Robert Movie: ರಾಬರ್ಟ್​ ಪೋಸ್ಟರ್​ನಲ್ಲಿರುವ ಬೈಕ್ ಎಲ್ಲಿ, ಹೇಗೆ ಸಿದ್ಧವಾಯಿತು ಗೊತ್ತಾ..?

ರಾಬರ್ಟ್​ ಪೋಸ್ಟರ್​ನಲ್ಲಿರುವ ಬೈಕ್​ ಕುರಿತಾದ ಮಾಹಿತಿಯೊಂದು ಈಗ ಲಭ್ಯವಾಗಿದೆ. ದಚ್ಚು ಸಖತ್ ಸ್ಟೈಲಿಶ್​ ಆಗಿ ಕಾಣಿಸಿಕೊಂಡಿರುವ ಈ ಬೈಕ್​ ಅನ್ನು ಎಲ್ಲಿ ಹಾಗೂ ಯಾರು ವಿನ್ಯಾಸಗೊಳಿಸಿದ್ದಾರೆ ಅನ್ನೋ ಮಾಹಿತಿಗೆ ಈ ವರದಿಯಲ್ಲಿದೆ.

Anitha E | news18
Updated:June 6, 2019, 6:58 PM IST
Robert Movie: ರಾಬರ್ಟ್​ ಪೋಸ್ಟರ್​ನಲ್ಲಿರುವ ಬೈಕ್ ಎಲ್ಲಿ, ಹೇಗೆ ಸಿದ್ಧವಾಯಿತು ಗೊತ್ತಾ..?
ರಾಬರ್ಟ್​ ಬೈಕ್​
  • News18
  • Last Updated: June 6, 2019, 6:58 PM IST
  • Share this:
- ಅನಿತಾ ಈ,

ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ 'ರಾಬರ್ಟ್​' ಸಿನಿಮಾದ ಪೋಸ್ಟರ್​ ಈಗಷ್ಟೆ ಬಿಡುಗೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಹೀಗಿರುವಾಗಲೇ 'ರಾಬರ್ಟ್'​ ಪೋಸ್ಟರ್​ನಲ್ಲಿರುವ ಬೈಕ್​ ಕುರಿತಾದ ಮಾಹಿತಿಯೊಂದು ಈಗ ಲಭ್ಯವಾಗಿದೆ.

ಹೌದು, ದರ್ಶನ್​ 'ರಾಬರ್ಟ್'​ ಸಿನಿಮಾದಲ್ಲಿ ಬಳಸಿರುವ ಬೈಕ್​ನ ಚಿತ್ರಗಳು ಹಾಗೂ ಅದರ ವಿನ್ಯಾಸ ಮಾಡುತ್ತಿರುವ ಫೋಟೊಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
 View this post on Instagram
 

Exclusive Making Of #Roberrtthemeposter bike link on bio


A post shared by D TEAM HUBBALLI- R 🔵 (@d_team_hubballi) on

ದರ್ಶನ್​ ಈ ಹಿಂದೆ ಮೇ ತಿಂಗಳಿನಲ್ಲಿ ಅಭಿಮಾನಿಯೊಬ್ಬರ ಆಲ್ಟರ್​ ಮಾಡಿರುವ ಬುಲೆಟ್​ ಅನ್ನು ಓಡಿಸಿದ್ದು ಸುದ್ದಿಯಾಗಿತ್ತು. ಅದು 'ರಾಬರ್ಟ್​' ಸಿನಿಮಾಗಾಗಿಯೇ ಅದರ ಟ್ರಯಲ್​ ಮಾಡಿದ್ದರಂತೆ ಡಿಬಾಸ್​.

ನಂತರ ಅದರಂತೆಯೇ ಬೈಕ್​ ಅನ್ನು ವಿನ್ಯಾಸ ಮಾಡಿಸಿದ್ದು, ಬೆಂಗಳೂರಿನಲ್ಲೇ ಬೈಕ್​ ಆಲ್ಟರ್​ ಮಾಡುವವರ ಬಳಿ ತಮಗೆ ಬೇಕಾದಂತೆ ಅದನ್ನು ವಿನ್ಯಾಸ ಮಾಡಿಸಿದ್ದಾರೆ. ಆದರೆ ಬೈಕ್​ ಆಲ್ಟರ್​ ಮಾಡಿದ ವ್ಯಕ್ತಿಯ ಮುಖವನ್ನು ಇನ್ನೂ ಎಲ್ಲೂ ಬಹಿರಂಗಪಡಿಸಿಲ್ಲ.

ಸುಮಾರು ಒಂದುವಾರಗಳ ಕಾಲ ದರ್ಶನ್​ ಬಳಸಿರುವ ಬೈಕ್​ ಅನ್ನು ಆಲ್ಟರ್ ಮಾಡಿಸಲಾಗಿದೆಯಂತೆ. ಅದರಲ್ಲೂ ವಿಶೇಷವಾಗಿ 'ರಾಬರ್ಟ್​' ಪಾತ್ರಕ್ಕೆ ತಕ್ಕಂತೆ ಬೈಕ್​ ಅನ್ನು ವಿನ್ಯಾಸಗೊಳಿಸಲಾಗಿದೆ.

ಇದನ್ನೂ ಓದಿ: #RoberrtThemePoster: ಟ್ವಿಟರ್​ನಲ್ಲಿ ಟ್ರೆಂಡಿಂಗ್​ನಲ್ಲಿದ್ದಾನೆ ರಾಬರ್ಟ್​: ಸಾಮಾಜಿಕ ಜಾಲತಾಣದಲ್ಲಿ ರಾಬರ್ಟ್​-ಪೈಲ್ವಾನ್​ ಪೋಸ್ಟರ್​ ವಾರ್

ದರ್ಶನ್​ ಅವರಿಗೆ ಕನ್ನಡಿಗರು ಎಂದರೆ ಅಪಾರವಾದ ಪ್ರೀತಿ. ಈ ಹಿಂದೆ 'ಯಜಮಾನ' ಸಿನಿಮಾದಲ್ಲಿ ಅವರು ಕೇವಲ ಕನ್ನಡಿಗರಿಗೆ ಮಾತ್ರ ಅವಕಾಶ ನೀಡಿದ್ದರು. ಅಂತೆಯೇ ಈಗ ಬೈಕ್​ ಅನ್ನೂ ಸ್ಥಳೀಯವಾಗಿಯೇ ವಿನ್ಯಾಸ ಮಾಡಿಸಿದ್ದಾರಂತೆ.

Photos: ಬೋಲ್ಡ್​ ಉಡುಗೆ ತೊಟ್ಟು ಟೀಕೆಗೆ ಗುರಿಯಾದ ನಟಿ ಪ್ರಿಯಾಂಕಾ ಚೋಪ್ರಾ..!

First published:June 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ