DBoss Darshan: ದರ್ಶನ್​ ತೋಟದ ಮನೆಗೆ ಎಂಟ್ರಿಕೊಟ್ಟ ಗಜೇಂದ್ರ..!

ಪ್ರಾಣಿ ಪ್ರಿಯ ದರ್ಶನ್​ ತಮ್ಮ ಮನೆಯಲ್ಲಿ ಸಾಕು ಪ್ರಾಣಿಗಳಲ್ಲದೆ ಮೈಸೂರಿನ ಮೃಗಾಲಯದಲ್ಲಿರುವ ವನ್ಯ ಜೀವಿಗಳನ್ನೂ ಅವರೂ ದತ್ತು ಪಡೆದು ಸಾಕುತ್ತಿದ್ದಾರೆ. ಇದರಿಂದಾಗಿಯೇ ಅವರನ್ನು ಅರಣ್ಯ ಇಲಾಖೆ ರಾಯಭಾರಿಯನ್ನಾಗಿ ನೇಮಿಸಿದೆ. ಇಂತಹ ದಾಸನ ತೋಟಕ್ಕೆ ಈಗ ಹೊಸ ಅತಿಥಿಯೊಬ್ಬರ ಆಗಮನವಾಗಿದೆ.  

Anitha E | news18
Updated:June 11, 2019, 8:08 PM IST
DBoss Darshan: ದರ್ಶನ್​ ತೋಟದ ಮನೆಗೆ ಎಂಟ್ರಿಕೊಟ್ಟ ಗಜೇಂದ್ರ..!
ಡಿ ಬಾಸ್
  • News18
  • Last Updated: June 11, 2019, 8:08 PM IST
  • Share this:
- ಅನಿತಾ ಈ, 

ಅಭಿಮಾನಿಗಳ ದಾಸ ದರ್ಶನ್​ ಅವರಿಗಿರುವ ಪ್ರಾಣಿ ಪ್ರೀತಿ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮೈಸೂರಿನಲ್ಲಿರುವ ಅವರ ತೋಟದ ಮನೆಗೆ ಹೋದರೆ ಅವರು ಪ್ರೀತಿಯಿಂದ ಸಾಕಿಕೊಂಡಿರುವ ಪ್ರಾಣಿ-ಪಕ್ಷಿಗಳು ಕಾಣಸಿಗುತ್ತವೆ.

ಇಷ್ಟೇ ಏಕೆ ಮೈಸೂರಿನ ಮೃಗಾಲಯದಲ್ಲಿರುವ ವನ್ಯ ಜೀವಿಗಳನ್ನೂ ಅವರೂ ದತ್ತು ಪಡೆದು ಸಾಕುತ್ತಿದ್ದಾರೆ. ಇದರಿಂದಾಗಿಯೇ ಅವರನ್ನು ಅರಣ್ಯ ಇಲಾಖೆ ರಾಯಭಾರಿಯನ್ನಾಗಿ ನೇಮಿಸಿದೆ.

Darshan's new horse
ನಟ ದರ್ಶನ್​ ಅವರ ಗಜೇಂದ್ರ


ದರ್ಶನ್​ ಅವರಿಗೆ ಕುದುರೆ ಎಂದರೆ ವಿಶೇಷ ಪ್ರೀತಿ. ಅವರ ಬಳಿ ಈಗಾಗಲೇ ಸಕಾಷ್ಟು ಕುದುರೆಗಳಿವೆ. ಸಾರಥಿ ಸಿನಿಮಾದಲ್ಲೂ ಅವರು ತಾವೇ ಸಾಕಿದ್ದ ಕುದುರೆಯನ್ನು ಬಳಸಿಕೊಂಡಿದ್ದಾರೆ. ಇಂತಹ ದರ್ಶನ್​ ಅವರ ತೋಟಕ್ಕೆ ಈಗ ಹೊಸ ಕುದುರೆಯೊಂದು ಎಂಟ್ರಿ ಕೊಟ್ಟಿದೆ.

ಇದನ್ನೂ ಓದಿ: Roberrt Fever: ಡಿಬಾಸ್​ ಅಭಿಮಾನಿಗಳಲ್ಲಿ ಆರಂಭವಾಗಿದೆ 'ರಾಬರ್ಟ್​' ಫೀವರ್​..!

ಬಿಳಿ ಬಣ್ಣದ ಕುದುರೆ ಇದಾಗಿದ್ದು, ಇದಕ್ಕೆ ಈಗಾಗಲೇ ನಾಮಕರಣ ಸಹ ಮಾಡಲಾಗಿದೆ. ಗಜನಿಗೆ ಸಿಕ್ಕ ಇಂದ್ರ ಎಂಬಂತೆ ಗಜೇಂದ್ರ ಎಂದು ಈ ಕುದುರೆಗೆ ಹೆಸರಿಡಲಾಗಿದೆ. ಆದರೆ ಈ ಕುದುರೆ ಎಲ್ಲಿಯದು ಹಾಗೂ ಎಷ್ಟು ಹಣಕ್ಕೆ ತರಲಾಗಿ ಎಂಬ ಮಾಹಿತಿ ಲಭ್ಯವಾಗಿಲ್ಲ.ಇದನ್ನೂ ಓದಿ: Rashmika Mandanna: ವೈರಲ್​ ಆಗುತ್ತಿದೆ ರಶ್ಮಿಕಾ ಮಂದಣ್ಣರ ಈ ವರ್ಕೌಟ್​ ವಿಡಿಯೋ..!

ದರ್ಶನ್​ ಅವರಿಗೆ ಕೇವಲ ಕುದುರೆ ಮಾತ್ರವಲ್ಲ, ನಾಯಿ, ಆನೆ ಸೇರಿದಂತೆ ಪಕ್ಷಿಗಳೆಂದರೆ ತುಂಬಾ ಪ್ರೀತಿ. ಕಾನೂನಿನಲ್ಲಿ ಅವಕಾಸವಿರುವ ಪ್ರಾಣಿ-ಪಕ್ಷಿಗಳನ್ನು ದಚ್ಚು ಸಾಕುತ್ತಿದ್ದಾರೆ. ಅಲ್ಲದೆ ಅರಣ್ಯ ಹಾಗೂ ಪರಿಸರದ ಉಳಿವಿಗಾಗಿ ತಮ್ಮ ಕೈಲಾದಷ್ಟು ಪ್ರಯತ್ನ ಮಾಡುತ್ತಿದ್ದಾರೆ.

DBoss Darshan Photos: ವಿಲನ್​ ನಿರ್ಮಾಪಕರ ಜತೆ ಹೊಸ ಸಿನಿಮಾ ಮಾಡಲಿದ್ದಾರಾ ಡಿಬಾಸ್​ ದರ್ಶನ್​..?
First published: June 11, 2019, 7:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading