#RoberrtThemePoster: ಟ್ವಿಟರ್​ನಲ್ಲಿ ಟ್ರೆಂಡಿಂಗ್​ನಲ್ಲಿದ್ದಾನೆ ರಾಬರ್ಟ್​: ಸಾಮಾಜಿಕ ಜಾಲತಾಣದಲ್ಲಿ ರಾಬರ್ಟ್​-ಪೈಲ್ವಾನ್​ ಪೋಸ್ಟರ್​ ವಾರ್

ಸ್ಯಾಂಡಲ್​ವುಡ್​ನಲ್ಲಿ ದಚ್ಚು ಹಾಗೂ ಕಿಚ್ಚನ ಸಿನಿಮಾಗಳ ಕುರಿತಾದ ಯಾವುದೇ ವಿಷಯ ಹೊರ ಬಂದರೂ ಅದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್​ನಲ್ಲಿರುತ್ತವೆ. ಈಗಲೂ ಸಹ ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾದ ಥೀಮ್​ ಪೋಸ್ಟರ್​ ಟ್ವಿಟರ್​ನಲ್ಲಿ ಟ್ರೆಂಡಿಂಗ್​ನಲ್ಲಿದೆ.

Anitha E | news18
Updated:June 5, 2019, 3:12 PM IST
#RoberrtThemePoster: ಟ್ವಿಟರ್​ನಲ್ಲಿ ಟ್ರೆಂಡಿಂಗ್​ನಲ್ಲಿದ್ದಾನೆ ರಾಬರ್ಟ್​: ಸಾಮಾಜಿಕ ಜಾಲತಾಣದಲ್ಲಿ ರಾಬರ್ಟ್​-ಪೈಲ್ವಾನ್​ ಪೋಸ್ಟರ್​ ವಾರ್
ಪೋಸ್ಟರ್​ ವಾರ್​
  • News18
  • Last Updated: June 5, 2019, 3:12 PM IST
  • Share this:

- ಅನಿತಾ ಈ, 


ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಸ್ಟಾರ್​ಗಳ ಪೋಸ್ಟರ್​ ವಾರ್​ ಆರಂಭವಾಗಿದೆ. ನಿನ್ನೆಯಿಂದ ಕಿಚ್ಚ ಮತ್ತು ದರ್ಶನ್​ ಅವರ ಹೊಸ ಸಿನಿಮಾಗಳ ಪೋಸ್ಟರ್​ಗಳದ್ದೇ ಕಾರುಬಾರು. ಕೇವಲ ಒಂದು ದಿನದ ಅಂತರದಲ್ಲಿ 'ರಾಬರ್ಟ್​' ಹಾಗೂ 'ಪೈಲ್ವಾನ್​' ಸಿನಿಮಾದ ಪೋಸ್ಟರ್​ಗಳು ಬಿಡುಗಡೆಯಾಗಿವೆ.ಹೌದು, ಸ್ಯಾಂಡಲ್​ವುಡ್​ನಲ್ಲಿ ದಚ್ಚು ಹಾಗೂ ಕಿಚ್ಚನ ಸಿನಿಮಾಗಳ ಕುರಿತಾದ ಯಾವುದೇ ವಿಷಯ ಹೊರ ಬಂದರೂ ಅದು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್​ನಲ್ಲಿರುತ್ತವೆ. ಅದರಲ್ಲೂ ಅಭಿಮಾನಿಗಳ ದಾಸ ದರ್ಶನ್​ ಅವರ ಕುರಿತಾದ ಯಾವುದೇ ವಿಷಯವಾದರೂ ಅದು ಟ್ರೆಂಡ್​ ಆಗುತ್ತದೆ.


ಈಗಲೂ ಸಹ ದಚ್ಚು ಹಾಗೂ ಕಿಚ್ಚನ ಅಭಿಮಾನಿಗಳು ತಮ್ಮ ತಮ್ಮ ನೆಚ್ಚಿನ ನಟ ಸಿನಿಮಾ ಪೋಸ್ಟರ್​ ಅನ್ನು ಟ್ರೆಂಡಿಂಗ್​ನಲ್ಲಿ ಇಡಲು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭಿಸಿದ್ದಾರೆ.
ಪೋಸ್ಟರ್​ ವಾರ್​

ದರ್ಶನ್​ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ರಾಬರ್ಟ್​' ಥೀಮ್​ ಪೋಸ್ಟರ್​ ಬಿಡುಗಡೆಯಾಗಲಿದೆ ಅನ್ನೋ ಸುದ್ದಿಯೇ ನಿನ್ನೆಯಿಂದ ವೈರಲ್​ ಆಗಿತ್ತು. ಇನ್ನು ಇಂದು ಬೆಳಿಗ್ಗೆ ಬಿಡುಗಡೆಯಾಗಿರುವ ಥೀಮ್​ ಪೋಸ್ಟರ್​ ಟ್ವಿಟರ್​ನಲ್ಲಿ ಟೇಲರ್ಡ್​ ಟ್ರೆಂಡಿಂಗ್​ನಲ್ಲಿದೆ.


ಅಷ್ಟೇಅಲ್ಲ ದರ್ಶನ್​ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ರೀಟ್ವೀಟ್​ ಅಭಿಯಾನ ಆರಂಭಿಸಿದ್ದಾರೆ. ಈ ಹಿಂದೆ 'ಯಜಮಾನ' ಸಿನಿಮಾದ ಪೋಸ್ಟರ್​ ಹಾಗೂ ಹಾಡುಗಳು ಬಿಡುಗಡೆಯಾದಾಗಲೂ ಇದೇ ರೀತಿ ಸಾಮಾಜಿಕ ಜಾಲತಾಣ ಹಾಗೂ ಯೂಟ್ಯೂಬ್​ನಲ್ಲಿ ಟ್ರೆಂಡ್​ ಆಗಿತ್ತು.ಇನ್ನು ರಾಬರ್ಟ್​ ಥೀಮ್​ ಪೋಸ್ಟರ್​ ಬಿಡುಗಡೆಯಾದ ಕೂಡಲೇ ಅಭಿಮಾನಿಯೊಬ್ಬರು ತಮ್ಮ ಕಾರಿನ ಮೇಲೆ ಅದನ್ನು ಹಾಕಿಸಿಕೊಂಡಿದ್ದಾರೆ.ಅಷ್ಟೇಅಲ್ಲ ಯೂಟ್ಯೂಬ್​ನವರು ದರ್ಶನ್​ಗೆ ಆಗ ವಿಶೇಷವಾಗಿ ಅಭಿನಂದನೆ ಸಲ್ಲಿಸಿದ್ದು., ಈಗಲೂ ದಚ್ಚು ಅಭಿಮಾನಿಗಳು ಟ್ವಿಟರ್​ ಸೇರದಿಂತೆ ಇತರೆ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ನಡೆಸುತ್ತಿರುವ #RoberrtThemePoster ಅಭಿಯಾನ ಯಾವ ಮಟ್ಟದಲ್ಲಿ ಯಶಸ್ಸಾಗಲಿದೆ ಎಂದು ಕಾದುನೋಡಬೇಕಿದೆಯಷ್ಟೆ.

 

ಇದನ್ನೂ ಓದಿ: Pailwan Boxing Poster: ಬಿಡುಗಡೆಯಾಯಿತು ಐದು ಭಾಷೆಗಳಲ್ಲಿ 'ಪೈಲ್ವಾನ'ನ ಬಾಕ್ಸಿಂಗ್​ ಪೋಸ್ಟರ್​

 Photos: ಇಟಲಿ ಪ್ರವಾಸದಲ್ಲಿ ಕರೀನಾ ಕಪೂರ್​: ಗಂಡ ಹಾಗೂ ಮಗನ ಜತೆ ಸ್ಟೈಲಿಶ್​ ಬೇಬೊ...!
First published: June 5, 2019, 2:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading