HOME » NEWS » Entertainment » DARSHANS FAN MADE RANGOLI POSTER CREATED NEW RECORD ASTV ZP

D Boss: ಡಿ ಬಾಸ್ ಅಭಿಮಾನಿ ಕಡೆಯಿಂದಲೂ ದಾಖಲೆ ಬರೆದ ರಾಬರ್ಟ್​..!

ರಾಬರ್ಟ್‌ ಸಿನಿಮಾ ಮಾರ್ಚ್ 11 ಕ್ಕೆ ಶೆಡ್ಯೂಲ್ ಆಗಿದೆ. ಇನ್ನು ಇಪ್ಪತ್ತು ದಿನಗಳು ಮಾತ್ರ ಬಾಕಿಯಿವೆ. ಆಗಲೇ ರಾಬರ್ಟ್ ಕ್ರೇಜ್ ಸುನಾಮಿ, ಸುಂಟರಗಾಳಿಯಾಗಿದೆ.

news18-kannada
Updated:February 21, 2021, 7:22 PM IST
D Boss: ಡಿ ಬಾಸ್ ಅಭಿಮಾನಿ ಕಡೆಯಿಂದಲೂ ದಾಖಲೆ ಬರೆದ ರಾಬರ್ಟ್​..!
Dboss
  • Share this:
ರಾಬರ್ಟ್ ಸ್ಯಾಂಡಲ್ ವುಡ್ ನ ಮೆಗಾ ಮೂವಿ. ಅನೌನ್ಸ್ ಆದಾಗಿನಿಂದಲೇ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ‌ಮಾಡಿರೋ ಸಿನಿಮಾ. ಡಿ-ಬಾಸ್ ದರ್ಶನ್ ಕೆರಿಯರ್​ನ ಹೊಸ ಮೈಲಿಗಲ್ಲಾಗಲಿದೆ ಅಂತ ಕರೆಸಿಕೊಳುತ್ತಿರುವ ಸಿನಿಮಾ. ಸ್ಯಾಂಡಲ್ ವುಡ್​ನ ಬಾಕ್ಸಾಫಿಸ್ ಚಿಂದಿ ಉಡಾಯಿಸೋಕೆ ಸಜ್ಜಾಗಿರೋ ಸಿನಿಮಾ.
ಇಂತಹ ಈ ಸಿನಿಮಾ ಆರಂಭದಿಂದಲೂ ದಾಖಲೆ ಮೇಲೆ ದಾಖಲೆ ಬರೀತಾನೇ ಇದೆ‌‌. ರಾಬರ್ಟ್ ಹೆಸರಿಗೆ ಒಂದಲ್ಲಾ ಒಂದು ದಾಖಲೆಗಳು ನಿರ್ಮಾಣ ಆಗುತ್ತಿದೆ. ಈಗ ಮತ್ತೊಂದು ದಾಖಲೆಗೆ ಯಜಮಾನ ಒಡೆಯನಾಗಿದ್ದಾನೆ. ಮೀಸೆ ಮೇಲೆ ಕೈ ಇಟ್ಟು, ಹುಬ್ಬೇರಿಸುತ್ತಿದ್ದಾನೆ.

ಎಸ್... ಡಿ-ಬಾಸ್ ಬರ್ತಡೇ ಪ್ರಯುಕ್ತ, ಅಭಿಮಾನಿಗಳು ವಿಶೇಷ ಪೋಸ್ಟರ್ ಒಂದನ್ನ ರಚಿಸಿದ್ದಾರೆ. ಅದು ಕೂಡ ರಂಗೋಲಿ ಆರ್ಟ್ ಮೂಲಕ ಎಂಬುದು ವಿಶೇಷ. ಅಂದಹಾಗೆ ಈ ಪೋಸ್ಟರ್ ಒಂದಲ್ಲ ಎರಡಲ್ಲಾ 50 ಅಡಿ ಉದ್ದ, 15 ಅಡಿ ಅಗಲ ಇದೆ. ಈ ಬೃಹತ್ ಪೋಸ್ಟರ್ ಈಗ ವಿಶ್ವದಾಖಲೆಗೆ ಭಾಜನವಾಗಿದೆ.ಪುನೀತ್ ಎಂಬ ಡಿ-ಬಾಸ್ ಅಪ್ಪಟ ಅಭಿಮಾನಿ ಇದರ ಹಿಂದಿನ ರುವಾರಿ. ಇವರ ಈ ಶ್ರಮಕ್ಕೆ ಪರಿಶ್ರಮಕ್ಕೆ, ಡಿ-ಬಾಸ್ ಮೇಲಿನ ಅಭಿಮಾನಕ್ಕೆ ದಾಖಲೆಯ ಮಾಲೆ ಸಿಕ್ಕಿದೆ. ಇಂಡಿಯನ್ ವರ್ಲ್ಡ್ ರೆಕಾರ್ಡ್ ಎಂಬ ಹೆಗ್ಗಳಿಕೆಗೆ ಈ ಪೋಸ್ಟರ್ ಪಾತ್ರವಾಗಿದೆ.‌ಇನ್ನು ರಾಬರ್ಟ್ ಪೋಸ್ಟರ್ ಗಳು, ವಿಭಿನ್ನ ವಿಶಿಷ್ಟವಾಗಿದ್ದು, ಪ್ರತಿ ಪೋಸ್ಟರ್ ನಲ್ಲೂ ಡಿ-ಬಾಸ್ ವಿಶೇಷವಾಗಿ ಕಾಣಿಸಿಕೊಂಡಿದ್ದಾರೆ‌‌. ಹೀಗಾಗಿ ರಾಬರ್ಟ್‌ ಪೋಸ್ಟರ್ ಗಳ ಮೇಲೆ ಅಭಿಮಾನಿಗಳಿಗೆ ಅದೆನೋ ಸ್ಪೆಷಲ್ ಅಟ್ರಾಕ್ಷನ್. ಹೀಗಾಗಿ ರಾಬರ್ಟ್ ಪೋಸ್ಟರ್ ಅನ್ನ ಪೆನ್ಸಿಲ್ ಸ್ಕೆಚ್ ನಲ್ಲಿ ಬಿಡಿಸಿರೋ ಅದೆಷ್ಟೋ ವೀಡಿಯೋ ಗಳು ನಮಗೆ ಸಾಮಾಜಿಕ ಜಾಲತಾಣಗಳಲ್ಲಿ ಸಿಗುತ್ತವೆ.ಅಂದಹಾಗೆ ರಾಬರ್ಟ್ ಪ್ರಮೋಷನ್ ದಿನೇ ದಿನೆ ಅಗ್ರೆಸಿವ್ ಆಗ್ತಿದೆ. ಬ್ಯಾಕ್ ಟು ಬ್ಯಾಕ್ ಅಪ್ಡೇಟ್ಸ್ ಗಳು ಸಿನಿಮಾ ತಂಡದಿಂದ ಸಿಕ್ತಿವೆ. ಮೊನ್ನೆ ಮೊನ್ನೆ ರಾಬರ್ಟ್ ಟ್ರೈಲರ್ ರಿಲೀಸ್ ಆಗಿದೆ. ಚಿತ್ರಪ್ರೇಮಿಗಳಿಂದ ಧೂಳ್ ಧಮಾಕ ರೆಸ್ಪಾನ್ಸ್ ಪಡೆದುಕೊಳ್ತಿದೆ. ಒಂದು ಕೋಟಿ ವೀಕ್ಷಣೆಯತ್ತ ದಾಪುಗಾಲಿಟ್ಟಿದೆ‌.

ಇದರ ನಡುವೆಯೇ ರಾಬರ್ಟ್ ತಂಡದಿಂದ ಮತ್ತೊಂದು ಧಮಾಕೆಧಾರ್ ಗಿಫ್ಟ್ ಸಿಕ್ಕಿದೆ. ಅದುವೇ "ಕಣ್ಣು ಹೊಡಿಯಾಕ ಮೊನ್ನೆ ಕಲಿತಾನಿ ಹಾಡು" ರಾಬರ್ಟ್ ಸಿನಿಮಾದ ರೊಮ್ಯಾಂಟಿಕ್ ಹಾಡು ಇದಾಗಿದ್ದು ಯೂಟ್ಯೂಬ್ ನಲ್ಲಿ ಗುಲ್ಲೆಬ್ಬಿಸ್ತಿದೆ.

ಪದ ಬ್ರಹ್ಮ ಯೋಗರಾಜ್ ಭಟ್ ಉತ್ತರ ಕರ್ನಾಟಕ ಶೈಲಿಯಲ್ಲಿ ಬರೆದಿರೋ ಲಿರಿಕ್ಸ್ ಸಖತ್ ಕ್ಯಾಚಿಯಾಗಿದೆ. ಹಾಗೆ ಮುದ್ದು ಕಂಠದ ಶ್ರೇಯಾ ಘೋಷಾಲ್ ಹಾಡಿಗೆ ಜೀವಿಗೆ ತುಂಬಿದ್ದಾರೆ. ಈ ಹಾಡು ಕೇಳಿ ಸುಮ್ನೆಂಗಿರಲಿ ಅಂತ ಚಿತ್ರರಸಿಕರು ಮತ್ತೆ ಮತ್ತೆ ಕೇಳ್ತಿದ್ದಾರೆ‌‌. ಪರಿಣಾಮ ಒಂದೇ ದಿನದಲ್ಲಿ ೮ ಲಕ್ಷ ವೀವ್ಸ್ ಪಡೆದುಕೊಂಡು ಮಿಲಿಯನ್ ವೀವ್ಸ್ ನತ್ತ ದಾಪುಗಾಲಿಟ್ಟಿದೆ.ರಾಬರ್ಟ್‌ ಸಿನಿಮಾ ಮಾರ್ಚ್ 11 ಕ್ಕೆ ಶೆಡ್ಯೂಲ್ ಆಗಿದೆ. ಇನ್ನು ಇಪ್ಪತ್ತು ದಿನಗಳು ಮಾತ್ರ ಬಾಕಿಯಿವೆ. ಆಗಲೇ ರಾಬರ್ಟ್ ಕ್ರೇಜ್ ಸುನಾಮಿ, ಸುಂಟರಗಾಳಿಯಾಗಿದೆ. ಯಾವಾಗ 11 ತಾರಿಖು ಬರುತ್ತಪ್ಪ ಅಂತ ಚಿತ್ರರಸಿಕರು ಕಾಯ್ತಾ ಇದ್ದಾರೆ. ಇನ್ನು ಮೂರು ವಾರಗಳ ಒಳಗೆ ಆ ಕ್ರೇಜ್ ಇನ್ನೆಷ್ಟು ದೊಡ್ಡ ಮಟ್ಟಕ್ಕೆ ಮುಟ್ಟುತ್ತೋ ರಾಬರ್ಟೇ ಹೇಳಬೇಕು.
Published by: zahir
First published: February 21, 2021, 7:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories