ಯಜಮಾನ ನೋಡಿದ ಡಿಬಾಸ್​ ಮಡದಿ ವಿಜಯಲಕ್ಷ್ಮಿ ದರ್ಶನ್​ ಟ್ವಿಟರ್​ನಲ್ಲಿ ಬರೆದುಕೊಂಡಿದ್ದೇನು ಗೊತ್ತಾ..?

ಡಿಬಾಸ್​ ಅಭಿನಯದ ಯಜಮಾನ ಸಿನಿಮಾ ನೋಡಿದ ದರ್ಶನ್​ ಮಡದಿ ಟ್ವಿಟರ್​ನಲ್ಲಿ ಬರೆದುಕೊಂಡಿದ್ದೇನು. ಇದೇ ಮೊದಲ ಬಾರಿಗೆ ಗಂಡನ ಸಿನಿಮಾ ಬಗ್ಗೆ ವಿಜಯಲಕ್ಷ್ಮಿ ಬರೆದುಕೊಂಡಿದ್ದಾದರೂ ಏನು ಗೊತ್ತಾ..?

Anitha E | news18
Updated:April 17, 2019, 5:58 PM IST
ಯಜಮಾನ ನೋಡಿದ ಡಿಬಾಸ್​ ಮಡದಿ ವಿಜಯಲಕ್ಷ್ಮಿ ದರ್ಶನ್​ ಟ್ವಿಟರ್​ನಲ್ಲಿ ಬರೆದುಕೊಂಡಿದ್ದೇನು ಗೊತ್ತಾ..?
ಮಡದಿ ವಿಜಯಲಕ್ಷ್ಮಿ ಜತೆ ದರ್ಶನ್​
  • News18
  • Last Updated: April 17, 2019, 5:58 PM IST
  • Share this:
- ಅನಿತಾ ಈ, 

ಸ್ಯಾಂಡಲ್​ವುಡ್​ ಡಿಬಾಸ್​ ದರ್ಶನ್​ ಅಭಿನಯದ 'ಯಜಮಾನ' ಸಿನಿಮಾ ಎಲ್ಲೆಡೆ ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಹೀಗಿರುವಾಗಲೇ ದರ್ಶನ್​ರ ಪ್ರೀತಿಯ ಮಡದಿ ಇದೇ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ಗಂಡನ ಸಿನಿಮಾದ ಬಗ್ಗೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಚಿತ್ರೀಕರಣಕ್ಕೆ ತೆರೆ ಎಳೆದ 'ಝಾನ್ಸಿ': ಲಕ್ಷ್ಮೀ ರೈ ಅಭಿನಯದ ಚಿತ್ರದ ಡಬ್ಬಿಂಗ್​ ಹಕ್ಕಿಗೆ ಹೆಚ್ಚಿದ ಬೇಡಿಕೆ..!

ಹೌದು, ವಿಜಯಲಕ್ಷ್ಮಿ ದರ್ಶನ್​ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡರೂ ಗಂಡನ ಸಿನಿಮಾ ಬಗ್ಗೆ ಅಷ್ಟಾಗಿ ಎಲ್ಲೂ ಏನೂ ಬರೆಯುತ್ತಿರಲಿಲ್ಲ. ಸದಾ ಗಂಡ-ಮಗ ಫೋಟೋಗೂಳು ತಮ್ಮ ಹವ್ಯಾಸಗಳ ಕುರಿತೇ ಹೆಚ್ಚು ಬರೆದುಕೊಳ್ಳುತ್ತಾರೆ.

ಆದರೆ ಮೊನ್ನೆ ಸೋಮವಾರ ಅಂದರೆ ಏ. 15ರಂದು ಅಮೆಜಾನ್​ ಪ್ರೈನಲ್ಲಿ 'ಯಜಮಾನ' ಚಿತ್ರ ಬಿಡುಗಡೆಯಾಗಿದೆ. ಅದನ್ನು ನೋಡುತ್ತಲೇ ತಾನು ತನ್ನ ವಾರವನ್ನು ಆರಂಭಿಸಿದ್ದೇನೆ. ನೀವೂ ನೋಡಿ ಎಂದು ಟ್ವೀಟ್​ ಮಾಡಿದ್ದಾರೆ ವಿಜಯಲಕ್ಷ್ಮಿ.

 ಹರಿಕೃಷ್ಣ ಹಾಗೂ ಪಿ.ಕುಮಾರ್​ ನಿರ್ದೇಶನದ 'ಯಜಮಾನ' ಚಿತ್ರದಲ್ಲಿ ದರ್ಶನ್​ಗೆ ರಶ್ಮಿಕಾ ನಾಯಕಿಯಾಗಿ ಅಭಿನಯಿಸಿದ್ದು, ತಾನ್ಯಾ ಹೋಪ್​ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: 2 ಕೋಟಿ ಕೊಟ್ಟರೂ ಆ ಕೆಲಸ ಮಾತ್ರ ಮಾಡಲ್ಲ ಎಂದ ರೌಡಿ ಬೇಬಿ ಸಾಯಿ ಪಲ್ಲವಿ..!

ಈ ಚಿತ್ರದಲ್ಲಿ ಬರುವ ಮೊದಲ ಹಾಡು 'ಶಿವನಂದಿ ...' ಹಾಡಿನಲ್ಲಿ ದರ್ಶನ್​ ಮಗ ವಿನೀಶ್​ ಸಹ ಅಭಿನಯಿಸಿದ್ದು, ಈ ಮೂಲಕ ಚಂದನವನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರ ಇನ್ನೂ ಬಾಕ್ಸಾಫಿಸ್​ನಲ್ಲಿ ಸದ್ದು ಮಾಡುತ್ತಿದೆ.

PHOTOS: ನಟ ನಾನಿಯ ಮುದ್ದು ಗೊಂಬೆ ಶ್ರದ್ಧಾ ಶ್ರೀನಾಥ್​ರ ಲೆಟೆಸ್ಟ್​ ಫೋಟೋಶೂಟ್​
First published: April 17, 2019, 5:40 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading