HOME » NEWS » Entertainment » DARSHAN SUDEEP AND PRODUCER SWAPNA KRISHNA ENTERED IN FANS WAR AE

Darshan And Sudeep: ದಚ್ಚು-ಕಿಚ್ಚನ ಫ್ಯಾನ್ಸ್​ ವಾರ್: ದರ್ಶನ್​-ಸುದೀಪ್​ ಜತೆಗೆ ಪೈಲ್ವಾನ್​ ನಿರ್ಮಾಪಕಿ ಸ್ವಪ್ನಾ ಕೃಷ್ಣ ಎಂಟ್ರಿ..!

ದಚ್ಚು ಕಿಚ್ಚನ ಅಭಿಮಾನಿಗಳ ನಡುವಿನ ಆನ್​ಲೈನ್ ವಾರ್​ಗೆ ಈಗ ಸ್ಟಾರ್​ಗಳ ಎಂಟ್ರಿ ಆಗಿದೆ. ದರ್ಶನ್, ಕಿಚ್ಚ ಹಾಗೂ ಪೈಲ್ವಾನ್​ ನಿರ್ಮಾಪಕಿ ಸ್ವಪ್ನಾ ಕೃಷ್ಣ ಸಹ ಟ್ವೀಟ್​ ಮಾಡುವ ಮೂಲಕ ಅಭಿಮಾನಿಗಳ ವಾರ್​ಗೆ ಅಧಿಕೃತವಾಗಿಯೇ ಎಂಟ್ರಿ ಕೊಟ್ಟಿದ್ದಾರೆ.

Anitha E | news18india
Updated:September 17, 2019, 5:14 PM IST
Darshan And Sudeep: ದಚ್ಚು-ಕಿಚ್ಚನ ಫ್ಯಾನ್ಸ್​ ವಾರ್: ದರ್ಶನ್​-ಸುದೀಪ್​ ಜತೆಗೆ ಪೈಲ್ವಾನ್​ ನಿರ್ಮಾಪಕಿ ಸ್ವಪ್ನಾ ಕೃಷ್ಣ ಎಂಟ್ರಿ..!
ದರ್ಶನ್​, ಸ್ವಪ್ನಾ ಕೃಷ್ಣ ಹಾಗೂ ಸುದೀಪ್​
  • Share this:
ದರ್ಶನ್ ಮತ್ತು ಕಿಚ್ಚ ಸುದೀಪ್ ಅಭಿಮಾನಿಗಳು ಬಹಿರಂಗ ಪತ್ರಗಳ ಮೂಲಕ ಆನ್‍ಲೈನ್‍ನಲ್ಲೇ ಯುದ್ಧ ಸಾರಿದ್ದಾರೆ. ಇನ್ನೇನು ಅಭಿಮಾನಿಗಳ ನಡುವಿನ ಜಗಳ  ಮಿತಿಮೀರುತ್ತಿದೆ ಎನ್ನುವಾಗಲೇ ದರ್ಶನ್​, ಕಿಚ್ಚ ಸುದೀಪ್​ ಅಖಾಡಕ್ಕಿಳಿದು ಟ್ವೀಟ್​ ಮಾಡಿದ್ದಾರೆ. ಇದರ ಬೆನ್ನಲ್ಲೇ ಪೈಲ್ವಾನ್ ಸಿನಿಮಾದ ನಿರ್ಮಾಪಕಿ ಸ್ವಪ್ನಾ ಕೃಷ್ಣ ಸಹ ಈಗ ಇದಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ದರ್ಶನ್​ ತಮ್ಮ ಅಭಿಮಾನಿಗಳ ಪರವಾಗಿ ಟ್ವೀಟ್​ ಮಾಡುವ ಮೂಲಕ ಎಚ್ಚರಿಕೆ ಕೊಟ್ಟಿದ್ದಾರೆ. ' ಸದ್ಯಕ್ಕೆ ನಾನು ಬೆಂಗಳೂರಲ್ಲಿಲ್ಲ, ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದೀನಿ. ನನ್ನ ಅನ್ನದಾತರು ಸೆಲೆಬ್ರಿಟಿಗಳನ್ನು ಕೆಣಕಲು ಅಥವಾ ಪ್ರಚೋದಿಸಲು ಬರಬೇಡಿ' ಎಂದು ಟ್ವೀಟ್​ನಲ್ಲಿ ಬರೆದಿದ್ದಾರೆ.

 



ಸೆಲೆಬ್ರಿಟಿಗಳು ಅಂದ್ರೆ ದರ್ಶನ್​ ಅವರ ಅಭಿಮಾನಿಗಳು. ಈ ಹಿಂದೆ 'ಕುರುಕ್ಷೇತ್ರ' ಸಿನಿಮಾದ ಸಮಯದಲ್ಲಿ ದಚ್ಚು ಅಭಿಮಾನಿಗಳನ್ನು ಸೆಲೆಬ್ರಿಟಿಗಳು ಎಂದು ಕರೆದಿದ್ದರು. ಆಗಿನಿಂದ ಅವರು ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿಗಳು ಅಂತಲೇ ಕರೆಯುತ್ತಾರೆ.ವಾರ್ನಿಂಗ್ ಕೊಡೋದೂ ಇಲ್ಲ, ತಗೊಳೋದೂ ಇಲ್ಲ: ಕಿಚ್ಚ ಸುದೀಪ್​

ಅತ್ತ ದಚ್ಚು ಎಂಟ್ರಿ ಕೊಟ್ಟ ಬೆನ್ನಲ್ಲೇ, ಇತ್ತ ಕಿಚ್ಚ ಕೂಡ ಪತ್ರ ಬರೆದಿದ್ದಾರೆ. ಆದರೆ ಕಿಚ್ಚ ಈ ಪತ್ರದಲ್ಲಿ ತಮ್ಮ ಅಭಿಮಾನಿಗಳನ್ನು ಸುಮ್ಮನಿರುವಂತೆ ಮನವಿ ಮಾಡಿದ್ದಾರೆ.  'ನಾನು ವಾರ್ನಿಂಗ್ ಕೊಡೋದೂ ಇಲ್ಲ, ತಗೊಳೋದೂ ಇಲ್ಲ. ಕೇವಲ ಮಾತುಗಳಿಂದಲೇ ಯುದ್ಧಗಳನ್ನು ಗೆಲ್ಲುವ ಹಾಗಿದ್ದರೆ ಹೆಚ್ಚಿನ ಸಂಖ್ಯೆಯಲ್ಲಿ ರಾಜ ಮಹಾರಾಜರು ರಾಜ್ಯಭಾರ ಮಾಡುತ್ತಿದ್ದರು. ಆದರೆ ನಾನು ಮಾನವೀಯತೆಯ ಹಾದಿಯಲ್ಲಿ ಹೋಗಲು ಬಯಸುತ್ತೇನೆ' ಎಂದಿದ್ದಾರೆ.

Warning isn't what I take nor choose to give. 😊😊



'ಹೊರಗಡೆ ತುಂಬಾ ವಿಷಯಗಳು ಹರಿದಾಡುತ್ತಿವೆ. ಅದರಿಂದ ಯಾರಿಗೂ ಒಳ್ಳೆಯದಾಗುತ್ತಿಲ್ಲ. ಒಳ್ಳೆಯ ವಿಷಯಗಳ ಬಗ್ಗೆ ಆದಷ್ಟು ಆಲೋಚಿಸಿ. ಬೇಡದ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಎಂದಿದ್ದರೂ ಸತ್ಯಕ್ಕೇ ಜಯ. ನೀವು ಸುಮ್ಮನಾದರೆ ಅದರಿಂದ ಮತ್ತೊಬ್ಬರ ಮುಂದೆ ಸಣ್ಣವರಾದಿರಿ ಎಂದಲ್ಲ.  ಪೈಸರಿ ಬಗ್ಗೆ ನಾನಾಗಲಿ ಅಥವಾ ಪೈಲ್ವಾನ್​ ಚಿತ್ರತಂಡದ ಯಾರೊಬ್ಬರೂ ಯಾವುದೇ ನಟನಿಂದ ಪೈಸರಿ ಆಗಿದೆ ಎಂದು ಎಲ್ಲೂ ಮಾತನಾಡಿಲ್ಲ. ಪೈರಸಿ ಸಿನಿಮಾ ಲಿಂಕ್​ ಅನ್ನು ಹಂಚಿಕೊಂಡಿರುವವ ಹೆಸರುಗಳನ್ನು ಸೈಬರ್ ಪೊಲೀಸರಿಗೆ ನೀಡಿದ್ದೇವೆ.  ಇನ್ನು ಬಹಿರಂಗ ಪತ್ರಗಳನ್ನು ಇಲ್ಲಿಗೇ ನಿಲ್ಲಿಸಿಬಿಡಿ. ಯಾರೋ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ, ನನ್ನನ್ನು ಆಡಿಕೊಂಡು ಅವರಿಗೆ ಸಂತೋಷ ಸಿಗುತ್ತಿದೆ ಅಂದ್ರೆ ಮಾಡಿಕೊಳ್ಳಲಿ ಬಿಡಿ. ಅದ್ರಿಂದ ನಿಮಗೆ ಬೇಸರವಾಗುತ್ತೆ ನಿಜ, ಆದರೆ ಈ ರೀತಿಯ ಅಪಪ್ರಚಾರಗಳು ನನ್ನನ್ನು ಕುಗ್ಗಿಸಲಾರವು ಅನ್ನೋದು ನಿಮಗೆ ತಿಳಿದಿರಲಿ' ಎಂದು ಸುದೀಪ್​ ಉದ್ದದ ಪತ್ರವೊಂದನ್ನು ಅಭಿಮಾನಿಗಳಿಗೆ ಬರೆದಿದ್ದಾರೆ.

ಇದನ್ನೂ ಓದಿ: 'ವರ್ಲ್ಡ್​ ಫೇಮಸ್​ ಲವರ್' ಆದ ವಿಜಯ್​ ದೇವರಕೊಂಡ: ಖುಷಿಯಲ್ಲಿ ಮಹಿಳಾ ಅಭಿಮಾನಿಗಳು ​..!

ಕಿಚ್ಚ ಸುದೀಪ್​ ಟ್ವೀಟ್​ ಮಾಡುವ ಮೊದಲು 'ಪೈಲ್ವಾನ್' ನಿರ್ಮಾಪಕಿ ಸ್ವಪ್ನಾ ಕೃಷ್ಣ ಸಹ ಫ್ಯಾನ್ಸ್​ ವಾರ್​ಗೆ ಎಂಟ್ರಿ ಕೊಟ್ಟು ಟ್ವೀಟ್​ ಮಾಡಿದ್ದರು. 'ಎಲ್ಲ ಅಭಿಮಾನಿಗಳಿಗೆ ಸಿಹಿ ಸುದ್ದಿ..... ಬೆದರಿಕೆಗೆ ಜಗ್ಗೋನಲ್ಲ ನಮ್ಮ ಪೈಲ್ವಾನ... ಪೈಲ್ವಾನ್​ನ ಕಾಲ್​ ಏಳೆಯೋಕೆ ಬಂದವರ ಕಾಲ್​ ಕೆಳಗೇನೇ ..' ಅಂತ ಟ್ವೀಟ್​ ಮಾಡಿದ್ದಾರೆ.

ಎಲ್ಲ ಅಭಿಮಾನಿಗಳಿಗೆ ಸಿಹಿ ಸುದ್ದಿ....ಬೆದರಿಕೆಗೆ ಜಗ್ಗೊನಲ್ಲ ನಮ್ಮಪೈಲ್ವಾನ #ಪೈಲ್ವಾನ್ ನ ಕಾಲ್ ಏಳೋಕೆ ಬಂದವರ ಸ್ಥಾನ ಕಾಲ್ ಕೆಳಗೆನೇ



ಅದೇನೇ ಇರಲಿ ಅಭಿಮಾನಿಗಳ ನಡುವಿನ ವಾರ್​ಗೆ ಈ ಸ್ಟಾರ್​ಗಳ ಎಂಟ್ರಿಯಾಗಿದೆ. ಇನ್ನಾದರೂ ಈ ವಾರ್​ ಅಂತ್ಯ ಕಾಣಲಿ ಅನ್ನೋದೇ ಎಲ್ಲರ ಆಶಯ. ಸ್ಯಾಂಡಲ್​ವುಡ್​ ಒಂದು ಕಟುಂಬವಿದ್ದಂತೆ, ಇದರಲ್ಲಿ ಬಿರುಕು ಮೂಡದಿರಲಿ.

 

ಬೆಂಗಳೂರಿನಿಂದ ಬಾಲಿವುಡ್​ವರೆಗೂ ಪಯಣ ಬೆಳೆಸಿದ ಕನ್ನಡಿಗ ಈಗ ರಿಷಭ್​ ಶೆಟ್ಟಿ ಸಿನಿಮಾದಲ್ಲಿ..!


 
First published: September 17, 2019, 5:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories