ದರ್ಶನ್ (Darshan) ಅವರ ಹೆಸರು ಬಳಸಿಕೊಂಡು 25 ಕೋಟಿ ವಂಚನೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದ ಸುದ್ದಿಗಳನ್ನೇ ಕಳೆದ ಕೆಲವು ದಿನಗಳಿಂದ ಕೇಳಿ ಕೇಳಿ ಬೇಸರಗೊಂಡಿದ್ದ ಅಭಿಮಾನಿಗಳಿಗೆ ಈಗ ಡಿಬಾಸ್ ಕಡೆಯಿಂದ ಗುಡ್ ನ್ಯೂಸ್ ಒಂದು ಸಿಕ್ಕಿದೆ. ಅದು ದರ್ಶನ್ ಅವರ ಹೊಸ ಸಿನಿಮಾ ಕುರಿತದ್ದಾಗಿದೆ. ದರ್ಶನ್ ತೂಗುದೀಪ ಅವರ ರಾಬರ್ಟ್ ಸಿನಿಮಾ ಕೊರೋನಾ ಮೊದಲ ಅಲೆ ಮುಕ್ತಾಯಗೊಂಡು ಲಾಕ್ಡೌನ್ ತೆರೆವುಗೊಂಡ ಶಿವರಾತ್ರಿ ಹಬ್ಬದಂದು ರಿಲೀಸ್ ಆಗಿ ಯಶಸ್ಸು ಕಂಡಿತ್ತು. ಕೋಟಿ ಕೋಟಿ ಲೂಟಿ ಮಾಡಿದ್ದ ತರುಣ್ ಸುಧೀರ್ ರಾಬರ್ಟ್ (Roberrt)ಸಿನಿಮಾ ನಂತರ ಡಿಬಾಸ್ ಯಾವುದೇ ಹೊಸ ಚಿತ್ರವನ್ನು ಪ್ರಕಟಿಸಿರಲಿಲ್ಲ. ರಾಬರ್ಟ್ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡ ನಂತರ ಗಂಡುಗಲಿ ಮದಕರಿ ನಾಯಕ ಚಿತ್ರದ ಶೂಟಿಂಗ್ ಆರಂಭವಾಗಬೇಕಿತ್ತು. ಕೊರೋನಾ ಕಾರಣದಿಂದಾಗಿ ಸಿನಿಮಾದ ಚಿತ್ರೀಕರಣವನ್ನು ಮುಂದಕ್ಕೆ ಹಾಕಲಾಗಿತ್ತು. ಆದರೆ ಇದರ ಚಿತ್ರೀಕರಣ ಆರಂಭವಾಗುವ ಮುನ್ನವೇ ದರ್ಶನ್ ಅವರ 55ನೇ ಚಿತ್ರದ ಬಗ್ಗೆ ಅಪ್ಡೇಟ್ ಸಿಕ್ಕಿದೆ.
ಡಿಬಾಸ್ ದರ್ಶನ್ ಅಭಿನಯದ ಡಿ55 ಸಿನಿಮಾ ಕುರಿತಾಗಿ ಈಗ ಅಧಿಕೃತ ಪ್ರಕಟಣೆ ಹೊರ ಬಿದ್ದಿದೆ. ಯಜಮಾನ (Yajamana) ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ (Shylaja Nag) ಅವರೊಂದಿಗೆ ದರ್ಶನ್ ಮತ್ತೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವನ್ನು ಹರಿಕೃಷ್ಣ ಅವರು ನಿರ್ದೇಶನ ಮಾಡುತ್ತಿದ್ದಾರೆ.
ಹೌದು, ಯಜಮಾನ ಚಿತ್ರದ ಬಳಿಕ ಮತ್ತೆ ದರ್ಶನ್, ವಿ. ಹರಿಕೃಷ್ಣ (V Harikrishna) ಹಾಗೂ ಶೈಲಜಾ ನಾಗ್ (Shylaja Nag) ಕಾಂಬಿನೇಷನ್ನಲ್ಲಿ ಡಿ55 ಚಿತ್ರ ಮೂಡಿ ಬರಲಿದೆ. ಈ ಸಿನಿಮಾಗೆ ಶೈಲಜಾ ನಾಗ್ ಅವರ ಜತೆಗೆ ಬಿ. ಸುರೇಶ್ (B Suresh) ಅವರೂ ಬಂಡವಾಳ ಹೂಡಲಿದ್ದಾರಂತೆ.
ಇದನ್ನೂ ಓದಿ: ಗುಡ್ ಬೈ ಚಿತ್ರದ ಪಾರ್ಟಿಯಲ್ಲಿ ಕುಣಿದು ಕುಪ್ಪಳಿಸಿದ ರಶ್ಮಿಕಾ ಮಂದಣ್ಣ: ಫೋಟೋ ವೈರಲ್..!
ವಿ. ಹರಿಕೃಷ್ಣ, ಶೈಲಜಾ ನಾಗ್ ಹಾಗೂ ಬಿ. ಸುರೇಶ್ ಅವರು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಅವರ ಮನೆಗೆ ಭೇಟಿ ನೀಡಿದ್ದು, ಡಿ55 ಸಿನಿಮಾದ ಬಗ್ಗೆ ಚರ್ಚಿಸಿದ್ದಾರೆ. ಈ ಕುರಿತಾಗಿ ಶೈಲಜಾ ಅವರೇ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Dia Mirza-Baby Boy: ಎರಡು ತಿಂಗಳ ಮುಂಚೆಯೇ ತಾಯಿಯಾದ ದಿಯಾ ಮಿರ್ಜಾ: ಮಗನ ಹೆಸರು ರಿವೀಲ್ ಮಾಡಿದ ನಟಿ..!
ಯಜಮಾನ ಸಿನಿಮಾ ಯಶಸ್ಸು ಕಂಡ ಬೆನ್ನಲ್ಲೇ ದರ್ಶನ್ ಅವರು ಶೈಲಜಾ ನಾಗ್ ಅವರೊಂದಿಗೆ ಮತ್ತೊಂದು ಚಿತ್ರ ಮಾಡುವುದಾಗ ಪ್ರಕಟಿಸಿದ್ದರು. ಆದರೆ ಅದರ ಕುರಿತಾದ ಮಾಹಿತಿ ಈಗ ಲಭ್ಯವಾಗಿದೆ. ಈ ಸಿನಿಮಾದಲ್ಲಿ ಯಾರು ನಾಯಕಿ, ಯಾವ ಜಾನರ್ ಸಿನಿಮಾ ಇದಾಗಲಿದೆ ಅನ್ನೋ ಪ್ರಶ್ನೆಗಳು ಈಗ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಇದನ್ನೂ ಓದಿ: Megha Shetty: ಆ ಕಾರಣದಿಂದಾಗಿ ಜೊತೆ ಜೊತೆಯಲಿ ಧಾರಾವಾಹಿಯಿಂದ ಹೊರ ಬಂದ್ರಾ ಮೇಘಾಶೆಟ್ಟಿ..!
ಕುರುಕ್ಷೇತ್ರ ದರ್ಶನ್ ಅಭಿನಯದ 50ನೇ ಸಿನಿಮಾ ಆಗಿದ್ದು, ಒಡೆಯ 51ನೇ ಚಿತ್ರ, ರಾಬರ್ಟ್ 52ನೇ ಚಿತ್ರ ಹಾಗೂ ಗಂಡುಗಲಿ ಮದಕರಿ ನಾಯಕ 53ನೇ ಸಿನಿಮಾ ಆಗಿದೆ. ಈಗ ಶೈಲಜಾ ನಾಗ್ ಅವರು 55ನೇ ಚಿತ್ರ ಪ್ರಕಟಿಸಿದ್ದಾರೆ. ಹೀಗಿರುವಾಗ ಡಿಬಾಸ್ ಅವರ 54ನೇ ಚಿತ್ರ ಯಾವುದು ಅನ್ನೋ ಪ್ರಶ್ನೆ ಕಾಡುತ್ತದೆ. ಅದಕ್ಕೂ ಉತ್ತರ ಇದೆ. ದರ್ಶನ್ ಅವರು ರಾಕ್ಲೈನ್ ಜೊತೆ ಚಿತ್ರವನ್ನು ಮಾಡಲಿದ್ದು, ಅದೇ ಅವರ 54ನೇ ಸಿನಿಮಾ ಆಗಲಿದೆ ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ