ರೆಬೆಲ್ ಸ್ಟಾರ್ ಅಂಬಿ ಅವರ ಕುಟುಂಬದಲ್ಲಿ ದರ್ಶನ್ ಅವರಿಗೆ ಒಂದು ವಿಶೇಷ ಸ್ಥಾನವಿದೆ. ಅಂಬಿ ಯಾವಾಗ್ಲೂ ಹೇಳುತ್ತಿದ್ದರು ದರ್ಶನ್ ಅವರ ದೊಡ್ಡ ಮಗನಿದ್ದಂತೆ ಅಂತ. ಅದರಂತೆ ಅಂಬಿಯ ನಿಧನದ ನಂತರವೂ ದರ್ಶನ್ ಹಿರಿಯ ಮಗನ ಕರ್ತವ್ಯವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ್ದಾರೆ.
ಸುಮಲತಾ ಅವರು ಮಂಡ್ಯದಿಂದ ಲೋಕಸಭಾ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ನಿಂತಾಗಲೂ ದರ್ಶನ್ ತಮ್ಮ ಎಲ್ಲ ಕೆಲಸಗಳನ್ನು ಬದಿಗಿಟ್ಟು, ಅವರ ಪರವಾಗಿ ಶ್ರಮಿಸಿದ್ದರು. ಇನ್ನೂ ಅಭಿಷೇಕ್ ಅಂಬರೀಷ್ ಅವರ 'ಅಮರ್' ಸಿನಿಮಾ ಚಿತ್ರೀಕರಣದಲ್ಲೂ ಬೆನ್ನೆಲುಬಾಗಿ ನಿಂತಿದ್ದರು.
ಸುಮಲತಾ ಅವರನ್ನು ಮದರ್ ಇಂಡಿಯಾ ಎಂದೇ ಕರೆಯುವ ದರ್ಶನ್, ಇಂದು ಅಮ್ಮನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ಎಂದಿನಂತೆ ಮದರ್ ಇಂಡಿಯಾ ಸುಮಲತಾ ಅಮ್ಮನವರಿಗೆ ಹುಟ್ಟುಹಬ್ಬ ಶುಭಾಶಯಗಳು ಎಂದು ಟ್ವಿಟರ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
"ಮದರ್ ಇಂಡಿಯಾ" @sumalathaA ಅಮ್ಮರವರಿಗೆ ಹುಟ್ಟು ಹಬ್ಬದ ಹಾರ್ಧಿಕ ಶುಭಾಶಯಗಳು.💐🎂 pic.twitter.com/cWy1vblwu9
— Darshan Thoogudeepa (@dasadarshan) August 27, 2020
ಖ್ಯಾತ ಕಲಾವಿದೆ, ಮಂಡ್ಯ ಲೋಕಸಭಾ ಕ್ಷೇತ್ರದ ಜನಪ್ರಿಯ ಸಂಸತ್ ಸದಸ್ಯರಾದ ಶ್ರೀಮತಿ ಸುಮಲತಾ ಅಂಬರೀಷ್ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ಇರಲಿ ಎಂದು ಹಾರೈಸುತ್ತೇನೆ.@sumalathaA
— B.S. Yediyurappa (@BSYBJP) August 27, 2020
ಮಂಡ್ಯ ಸಂಸದೆ, ಹಿರಿಯ ನಾಯಕಿ @sumalathaA ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಸಕ್ಕರೆ ನಾಡು ಮಂಡ್ಯದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ನಿಮಗೆ ಭಗವಂತನು ದೀರ್ಘಾಯುಷ್ಯ, ಉತ್ತಮ ಅರೋಗ್ಯ ನೀಡಿ ಆಶೀರ್ವದಿಸಲಿ ಎಂದು ನನ್ನ ಶುಭಹಾರೈಕೆ. pic.twitter.com/Owv6Rf8t9Z
— Dr. Ashwathnarayan C. N. (@drashwathcn) August 27, 2020
ಹಿರಿಯ ನಟಿ, ಮಂಡ್ಯ ಸಂಸದೆ,. ದಿವಗಂತ ರೆಬಲ್ ಸ್ಟಾರ್ ಅಂಬರೀಶ್ ರವರ ಧರ್ಮಪತ್ನಿ @sumalathaA ಅಮ್ಮ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ...
— ಸುನಿ/SuNi (@SimpleSuni) August 27, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ