ತಮಿಳು ಪತ್ರಿಕೆಯಲ್ಲೂ ಡಿ ಬಾಸ್ ಹವಾ: ಕಾಲಿವುಡ್ ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟು ಹಾಕಿದ ರಾಬರ್ಟ್..!

ಆದರೆ ರಾಬರ್ಟ್​ ಕನ್ನಡ ಭಾಷೆಯಲ್ಲಿ ಮಾತ್ರ ರೆಡಿಯಾಗುತ್ತಿರುವ ಸಿನಿಮಾ. ಹೀಗಾಗಿ ಪಕ್ಕದ ರಾಜ್ಯದಲ್ಲಿ ಸದ್ದು ಮಾಡುವುದು ಅಷ್ಟಕಷ್ಟೇ. ಆದರೆ ಇದೆಲ್ಲವನ್ನು ಮೀರಿ ರಾಬರ್ಟ್ ನಿಂತಿದ್ದಾನೆ.

zahir | news18
Updated:June 9, 2019, 4:58 PM IST
ತಮಿಳು ಪತ್ರಿಕೆಯಲ್ಲೂ ಡಿ ಬಾಸ್ ಹವಾ: ಕಾಲಿವುಡ್ ಸಿನಿಪ್ರಿಯರಲ್ಲಿ ಕುತೂಹಲ ಹುಟ್ಟು ಹಾಕಿದ ರಾಬರ್ಟ್..!
ದರ್ಶನ್
  • News18
  • Last Updated: June 9, 2019, 4:58 PM IST
  • Share this:
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ರಾಬರ್ಟ್' ಚಿತ್ರ ಒಂದಲ್ಲಾ ಒಂದು ಕಾರಣದಿಂದ ಸುದ್ದಿಯಲ್ಲಿದೆ. ಕೆಲ ದಿನಗಳ ನಿರ್ದೇಶಕ ತರುಣ್ ಸುಧೀರ್ ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆ ಮಾಡಿ ಸ್ಯಾಂಡಲ್​ವುಡ್​ನಲ್ಲಿ ಸಂಚಲನ ಸೃಷ್ಟಿಸಿದ್ದರು. ಇದರ ಬೆನ್ನಲ್ಲೇ ಪೋಸ್ಟರ್​ ನಕಲಿ-ಅಸಲಿ ಎಂಬ ವಾದ ವಿವಾದದಿಂದ ಚಿತ್ರ ಸದ್ದು ಮಾಡಿತ್ತು.

ಇದೀಗ ಬೈಕ್​ ಏರಿದ  'ರಾಬರ್ಟ್' ಗಡಿದಾಟಿ ಸುದ್ದಿಯಾಗಿದ್ದಾರೆ. ಹೌದು, ದರ್ಶನ್ ಅವರ  ಚಿತ್ರದ ಪೋಸ್ಟರ್​ ಅನ್ನು ತಮಿಳು ಪತ್ರಿಕೆಯೊಂದು ಸುದ್ದಿಯೊಂದಿಗೆ ಪ್ರಕಟಿಸಿದೆ. ಅದರಲ್ಲೇನು ವಿಶೇಷತೆ ಎಂದು ನೀವಂದುಕೊಂಡರೆ ಕಾರಣ ಇದೆ. ಈ ಹಿಂದೆ 'ಕೆ.ಜಿ.ಎಫ್' ಸೇರಿದಂತೆ ಕೆಲವು ಕನ್ನಡ ಚಿತ್ರಗಳ ಪೋಸ್ಟರ್​ಗಳು ಪರಭಾಷೆ ಪತ್ರಿಕೆಗಳಲ್ಲಿ ಬಂದಿದೆ. ಆದರೆ ಅವೆಲ್ಲವೂ ಅನ್ಯ ಭಾಷೆಯಲ್ಲೂ ತೆರೆ ಕಾಣುವಂತಹ ಚಿತ್ರಗಳಾಗಿತ್ತು.

ಆದರೆ 'ರಾಬರ್ಟ್'​ ಕನ್ನಡ ಭಾಷೆಯಲ್ಲಿ ಮಾತ್ರ ರೆಡಿಯಾಗುತ್ತಿರುವ ಸಿನಿಮಾ. ಹೀಗಾಗಿ ಪಕ್ಕದ ರಾಜ್ಯದಲ್ಲಿ ಸದ್ದು ಮಾಡುವುದು ಅಷ್ಟಕಷ್ಟೇ. ಆದರೆ ಇದೆಲ್ಲವನ್ನು ಮೀರಿ 'ರಾಬರ್ಟ್' ನಿಂತಿದ್ದಾನೆ. ಚಿತ್ರದ ಮೇಲೆ ಪರಭಾಷಿಗರೂ ಕುತೂಹಲ ಹುಟ್ಟಿರುವುದು ಈ ತಮಿಳು ಸುದ್ದಿಯಿಂದ ಸ್ಪಷ್ಟವಾಗಿದೆ. ಹೀಗಾಗಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಮುಂದೆ 'ಡಿ ಬಾಸ್​'ನ ಹೊಸ ಅವತಾರವನ್ನು ಅನ್ಯ ಭಾಷೆಗೆ ಡಬ್ಬಿಂಗ್ ಮಾಡಿದರೂ ಅಚ್ಚರಿಪಡಬೇಕಿಲ್ಲ.50 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕನ್ನಡದ 'ರಾಬರ್ಟ್'​ ಇದೀಗ ಭಾಷೆಯ ಎಲ್ಲೆಯನ್ನು ಮೀರಿ ಸುದ್ದಿಯಾಗುತ್ತಿರುವುದು ಖುಷಿಯ ವಿಚಾರ. ಹೀಗಾಗಿ ಈ ಚಿತ್ರ ಕೂಡ 'ಕೆ.ಜಿ.ಎಫ್​'ನಂತೆ ಪ್ಯಾನ್ ಇಂಡಿಯಾ ಸಿನಿಮಾವಾಗಲಿ ಎಂಬುದೇ 'ದಾಸ'ನ ಅಭಿಮಾನಿಗಳ ಅಭಿಲಾಷೆ.

First published:June 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading