Roberrt Telugu Teaser: ರಾಬರ್ಟ್​ ಚಿತ್ರದ ತೆಲುಗು ಟೀಸರ್ ರಿಲೀಸ್​ಗೆ ಫಿಕ್ಸಾಯ್ತು ಡೇಟ್​​..!

Darshan: ಈಗ ರಾಬರ್ಟ್​ ಕನ್ನಡದಲ್ಲಿ ರಿಲೀಸ್​ ಆಗು ದಿನದಂದೇ ತೆಲುಗಿನಲ್ಲೂ ತೆರೆ ಕಾಣಲಿದೆ. ಹೀಗಿರುವಾಗಲೇ ರಾಬರ್ಟ್​ ಚಿತ್ರತಂಡ ಈಗ ತೆಲುಗು ಟೀಸರ್​ ರಿಲೀಸ್​ಗೆ ತಯಾರಿ ನಡೆಸಿದೆ. ನಾಳೆ ಅಂದರೆ ಜ.3ರಂದು ತೆಲುಗು ಟೀಸರ್​ ರಿಲೀಸ್​ಗೆ ದಿನಾಂಕ ನಿಗದಿ ಮಾಡಿದೆ.

ರಾಬರ್ಟ್​ ಸಿನಿಮಾದಲ್ಲಿ ದರ್ಶನ್​

ರಾಬರ್ಟ್​ ಸಿನಿಮಾದಲ್ಲಿ ದರ್ಶನ್​

  • Share this:
ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾ ಕನ್ನಡ ಹಾಗೂ ತೆಲುಗಿನಲ್ಲಿ ರಿಲೀಸ್​ ಆಗಲು ಸಜ್ಜಾಗಿದೆ. ಹೀಗಿರುವಾಗಲೇ ಟಾಲಿವುಡ್​ನಲ್ಲಿ ಡಿಬಾಸ್​ ಅಭಿನಯದ ರಾಬರ್ಟ್​ ಸಿನಿಮಾವನ್ನು ಮಾರ್ಚ್​ 11ರಂದು ರಿಲೀಸ್ ಮಾಡಲು ಬಿಡುವುದಿಲ್ಲ ಎಂದು ತೆಲುಗು ಸಿನಿಮಾಗಳ ವಿತರಕರೊಬ್ಬರು ತಗಾದೆ ತೆಗೆದಿದ್ದರು. ಈ ಹಿಂದೆ ಸಿನಿಮಾ ರಿಲೀಸ್​ ದಿನಾಂಕ ನಿಗದಿ ಮಾಡಿದ್ದಾಗ ಓಕೆ ಎಂದಿದ್ದ ವಿತರಕ ಅದೇ ದಿನಾಂಕದಂದು ತೆಲುಗಿನ ಇತರೆ ಸಿನಿಮಾಗಳು ಬಿಡುಗಡೆಯಾಗಲಿದ್ದು, ಅದಕ್ಕಾಗಿ ಕನ್ನಡ ಸಿನಿಮಾದ ತೆಲುಗು ವರ್ಷನ್ ಅನ್ನು ತೆಲುಗು ನಾಡಿನಲ್ಲಿ ರಿಲೀಸ್​ ಮಾಡಲು ಆಗುವುದಿಲ್ಲ. ಇದರಿಂದಾಗಿ ಟಾಲಿವುಡ್​ ನಾಯಕರಿಗೆ ತೊಂದರೆಯಾಗುತ್ತದೆ ಎಂದಿದ್ದರು. ಈ ಕುರಿತಂತೆ ದರ್ಶನ್ ಹಾಗೂ ಉಮಾಪತಿ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೊರೆ ಹೋಗಿದ್ದರು. ತಮಗಾಗುತ್ತಿರುವ ಸಮಸ್ಯೆ ಕುರಿತಂತೆ ದೂರು ನೀಡಿದ್ದರು. ಈ ಸಂಬಂಧ ಚೆನ್ನೈನಲ್ಲಿ ದಕ್ಷಿಣ ಭಾರತದ ಫಿಲಂ ಚೇಂಬರ್​ನಲ್ಲಿ ಸಭೆ ನಡೆಸಿ, ಚರ್ಚಿಸಿದ ನಂತರ ಸಮಸ್ಯೆ ಬಗೆಹರಿಸಲಾಯಿತು. 

ಈಗ ರಾಬರ್ಟ್​ ಕನ್ನಡದಲ್ಲಿ ರಿಲೀಸ್​ ಆಗು ದಿನದಂದೇ ತೆಲುಗಿನಲ್ಲೂ ತೆರೆ ಕಾಣಲಿದೆ. ಹೀಗಿರುವಾಗಲೇ ರಾಬರ್ಟ್​ ಚಿತ್ರತಂಡ ಈಗ ತೆಲುಗು ಟೀಸರ್​ ರಿಲೀಸ್​ಗೆ ತಯಾರಿ ನಡೆಸಿದೆ. ನಾಳೆ ಅಂದರೆ ಜ.3ರಂದು ತೆಲುಗು ಟೀಸರ್​ ರಿಲೀಸ್​ಗೆ ದಿನಾಂಕ ನಿಗದಿ ಮಾಡಿದೆ.

#RoberrtTeluguTeaser on February 3rd, 2021ನಾಳೆ ಸಂಜೆ 4:05ಕ್ಕೆ ಸರಿಯಾಗಿ ತೆಲುಗು ಟೀಸರ್ ರಿಲೀಸ್​ ಆಗಲಿದೆ. ಉಮಾಪತಿ ಹಣ ಹೂಡಿರುವ ಈ ಸಿನಿಮಾವನ್ನು ತರುಣ್​ ಸುಧೀರ್​ ನಿರ್ದೇಶನ ಮಾಡಿದ್ದಾರೆ. ಅರ್ಜುನ್​ ಜನ್ಯ ಸಂಗೀತ ನೀಡಿರುವ ಈ ಸಿನಿಮಾದ ಕನ್ನಡದ ಹಾಡುಗಳು ಈಗಾಗಲೇ ಹಿಟ್​ ಆಗಿವೆ. ನಾಯಕಿಯಾಗಿ ಈ ಸಿನಿಮಾದಲ್ಲಿ ಆಶಾ ಭಟ್​ ನಟಿಸಿದ್ದಾರೆ.

ಇದನ್ನೂ ಓದಿ: ಆದಿಪುರುಷ್​ ಚಿತ್ರದಲ್ಲಿ ಈ ಖ್ಯಾತ ಬಾಲಿವುಡ್​ ನಟಿ ಪ್ರಭಾಸ್​ಗೆ ಅಮ್ಮನಾಗಿ ನಟಿಸಲಿದ್ದಾರೆ..!

ಒಂದು ಕಡೆ ತೆಲುಗು ಟೀಸರ್ ಹೇಗಿರಲಿದೆ ಅನ್ನೋ ಕುತೂಹಲ ಟಾಲಿವುಡ್​ ಹಾಗೂ ಸ್ಯಾಂಡಲ್​ವುಡ್​ ಸಿನಿಪ್ರಿಯರಲ್ಲಿದೆ. ಅದಕ್ಕಾಗಿ ಎಲ್ಲರೂ ಕಾತರರಾಗಿದ್ದಾರೆ. ಇನ್ನು ರಾಬರ್ಟ್​ ಸಿನಿಮಾದ ಸ್ವಾಗತಕ್ಕಾಗಿ ಟಾಲಿವುಡ್​ ಕಾಯುತ್ತಿದೆ. ರಾಬರ್ಟ್​ ಸಿನಿಮಾದ ನಿರ್ಮಾಪಕ ಉಮಾಪತಿ ಅವರಿಗೆ ತೆಲುಗು ಸಿನಿಮಾ ನಿರ್ಮಾಪಕರು ಕಾರ್ಯಕ್ರಮಕ್ಕೆ ಆಹ್ವಾನಿಸಿ, ಅಲ್ಲಿ ಸನ್ಮಾನ ಮಾಡಿದ್ದಾರೆ.


ಮಾರ್ಚ್​ 11ರಂದು ಕನ್ನಡ ಹಾಗೂ ತೆಲುಗಿನಲ್ಲಿ ದರ್ಶನ್​ ಅಭಿನಯದ ರಾಬರ್ಟ್​ ಸಿನಿಮಾ ಅದ್ಧೂರಿಯಾಗಿ ರಿಲೀಸ್​ ಆಗುತ್ತಿದೆ. 400ಕ್ಕೂ ಹೆಚ್ಚು ಚಿತ್ರಮಂದಿರಗಳಿಗೆ ರಾಬರ್ಟ್​ ಲಗ್ಗೆ ಇಡಲಿದ್ದು, ಅಭಿಮಾನಿಗಳು ಡಿಬಾಸ್​ ದರ್ಶನಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.
Published by:Anitha E
First published: