Roberrt Fever: ಡಿಬಾಸ್​ ಅಭಿಮಾನಿಗಳಲ್ಲಿ ಆರಂಭವಾಗಿದೆ ರಾಬರ್ಟ್​ ಫೀವರ್​..!

ರಾಬರ್ಟ್​ ಥೀಮ್​ ಪೋಸ್ಟರ್​ ಬಿಡುಗಡೆಯಾದಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಅದರದ್ದೇ ಹವಾ. ಅದರಲ್ಲೂ ದರ್ಶನ್​ ಅಭಿಮಾನಿಗಳು ಪೋಸ್ಟರ್​ ಅನ್ನು ವೈರಲ್​ ಮಾಡಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ. ಇದರ ನಡುವೆಯೆ ಅಭಿಮಾನಿಗಳಲ್ಲಿ ರಾಬರ್ಟ್​ ಫೀವರ್​ ಆರಂಭವಾಗಿದೆ.

Anitha E | news18
Updated:June 11, 2019, 6:22 PM IST
Roberrt Fever: ಡಿಬಾಸ್​ ಅಭಿಮಾನಿಗಳಲ್ಲಿ ಆರಂಭವಾಗಿದೆ ರಾಬರ್ಟ್​ ಫೀವರ್​..!
ರಾಬರ್ಟ್​ ಬೈಕ್​
  • News18
  • Last Updated: June 11, 2019, 6:22 PM IST
  • Share this:
- ಅನಿತಾ ಈ, 

'ರಾಬರ್ಟ್​' ಸಿನಿಮಾ ಮಾಡುವ ಕುರಿತು ಸ್ಯಾಂಡಲ್​ವುಡ್​ನಲ್ಲಿ ಅನೌನ್ಸ್​ ಮಾಡಿದಾಗಿನಿಂದಲೂ ಸಖತ್​ ಸದ್ದು ಮಾಡುತ್ತಿದ್ದಾನೆ 'ರಾಬರ್ಟ್​'. ಒಮ್ಮೆ ಈ ಸಿನಿಮಾದ ಫಸ್ಟಲುಕ್​ ಬಿಡಿಗಡೆಯಾದಾಗ ಮತ್ತೊಮ್ಮೆ ಈ ಚಿತ್ರ ಥೀಮ್​ ಪೋಸ್ಟರ್​ ಬಿಡುಗಡೆಯಾದಾಗ.

'ರಾಬರ್ಟ್​' ಥೀಮ್​ ಪೋಸ್ಟರ್​ ಬಿಡುಗಡೆಯಾದಾಗಿನಿಂದ ಸಾಮಾಜಿಕ ಜಾಲತಾಣದಲ್ಲಿ ಅದರದ್ದೇ ಹವಾ. ಅದರಲ್ಲೂ ದರ್ಶನ್​ ಅಭಿಮಾನಿಗಳು ಪೋಸ್ಟರ್​ ಅನ್ನು ವೈರಲ್​ ಮಾಡಲು ಶಕ್ತಿ ಮೀರಿ ಪ್ರಯತ್ನಿಸುತ್ತಿದ್ದಾರೆ.

ರಾಬರ್ಟ್​ ಬೈಕ್​


ಹೀಗಿರುಗವಾಗಲೇ ಈಗ ದರ್ಶನ್​ ಅಭಿಮಾನಿಗಳಲ್ಲಿ ರಾಬರ್ಟ್​ ಫೀವರ್​ ಆರಂಭವಾಗಿದೆ. ಹೌದು, ಇದೇನು ಫೀವರ್​ ಅಂತೀರಾ..? ಹೌದು ದಚ್ಚು ಅಭಿಮಾನಿಗಳು ಈಗ 'ರಾಬರ್ಟ್​' ಥೀಮ್​ ಪೋಸ್ಟರ್​ನಲ್ಲಿರುವ ಬೈಕ್​ ಹಿಂದೆ ಬಿದ್ದಿದ್ದಾರೆ.

ಇದನ್ನೂ ಓದಿ: Rashmika Mandanna: ವೈರಲ್​ ಆಗುತ್ತಿದೆ ರಶ್ಮಿಕಾ ಮಂದಣ್ಣರ ಈ ವರ್ಕೌಟ್​ ವಿಡಿಯೋ..!

ಪೋಸ್ಟರ್​ನಲ್ಲಿರುವಂತೆ ಬೈಕ್​ ಅನ್ನು ಹೋಲು ಬೈಕ್​ ಹುಡುಕಿ ಅದನ್ನು ಏರಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ. ದರ್ಶನ್​ ಈ ಹಿಂದೆ ಅಭಿಮಾನಿಯೊಬ್ಬರ ಬೈಕ್​ ರೈಡ್​ ಮಾಡಿದ್ದರು. ಅದರಂತೆ ಇತ್ತೀಚೆಗೆ ಡಿಬಾಸ್​ ಅಭಿಮಾನಿಯೊಬ್ಬರು ಬೈಕ್​ ಏರಿ ವಿಡಿಯೋ ಮಾಡಿದ್ದಾರೆ.


ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ಅದಕ್ಕೆ #RoberrtFever ಎಂದು ಬರೆಯಲಾಗುತ್ತಿದೆ. ಇದು ದಚ್ಚು ಅಭಿಮಾನಿಗಳಲ್ಲಿ ಆರಂಭವಾಗಿರುವ ಹೊಸ ಫೀವರ್​. ಇದು ಒಂದೇ ವಿಡಿಯೋ ನಿಲ್ಲುತ್ತೆ ಅನ್ನೋದು ಸುಳ್ಳು. ದರ್ಶನ್​ ಅಭಿಮಾನಿಗಳು ದಾಸನ ಸಿನಿಮಾ ಪ್ರಚಾರಕ್ಕಾಗಿ ಇಂತಹ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ ಅನ್ನೋದು ಈ ಹಿಂದೆಯೇ ಸಾಕಷ್ಟು ಬಾರಿ ಸಾಬೀತಾಗಿದೆ.

DBoss Darshan Photos: ವಿಲನ್​ ನಿರ್ಮಾಪಕರ ಜತೆ ಹೊಸ ಸಿನಿಮಾ ಮಾಡಲಿದ್ದಾರಾ ಡಿಬಾಸ್​ ದರ್ಶನ್​..?

First published: June 11, 2019, 5:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading