ಯಜಮಾನನ ನಂತರ ಒಡೆಯನಾದ ದಾಸ: ತೆರೆ ಮೇಲೆ ಅಬ್ಬರಿಸೋಕೆ ಸಿದ್ದನಾಗಿದ್ದಾನೆ ಒಡೆಯ

ಸದ್ಯದಲ್ಲೇ ಒಡೆಯನಾಗಿ ದಚ್ಚು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದ್ದಾನೆ. ಯಜಮಾನನಾಗಿ ಆಳಿದ ದರ್ಶನ್​ ಇನ್ನು ಒಡೆಯನಾಗಿ ರಾಜ್ಯಭಾರ ಮಾಡಲಿದ್ದಾರೆ. 

Anitha E | news18
Updated:May 27, 2019, 7:47 PM IST
ಯಜಮಾನನ ನಂತರ ಒಡೆಯನಾದ ದಾಸ: ತೆರೆ ಮೇಲೆ ಅಬ್ಬರಿಸೋಕೆ ಸಿದ್ದನಾಗಿದ್ದಾನೆ ಒಡೆಯ
ನಟ ದರ್ಶನ್​
Anitha E | news18
Updated: May 27, 2019, 7:47 PM IST
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯ 'ರಾಬರ್ಟ್' ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಒಡೆಯ ಸಿನಿಮಾ ಬಗ್ಗೆ ಎಲ್ಲರೂ ಮರೆತೇ ಬಿಟ್ಟಂತಿದೆ. ಆದರೆ ದಾಸ ತನ್ನ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ.

ಹೌದು, 'ಒಡೆಯ' ದರ್ಶನ್​ ಅಭಿನಯದ ಬಹು ನಿರೀಕ್ಷಿತ ಸಿನಿಮಾ. ರಾಬರ್ಟ್​ ಸಿನಿಮಾದಲ್ಲಿ ಬ್ಯುಸಿಯಾಗಿದ್ದರೂ, ಅವರು 'ಒಡೆಯ'ನಿಗಾಗಿ ಕೊಂಚ ಸಮಯ ಮೀಸಲಿಟ್ಟಿದ್ದಾರೆ.

ಇದನ್ನೂ ಓದಿ: ಸೈಲೆಂಟ್ ಆಗಿದ್ದೇಕೆ ಕಿರಿಕ್ ಹುಡುಗಿ: ಏಕೆ ಹೀಗಾದ್ರು ಸಂಯುಕ್ತಾ ಹೆಗ್ಡೆ..!

ಸದ್ಯದಲ್ಲೇ 'ಒಡೆಯ'ನಾಗಿ ದಚ್ಚು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದ್ದಾನೆ. 'ಯಜಮಾನ'ನಾಗಿ ಆಳಿದ ದರ್ಶನ್​ ಇನ್ನು 'ಒಡೆಯ'ನಾಗಿ ರಾಜ್ಯಭಾರ ಮಾಡಲಿದ್ದಾರೆ. ಮುಂದಿನ ವಾರದಿಂದ 'ಒಡೆಯ' ಚಿತ್ರದ ಡಬ್ಬಿಂಗ್‍ನಲ್ಲಿ ತೊಡಗಿಕೊಳ್ಳಲಿದ್ದಾರೆ.

ಅಂದಹಾಗೆ 'ಒಡೆಯ' ಸಿನಿಮಾ ತಮಿಳಿನ 'ವೀರಂ'ಚಿತ್ರದ ಕನ್ನಡ ಅವತರಣಿಕೆ. ಎಂಡಿ ಶ್ರೀಧರ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು, 'ಬುಲ್ ಬುಲ್' ನಂತರ ಮತ್ತೊಮ್ಮೆ ದರ್ಶನ್ ಜೊತೆಯಾಗಿದ್ದಾರೆ.

'ಒಡೆಯ' ಸಿನಿಮಾದ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಶೀಘ್ರದಲ್ಲಿಯೇ ಥಿಯೇಟರ್​ಗೆ ಬರೋಕೆ ಸಜ್ಜಾಗಿದ್ದು, ಜೂನ್ ಕೊನೆಯ ವಾರ ಅಥವಾ ಜುಲೈನಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುವ ತಯಾರಿಯಲ್ಲಿದ್ದಾರೆ ನಿರ್ಮಾಪಕರು.
Loading...

First published:May 27, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...