Darshan: ಟ್ವಿಟರ್​ನಲ್ಲಿ ದರ್ಶನ್​​ ಅಭಿಮಾನಿಗಳ ಅಬ್ಬರ: ಡಿ-ಕಂಪನಿಗೆ ಶುಭ ಕೋರಿದ ಡಿ ಬಾಸ್​

DCompany 100k Follwers : ದರ್ಶನ್ ಅವರ ಯಾವುದೇ ಅಪ್​ಡೇಟ್ಸ್​ ಇರಲಿ. ಸಾಮಾಜಿಕ ಜಾಲತಾಣದಲ್ಲಿರೋ ಅಭಿಮಾನಿಗಳಿಗೆ ತಲುಪೋಕೆ ಡಿ ಕಂಪನಿಯೇ ಕಾರಣ. ಕಳೆದ 9 ವರ್ಷಗಳಿಂದ ಈ ಪೇಜ್ ಫೇಸ್​ಬುಕ್​ ಹಾಗೂ ಟ್ವಿಟರ್​ನನಲ್ಲಿ ದರ್ಶನ್ ಬಗೆಗಿನ ಹಾಗೂ ಅವರ ಸಿನಿಮಾ ಕುರಿತ  ಮಾಹಿತಿಗಳನ್ನು ಚಿತ್ರಪ್ರೇಮಿಗಳಿಗೆ ತಲುಪಿಸುತ್ತಾ ಬಂದಿದೆ. ಸದ್ಯ ಡಿ-ಕಂಪನಿ ಹೊಸ ಮೈಲಿಗಲ್ಲಿಗೆ ಹೆಜ್ಜೆ ಇಟ್ಟಿದ್ದು, ಟ್ವಿಟರ್​ನಲ್ಲಿ ಒಂದು ಲಕ್ಷ ಹಿಂಬಾಲಕರನ್ನ ಸಂಪಾದಿಸಿಕೊಂಡಿದೆ.

news18-kannada
Updated:October 20, 2019, 11:53 AM IST
Darshan: ಟ್ವಿಟರ್​ನಲ್ಲಿ ದರ್ಶನ್​​ ಅಭಿಮಾನಿಗಳ ಅಬ್ಬರ: ಡಿ-ಕಂಪನಿಗೆ ಶುಭ ಕೋರಿದ ಡಿ ಬಾಸ್​
ದರ್ಶನ್​ ಅವರ ಅಭಿಮಾನಿಗಳ ಟ್ವಿಟರ್​ ಪೇಜ್​ ಡಿ ಕಂಪೆನಿ
news18-kannada
Updated: October 20, 2019, 11:53 AM IST
'ಡಿ ಕಂಪನಿ'... ದರ್ಶನ್ ಅಫಿಶಿಯಲ್ ಫ್ಯಾನ್ ಪ್ಯಾಜ್. ಟ್ವಿಟರ್​ನಲ್ಲಿ ತುಂಬಾ ಸಿಕ್ರಿಯವಾಗಿರುವ ಪುಟ. ಇದಕ್ಕೆ ಈಗ ಲಕ್ಷಗಟ್ಟಲೆ  ಹಿಂಬಾಲಕರು ಸಿಕ್ಕಿದ್ದಾರೆ. ಇದು ಡಿಬಾಸ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ.

ದರ್ಶನ್ ಅವರ ಯಾವುದೇ ಅಪ್​ಡೇಟ್ಸ್​ ಇರಲಿ. ಸಾಮಾಜಿಕ ಜಾಲತಾಣದಲ್ಲಿರೋ ಅಭಿಮಾನಿಗಳಿಗೆ ತಲುಪೋಕೆ 'ಡಿ ಕಂಪನಿ'ಯೇ ಕಾರಣ. ಕಳೆದ 9 ವರ್ಷಗಳಿಂದ ಈ ಪೇಜ್ ಫೇಸ್​ಬುಕ್​ ಹಾಗೂ ಟ್ವಿಟರ್​ನನಲ್ಲಿ ದರ್ಶನ್ ಬಗೆಗಿನ ಹಾಗೂ ಅವರ ಸಿನಿಮಾ ಕುರಿತ  ಮಾಹಿತಿಗಳನ್ನು ಚಿತ್ರಪ್ರೇಮಿಗಳಿಗೆ ತಲುಪಿಸುತ್ತಾ ಬಂದಿದೆ. ಸದ್ಯ ಡಿ-ಕಂಪನಿ ಹೊಸ ಮೈಲಿಗಲ್ಲಿಗೆ ಹೆಜ್ಜೆ ಇಟ್ಟಿದ್ದು, ಟ್ವಿಟರ್​ನಲ್ಲಿ ಒಂದು ಲಕ್ಷ ಹಿಂಬಾಲಕರನ್ನ ಸಂಪಾದಿಸಿಕೊಂಡಿದೆ.



 
Loading...




'ಡಿ-ಕಂಪನಿ'ಗೆ ಲಕ್ಷ ಹಿಂಬಾಲಕರು ಸಿಕ್ಕಿರೋದು ದರ್ಶನ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. ಸ್ವತಃ ದರ್ಶನ್ ಟ್ವೀಟ್ ಮೂಲಕ ಶುಭ ಕೋರಿದ್ದಾರೆ. ಇದು ಅಭಿಮಾನಿಗಳ ಸಂಭ್ರಮವನ್ನ ಇಮ್ಮಡಿಗೊಳಿಸಿದೆ. ಅಂದಹಾಗೆ 'ಡಿ-ಕಂಪನಿ' ಇಲ್ಲಿಯವರೆಗೂ ಯಾವುದೇ ವಿವಾದಾತ್ಮಕ ಪೋಸ್ಟ್ ಮಾಡಿಲ್ಲ.

 



ದರ್ಶನ್ ಚಿತ್ರಗಳ ಅಪ್​ಡೇಟ್ಸ್​ ಅನ್ನು ಹೆಚ್ಚು ಜನರನ್ನು ತಲುಪಿಸುದಲ್ಲಿ ಡಿ-ಕಂಪನಿಯ ಪಾತ್ರ ಪ್ರಮುಖವಾದದ್ದು. ಅದರಲ್ಲೂ ದರ್ಶನ್ ಹುಟ್ಟುಹಬ್ಬ ಇರಲಿ, ಅಥವಾ ಯಾವುದಾದರೂ ಟೀಸರ್, ಟ್ರೈಲರ್ ರಿಲೀಸಾಗಲಿ, ಸೋಷಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸೋ ಮಟ್ಟಿಗೆ 'ಡಿ-ಕಂಪನಿ' ಕೆಲಸ ಮಾಡುತ್ತೆ.

 

Change Within: ವೈರಲ್​ ಆಗುತ್ತಿವೆ ಪ್ರಧಾನಿ ಮೋದಿ ಜತೆ ಬಾಲಿವುಡ್​ ಸೆಲೆಬ್ರಿಟಿಗಳು ತೆಗೆಸಿಕೊಂಡಿರುವ ಚಿತ್ರಗಳು


 

First published:October 20, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...