ಸದ್ಯದಲ್ಲೇ ಸೆಟ್ಟೇರಲಿದೆ ದರ್ಶನ್​ ಅಭಿನಯದ 52ನೇ ಸಿನಿಮಾ 'ಒಡೆಯರ್​'

news18
Updated:June 13, 2018, 5:59 PM IST
ಸದ್ಯದಲ್ಲೇ ಸೆಟ್ಟೇರಲಿದೆ ದರ್ಶನ್​ ಅಭಿನಯದ 52ನೇ ಸಿನಿಮಾ 'ಒಡೆಯರ್​'
news18
Updated: June 13, 2018, 5:59 PM IST
ರಕ್ಷಾ ಜಾಸ್ಮೀನ್, ನ್ಯೂಸ್ 18 ಕನ್ನಡ

ಡಿ ಬಾಸ್ ಅಭಿಮಾನಿಗಳೆಲ್ಲ ದರ್ಶನ್‍ ಅವರ 'ಕುರುಕ್ಷೇತ್ರ' ಸಿನಿಮಾವನ್ನು ಕಣ್ಣುತುಂಬಿಕೊಳ್ಳಲು ಕಾತುರರಾಗಿದ್ದಾರೆ. ಹಾಗೇ ಅವರ 51ನೇ ಸಿನಿಮಾ 'ಯಜಮಾನ' ಚಿತ್ರತಂಡ ಕೂಡ ಬಿರುಸಿನಿಂದ ಚಿತ್ರೀಕರಣ ನಡೆಸುತ್ತಿದೆ. ಇದರ ಬೆನ್ನಲ್ಲೆ ದರ್ಶನ್‍ ಅವರ 52ನೇ ಸಿನಿಮಾದ ಅಧಿಕೃತ ಮಾಹಿತಿಯೊಂದು ಇದೀಗ ಹೊರಬಂದಿದೆ.

ಎಂ.ಡಿ. ಶ್ರೀಧರ್ ನಿರ್ದೇಶನದಲ್ಲಿ ದರ್ಶನ್‍ ಅಭಿನಯದ  52ನೇ ಚಿತ್ರ ಮೂಡಿಬರಲಿದ್ದು, ಚಿತ್ರದ ಮುಹೂರ್ತಕ್ಕೆ ದಿನ ಗೊತ್ತು ಮಾಡಲಾಗಿದೆ. ಇದೇ ತಿಂಗಳ 16ಕ್ಕೆ ಚಿತ್ರ ಸೆಟ್ಟೇರಲಿದ್ದು, 'ಒಡೆಯರ್' ಎಂಬ ಶೀರ್ಷಿಕೆಯಲ್ಲಿ ಈ ಚಿತ್ರ ಮೂಡಿ ಬರಲಿದೆ.

ಉಳಿದಂತೆ ತಾರಾಗಣದ ಬಗ್ಗೆ ಇನ್ನಷ್ಟೆ ಮಾಹಿತಿ ಹೊರ ಬರಬೇಕಿದ್ದು, ಈ ಹಿಂದೆ 'ಬುಲ್ ಬುಲ್' ಸಿನಿಮಾದಲ್ಲಿ ಒಂದಾಗಿದ್ದ ದರ್ಶನ್ ಮತ್ತು ಶ್ರೀಧರ್ ಜೋಡಿ ಈ ಸಿನಿಮಾದಲ್ಲೂ ಹೇಗೆ ಕಮಾಲ್​ ಮಾಡುತ್ತೆ ಅನ್ನೋ ಕುತೂಹಲ ಮನೆ ಮಾಡಿದೆ.

 

 
First published:June 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ