ಕುರುಕ್ಷೇತ್ರದ ದುರ್ಯೋಧನನ ವಿರುದ್ಧ ಪೈಲ್ವಾನ್ ತೊಡೆ ತಟ್ಟುವುದು ಡೌಟು..!

ಸುದೀಪ್-ದರ್ಶನ್ ಚಿತ್ರಗಳು 13 ವರ್ಷಗಳ ಬಳಿಕ ಮುಖಾಮುಖಿ ಆಗುತ್ತಿರುವುದು ಅಭಿಮಾನಿಗಳಲ್ಲಿ ಹೊಸ ಹುರುಪನ್ನು ನೀಡಿತ್ತು. 2006ರ ಫೆಬ್ರವರಿ 17ರಂದು ಕಿಚ್ಚನ `ಮೈ ಆಟೋಗ್ರಾಫ್ ಹಾಗೂ ದರ್ಶನ್ ಅವರ `ಸುಂಟರಗಾಳಿ’ ಸಿನಿಮಾ ಒಂದೇ ದಿನ ತೆರೆಕಂಡು ಎರಡು ಚಿತ್ರಗಳು ಭರ್ಜರಿ ಯಶಸ್ಸು ಸಾಧಿಸಿತ್ತು.

zahir | news18
Updated:July 6, 2019, 7:15 PM IST
ಕುರುಕ್ಷೇತ್ರದ ದುರ್ಯೋಧನನ ವಿರುದ್ಧ ಪೈಲ್ವಾನ್ ತೊಡೆ ತಟ್ಟುವುದು ಡೌಟು..!
darshan-sudeep
  • News18
  • Last Updated: July 6, 2019, 7:15 PM IST
  • Share this:
ಸ್ಯಾಂಡಲ್​ವುಡ್ ಬಾದ್​ಷಾ ಕಿಚ್ಚ ಸುದೀಪ್ ಅಭಿನಯದ 'ಪೈಲ್ವಾನ್' ಚಿತ್ರದ ಕೆಲಸಗಳು ಅಂತಿಮ ಹಂತದಲ್ಲಿದೆ. ಇನ್ನೇನು ಕೆಲ ದಿನಗಳಲ್ಲೇ ಚಿತ್ರ ಬಿಡುಗಡೆಯಾಗಲಿದೆ ಎಂದೇ ಅಭಿನಯ ಚಕ್ರವರ್ತಿಯ ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಸದ್ಯದ ಗಾಂಧಿನಗರದ ವರದಿ ಪ್ರಕಾರ 'ಪೈಲ್ವಾನ್' ಈ ಹಿಂದೆ ಹೇಳಿದ್ದ ದಿನಾಂಕದಲ್ಲಿ ತೆರೆಗೆ ಬರುವುದಿಲ್ಲವಂತೆ.

ಹೌದು, ಈ ಮೊದಲು ನಿರ್ದೇಶಕ ಕೃಷ್ಣ 'ಪೈಲ್ವಾನ್'​ನನ್ನು ವರಮಹಾಲಕ್ಷ್ಮಿ ಹಬ್ಬದಂದು ಬೆಳ್ಳಿತೆರೆಗೆ ಕರೆತರುವುದಾಗಿ ತಿಳಿಸಿದ್ದರು. ಆದರೀಗ ಚಿತ್ರದ ಚಿತ್ರದ ಕೆಲಸಗಳಿಗೆ ಮಳೆ ಅಡ್ಡಿಯಾಗಿದೆ ಎನ್ನಲಾಗುತ್ತಿದೆ. 'ಪೈಲ್ವಾನ್' ಪೋಸ್ಟ್​ ಪ್ರೊಡಕ್ಷನ್ ಕೆಲಸಗಳು ಮುಂಬೈಯಲ್ಲಿ ನಡೆಯುತ್ತಿದ್ದು, ಇದೀಗ ಮಹಾನಗರಿಯು ಮಳೆಯಿಂದ ತತ್ತರಿಸಿದೆ. ಇದರಿಂದ 'ಪೈಲ್ವಾನ್' ತಂಡವು ಅಂದುಕೊಂಡಂತೆ ಗ್ರಾಫಿಕ್ಸ್​ ಕೆಲಸಗಳು ಸರಿಯಾದ ಸಮಯಕ್ಕೆ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.

ಈ ಹಿನ್ನೆಲೆಯಲ್ಲಿ 'ಪೈಲ್ವಾನ್' ಅಖಾಡಕ್ಕೆ ಇಳಿಯುವುದು ತಡವಾಗಬಹುದು ಎಂದಿದ್ದಾರೆ ಚಿತ್ರತಂಡದ ಮೂಲಗಳು. ಈ ಹಿಂದೆ ಅಭಿನಯ ಚಕ್ರವರ್ತಿ ಸುದೀಪ್ ಅಭಿನಯದ 'ಪೈಲ್ವಾನ್' ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್​ರ 'ಕುರುಕ್ಷೇತ್ರ' ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾಗಲಿದೆ ಎಂಬ ಸುದ್ದಿ ಸ್ಯಾಂಡಲ್​ವುಡ್​ನಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು.

'ಕುರುಕ್ಷೇತ್ರ' ಚಿತ್ರದ ನಿರ್ಮಾಪಕ ಮುನಿರತ್ನ ಅವರು ಆಗಸ್ಟ್​ 9ರಂದು ತಮ್ಮ ಬಹುಕೋಟಿ ವೆಚ್ಚದ ಐತಿಹಾಸಿಕ ಚಿತ್ರವನ್ನು ರಿಲೀಸ್ ಮಾಡುವುದಾಗಿ ತಿಳಿಸಿದ್ದರು. ಹಬ್ಬಕ್ಕೆ ಸರಿಯಾಗಿ ಈ ಐತಿಹಾಸಿಕ ಚಿತ್ರವನ್ನು ಪ್ರೇಕ್ಷಕರ ಮುಂದಿಡಲು ನಿರ್ಮಾಪಕರು ಪ್ಲ್ಯಾನ್ ಮಾಡಿಕೊಂಡಿದ್ದರು. ಇತ್ತ ಕಿಚ್ಚ ಅಭಿನಯದ 'ಪೈಲ್ವಾನ್' ಸಹ ಅಂದೇ 5 ಭಾಷೆಗಳಲ್ಲಿ ಪರದೆಯಲ್ಲಿ ಮೂಡಿ ಬರಲಿದೆ ಎಂದು ನಿರ್ದೇಶಕ ಕೃಷ್ಣ ತಿಳಿಸಿದ್ದರು.

ಇದರಿಂದ ಬಾಕ್ಸಾಫೀಸ್​ನಲ್ಲಿ ಬಿಗ್ ಕ್ಲ್ಯಾಶ್ ಆಗಲಿದೆ ಎಂದೇ ಎಲ್ಲರೂ ಭಾವಿಸಿದ್ದರು. ಅದರಲ್ಲೂ ಸುದೀಪ್-ದರ್ಶನ್ ಚಿತ್ರಗಳು 13 ವರ್ಷಗಳ ಬಳಿಕ ಮುಖಾಮುಖಿ ಆಗುತ್ತಿರುವುದು ಅಭಿಮಾನಿಗಳಲ್ಲಿ ಹೊಸ ಹುರುಪನ್ನು ನೀಡಿತ್ತು. 2006ರ ಫೆಬ್ರವರಿ 17ರಂದು ಕಿಚ್ಚನ 'ಮೈ ಆಟೋಗ್ರಾಫ್' ಹಾಗೂ ದರ್ಶನ್ ಅವರ 'ಸುಂಟರಗಾಳಿ' ಸಿನಿಮಾ ಒಂದೇ ದಿನ ತೆರೆಕಂಡು ಎರಡು ಚಿತ್ರಗಳು ಭರ್ಜರಿ ಯಶಸ್ಸು ಸಾಧಿಸಿತ್ತು. ಇದೇ ಇತಿಹಾಸ ಮತ್ತೊಮ್ಮೆ ಮರುಕಳಿಸಲಿದೆ ಎಂದೇ ಎಲ್ಲರೂ ಊಹಿಸಿದ್ದರು.ಆದರೀಗ 'ಪೈಲ್ವಾನ್' ಹಾಗೂ 'ಕುರುಕ್ಷೇತ್ರ' ಬೇರೆ ಬೇರೆ ದಿನಗಳಲ್ಲಿ ಬಿಡುಗಡೆ ಆಗಲಿದೆ ಎನ್ನಲಾಗುತ್ತಿದೆ. ಹಾಗೆಯೇ ಒಂದು ಮೂಲದ ಪ್ರಕಾರ ದರ್ಶನ್​ ಅವರ ದುರ್ಯೋಧನನ ಅವತಾರವನ್ನು ನೋಡುವ ಭಾಗ್ಯ ಅಭಿಮಾನಿಗಳಿಗೆ ಆಗಸ್ಟ್​ 2ರಂದೇ ದೊರೆಯಲಿದೆಯಂತೆ. ಈ ಹಿಂದೆ ತಿಳಿಸಿದ್ದ ದಿನಾಂಕಕ್ಕೂ ಒಂದು ವಾರ ಮುಂಚಿತವಾಗಿ 'ಕುರುಕ್ಷೇತ್ರ' ಬಿಡುಗಡೆಯಾಗಲಿದೆ.ಅದೇ ರೀತಿ  ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬ(ಸೆ.2) ದ ಗಿಫ್ಟ್​ ಆಗಿ 'ಪೈಲ್ವಾನ್'​ನನ್ನು ಅಭಿಮಾನಿಗಳ ಮುಂದಿಡಲು  'ಹೆಬ್ಬುಲಿ' ಕೃಷ್ಣ ಮತ್ತು ತಂಡ ಯೋಜನೆ ಹಾಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ಬಾಕ್ಸಾಫೀಸ್ ಅಲ್ಲೋಲ ಕಲ್ಲೋಲವಾಗಲಿದೆ ಎನ್ನಲಾಗಿದ್ದ ಎರಡು ಬಿಗ್ ಸ್ಟಾರ್​ಗಳ ಚಿತ್ರಗಳು ಬೇರೆ ಬೇರೆ ದಿನಾಂಕದಲ್ಲಿ ಬರುತ್ತಿರುವುದು ಕನ್ನಡ ಚಿತ್ರರಂಗದ ಮಟ್ಟಿಗೆ ಒಳ್ಳೆಯ ಬೆಳವಣಿಗೆ.

First published:July 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ