ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಹೆಂಡತಿಗೆ ಮತ್ತೆ ಕಿರುಕುಳ!

news18
Updated:August 30, 2018, 11:44 AM IST
ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಹೆಂಡತಿಗೆ ಮತ್ತೆ ಕಿರುಕುಳ!
news18
Updated: August 30, 2018, 11:44 AM IST
ಪುಟ್ಟರಾಜು, ನ್ಯೂಸ್​ 18 ಕನ್ನಡ

ಬೆಂಗಳೂರು (ಆ.30): ಸ್ಯಾಂಡಲ್​ವುಡ್​ನಲ್ಲಿ ಡಿ ಬಾಸ್​ ಎಂದೇ ಖ್ಯಾತಿ ಪಡೆದಿರುವ ಸ್ಟಾರ್​ ನಟ ದರ್ಶನ್​ ಪತ್ನಿ ವಿಜಯಲಕ್ಷ್ಮೀಗೆ ಫೇಸ್​ಬುಕ್​ನಲ್ಲಿ ಕಿಡಿಗೇಡಿಗಳು ಕಿರುಕುಳ ನೀಡಿರುವ ಘಟನೆ ನಡೆದಿದೆ.

ವಿಜಯಲಕ್ಷ್ಮಿ ಅವರ ಚಿತ್ರ ಹಾಗೂ ಅವರ ಕುಟುಂಬದ ಚಿತ್ರಗಳನ್ನು ಬಳಸಿಕೊಂಡು ಅವರ ಬಗ್ಗೆ ಕೀಳು ಮಟ್ಟದ ಅಶ್ಲೀಲ ಪದ ಬಳಕೆ ಮಾಡಲಾಗಿದೆ. ದರ್ಶನ್​ ಜೊತೆಯಿರುವ  ವಿಜಯಲಕ್ಷ್ಮೀ ಅವರ ಚಿತ್ರವನ್ನು ಬಳಸಿಕೊಂಡು ಅದಕ್ಕೆ ಆರೋಪಿ ತನ್ನ ಫೋಟೊ ಬಳಸಿಕೊಂಡು ಆಕೆ ತನ್ನ ಪತ್ನಿ ಎಂದು ಬರೆದುಕೊಂಡಿದ್ದಾನೆ.ಅಷ್ಟೇ ಅಲ್ಲದೇ ವಿಜಯಲಕ್ಷ್ಮೀ ಅವರ ಹೆಸರಿನಲ್ಲಿ ನಕಲಿ ಖಾತೆ ತೆರದು ಅದನ್ನು ಅಸಲಿ ಖಾತೆ ಎಂಬಂತೆ ಬಿಂಬಿಸಿದ್ದಾನೆ. ಈ ಖಾತೆಯಲ್ಲಿ ಅವರ ಫೋಟೊ ಎಡಿಟ್​ ಮಾಡಿ  ಅವರ  ಫೊಟೊಗೆ "ನನ್ನ ಹೆಂಡತಿ"ಎಂದು ಟ್ಯಾಗ್ ಮಾಡಿದ್ದಾನೆ. ಈ ಮೂಲಕ ಅವರ ಗೌರವಕ್ಕೆ ಧಕ್ಕೆ ತರುವಂತೆ ನಡೆದುಕೊಂಡಿದ್ದಾನೆ ಎಂದು ವಿಜಯಲಕ್ಷಿ ಸೈಬರ್​ ಪೊಲೀಸರಿಗೆ ದೂರು ನೀಡಿದ್ದಾರೆ.

ಸೈಬರ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಎಫ್ಐಆರ್ ದಾಖಲಾಗಿದ್ದು, ಐಪಿಸಿ ಸೆಕ್ಷನ್ 354(D), 354A(1)(iv), (505) (507) (420)ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದ್ದು, ಈ ಕುರಿತು ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ.
Loading...

 
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626