂ ಹಂಚಿಕೊಂಡಿದ್ದಾರೆ ದರ್ಶನ್​ ಮಡದಿ ವಿಜಯಲಕ್ಷ್ಮಿ.

ವಿಜಯಲಕ್ಷ್ಮಿ ದರ್ಶನ್​

ವಿಜಯಲಕ್ಷ್ಮಿ ದರ್ಶನ್​

  • Share this:
ವಿಜಯಲಕ್ಷ್ಮಿ ದರ್ಶನ್​ ಸಾಮಾಜಿಕ ಜಾಲತಾಣದಲ್ಲಿ ಖಾತೆಯನ್ನು ಹೊಂದಿದ್ದಾರೆ. ಆದರೆ ಬೇರೆ ಸೆಲೆಬ್ರಿಟಿಗಳಷ್ಟು ಸಕ್ರಿಯವಾಗಿರುವುದಿಲ್ಲ. ಆಗೊಂದು ಈಗೊಂದು ಅಂತ ಪೋಸ್ಟ್ ಮಾಡುತ್ತಿರುತ್ತಾರೆ. ಅದರಲ್ಲೂ ವೈಯಕ್ತಿಕ ವಿಷಯಗಳ ಕುರಿತು ಹಂಚಿಕೊಳ್ಳುವುದು ತೀರಾ ವಿರಳ. 

ಅಪರೂಪಕ್ಕೆ ಟ್ವೀಟ್​ ಮಾಡುವ ವಿಜಯಲಕ್ಷ್ಮಿ ದರ್ಶನ್​ ನಿನ್ನೆಯಷ್ಟೆ ಒಂದು ಪೋಸ್ಟ್ ಮಾಡಿದ್ದು, ಅದು ಈಗ ವೈರಲ್​ ಆಗುತ್ತಿದೆ. ವಿಜಯಲಕ್ಷ್ಮಿ ದರ್ಶನ್​ ಮೈಸೂರಿನಲ್ಲಿರುವ ತೋಟದ ಮನೆಗೆ ಮಗನ ಜೊತೆ ಹೋಗಿದ್ದಾರೆ. ಅಲ್ಲಿ ಕುದುರೆ ಜೊತೆ ಇದ್ದಾಗ ಮಗ ವಿನೀಶ್​ ಅಮ್ಮನ ಫೋಟೋ ಕ್ಲಿಕ್ಕಿಸಿದ್ದಾನೆ.ಮಗ ತೆಗೆದ ಫೋಟೋ ಬಗ್ಗೆ ವಿಜಯಲಕ್ಷ್ಮಿ ಖುಷಿಯಿಂದ ಟ್ವೀಟ್​ ಮಾಡಿದ್ದಾರೆ. ಜೊತೆಗೆ ಭಾನುವಾರವನ್ನು ಸಂತೋಷದಿಂದ ಮಗನ ಜೊತೆ ತೋಟದಲ್ಲಿ ಕಳೆದಿರುವುದಾಗಿಯೂ ಹಂಚಿಕೊಂಡಿದ್ದಾರೆ ದರ್ಶನ್​ ಮಡದಿ.

D boss Darshan Wife Vijayalakshmi supports small business during lockdown period
ದರ್ಶನ್​-ವಿಜಯಲಕ್ಷ್ಮಿ
ವಿಜಯಲಕ್ಷ್ಮಿ ಕುದುರೆ ಜೊತೆಗಿರುವ ಫೋಟೋ ಈಗ ದರ್ಶನ್​ ಅವರ ಅಭಿಮಾನಿಗಳ ಪುಟಗಳಲ್ಲಿ ಹರಿದಾಡುತ್ತಿದೆ. ಟ್ವಿಟರ್, ಫೇಸ್​ಬುಕ್​ ಹಾಗೂ ಇನ್​ಸ್ಟಾಗ್ರಾಂನಲ್ಲಿ ವೈರಲ್​ ಆಗುತ್ತಿದೆ.

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ #ಡಿಬಾಸ್ ಹಾಗೂ ವಿಜಯಲಕ್ಷ್ಮಿ ಅತ್ತಿಗೆ ಅವರ ಸೂಪರ್ ಫೋಟೋ😍👌👌#ChallengingStarDarshan #DBoss@dasadarshan @vijayaananth2 @DBoss_Hudugaru_ pic.twitter.com/JcY400HCe5ದರ್ಶನ್​ ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಮೈಸೂರಿನ ತೋಟಕ್ಕೆ ಹೋಗಿ ಅಲ್ಲೇ ಕೆಲ ದಿನಗಳನ್ನು ಕಳೆದಿದ್ದರು. ಜೊತೆಗೆ ತಮ್ಮ ಸಾಕುಪ್ರಾಣಿಗಳೊಂದಿಗೆ ಆರಾಮಾಗಿ ಕಳೆದಿದ್ದಾರೆ. ಆಗಲೇ ನಟ ದೇವರಾಜ್ ಹಾಗೂ ಪ್ರಜ್ವಲ್​ ದೇವರಾಜ್​ ಅಲ್ಲಿಗೆ ಭೇಟಿ ನೀಡಿದ್ದರು. ನಂತರ ದರ್ಶನ್​ ಅವರು ತೋಡದಲ್ಲಿ ಕುದುರೆ ಆರೈಕೆಯಲ್ಲಿದ್ದ ಹಾಗೂ ಸವಾರಿ ಮಾಡಿದ ವಿಡಿಯೋಗಳು ವೈರಲ್​ ಆಗಿದ್ದವು.ಇದನ್ನೂ ಓದಿ: Deepika Padukone: ಟ್ವಿಟರ್​-ಇನ್​ಸ್ಟಾಗ್ರಾಂನಲ್ಲಿ ಹೆಸರು ಬದಲಿಸಿದ ದೀಪಿಕಾ ಪಡುಕೋಣೆ: ಆ ಜೀವವನ್ನು ಮತ್ತೆ ಜೀವಿಸಬೇಕೆಂದ ನಟಿ..!
Published by:Anitha E
First published: