Darshan: ದೊಡ್ಡ ಮೊತ್ತಕ್ಕೆ ಮಾರಾಟವಾಯ್ತು ದರ್ಶನ್​ ಅಭಿನಯದ ರಾಬರ್ಟ್​ ಚಿತ್ರದ ತೆಲುಗು ವಿತರಣೆಯ ಹಕ್ಕು..!

Roberrt Movie Telugu Distribution Right: ರಾಬರ್ಟ್ ತೆಲುಗು ವಿತರಣೆಯ ಹಕ್ಕನ್ನು ಶ್ರೀ ವೆಂಕಟೇಶ್ವರ‌‌ ಮೂವೀಸ್ ಖರೀದಿಸಿದೆಯಂತೆ. ವಿತರಕ ಚಂಚಲವಾಡ ಶ್ರೀನಿವಾಸ್ ರಾವ್ ಅವರು‌ ಆಂಧ್ರ ಹಾಗೂ ತೆಲಂಗಾಣದಲ್ಲಿ ರಾಬರ್ಟ್​ ಸಿನಿಮಾದ ವಿತರಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾರಾಟವಾಯ್ತು ರಾಬರ್ಟ್​ ಸಿನಿಮಾದ ತೆಲುಗು ವಿತರಣೆಯ ಹಕ್ಕು

ಮಾರಾಟವಾಯ್ತು ರಾಬರ್ಟ್​ ಸಿನಿಮಾದ ತೆಲುಗು ವಿತರಣೆಯ ಹಕ್ಕು

  • Share this:
ದರ್ಶನ್ ಅಭಿನಯದ ರಾಬರ್ಟ್​ ಸಿನಿಮಾ ಟಾಲಿವುಡ್​ನಲ್ಲಿ ರಿಲೀಸ್ ಆಗಲು ಇದ್ದ ತೊಡಕು ನಿವಾರಣೆಯಾಗಿದೆ. ಏಕಕಾಲದಲ್ಲಿ ಸ್ಯಾಂಡಲ್​ವುಡ್​ ಹಾಗೂ ಟಾಲಿವುಡ್​ನಲ್ಲಿ ಅಬ್ಬರಿಸಲಿದ್ದಾನೆ ರಾಬರ್ಟ್​. ಈಗಾಗಲೇ ಚಿತ್ರತಂಡ ರಾಬರ್ಟ್​ ಸಿನಿಮಾದ ಪ್ರಚಾರ ಕಾರ್ಯ ಆರಂಭಿಸಿದೆ. ತೆಲುಗಿನಲ್ಲೂ ಸಿನಿಮಾದ ಪ್ರಮೋಷನ್​ಗೆ ಚಿತ್ರತಂಡ ಸಿದ್ಧವಾಗುತ್ತಿದೆ. ಮಾರ್ಚ್​ 11ರಂದು ಕನ್ನಡ ಹಾಗೂ ತೆಲುಗು ಎರಡರಲ್ಲೂ ರಿಲೀಸ್ ಆಗುತ್ತಿದೆ ರಾಬರ್ಟ್​. ಈ ಹಿಂದೆ ತೆಲುಗು ಸಿನಿಮಾವನ್ನು ಟಾಲಿವುಡ್​ನಲ್ಲಿ ತೆರೆಗೆ ತರಲು ಕಷ್ಟ ಎಂದು ಕೆಲ ವಿತರಕರು ಹೇಳಿದ್ದರು. ಇದರಿಂದಾಗಿಯೇ ದರ್ಶನ್​  ಹಾಗೂ ನಿರ್ಮಾಪಕ ಉಮಾಪತಿ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೊರೆ ಹೋಗಿದ್ದರು. ನಂತರ ಎದುರಾಗಿದ್ದ ತೊಡಕು ನಿವಾರಣೆಯಾಗಿ ಈಗ ಟಾಲಿವುಡ್​ ವಿತರಕರು ತಾ ಮುಂದು ನಾ ಮುಂದು ಅಂತ ಬಂದು ರಾಬರ್ಟ್​ ಚಿತ್ರ  ತೆಲುಗು ವಿತರಣೆಯ ಹಕ್ಕನ್ನು ಖರೀದಿಸಿದ್ದಾರಂತೆ. 

ರಾಬರ್ಟ್​ ಸಿನಿಮಾದ ತೆಲುಗು ವಿತರಣೆಯ ಹಕ್ಕು ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆಯಂತೆ. ಆದರೆ ಎಷ್ಟು ಮೊತ್ತಕ್ಕೆ ಮಾರಾಟವಾಗಿದೆ ಎಂದು ಇನ್ನೂ ಬಹಿರಂಗವಾಗಿಲ್ಲ. ಈ ಸುದ್ದಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ದರ್ಶನ್​ ಅವರ ಅಭಿಮಾನಿಗಳ ಪುಟಗಳಲ್ಲಿ ಹರಿದಾಡುತ್ತಿದೆ.ರಾಬರ್ಟ್ ತೆಲುಗು ವಿತರಣೆಯ ಹಕ್ಕನ್ನು ಶ್ರೀ ವೆಂಕಟೇಶ್ವರ‌‌ ಮೂವೀಸ್ ಖರೀದಿಸಿದೆಯಂತೆ. ವಿತರಕ ಚಂಚಲವಾಡ ಶ್ರೀನಿವಾಸ್ ರಾವ್ ಅವರು‌ ಆಂಧ್ರ ಹಾಗೂ ತೆಲಂಗಾಣದಲ್ಲಿ ರಾಬರ್ಟ್​ ಸಿನಿಮಾದ ವಿತರಣೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಉಮಾಪತಿ ಅವರ ಜೊತೆ ವಿತರಕರು ಇರುವ ಫೋಟೋ ಸಹ ಈಗ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ.

 ರಾಬರ್ಟ್ ತೆಲುಗು ವಿತರಣೆ ಹಕ್ಕು ಪಡೆದ ಶ್ರೀ ವೆಂಕಟೇಶ್ವರ‌‌ ಮೂವೀಸ್.ವಿತರ ಚಂಚಲ ವಾಡ ಶ್ರೀನಿವಾಸ್ ರಾವ್ ರಿಂದ‌ ಆಂದ್ರ ಹಾಗು ತೆಲಂಗಾಣದಲ್ಲಿ ಬಿಡುಗಡೆ.400 ಕ್ಕು ಹೆಚ್ಚಿನ ಚಿತ್ರಮಂದಿರಗಳಲ್ಲಿ ತೆಲುಗು ಅವರತಣಿಕೆ ಬಿಡುಗಡೆ ರಾಬರ್ಟ್ ಸಿನಿಮಾ ದಾಖಲೆ‌ ಮೊತ್ತ ಕ್ಕೆ ಸೇಲ್ ಆಗಿದೆ ತೆಲುಗು ವಿತರಣೆ ಹಕ್ಕು @dasadarshan @umap30071 pic.twitter.com/1rEEk0YRAo400 ಚಿತ್ರಮಂದಿರಗಳಲ್ಲಿ ರಾಬರ್ಟ್​ ರಿಲೀಸ್​

400ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ರಾಬರ್ಟ್​ ಸಿನಿಮಾದ ತೆಲುಗು ಅವರತಣಿಕೆ ಬಿಡುಗಡೆಯಾಗಲಿದೆಯಂತೆ. ಇನ್ನೇನು ಕೆಲವೇ ದಿನಗಳಲ್ಲಿ ರಾಬರ್ಟ್​ ಸಿನಿಮಾದ ಪ್ರಚಾರ ಕಾರ್ಯ ಆರಂಭವಾಗಲಿದೆ. ಇನ್ನು ಇತ್ತೀಚೆಗಷ್ಟೆ ರಿಲೀಸ್​ ಆಗಿರುವ ರಾಬರ್ಟ್​ ತೆಲುಗು ಟೀಸರ್​ಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈಗಾಗಲೇ 20 ಲಕ್ಷಕ್ಕೂ ಅಧಿಕ ವೀಕ್ಷಣೆ ಸಿಕ್ಕಿದೆ.

ಉಮಾಪತಿ ನಿರ್ಮಾಣದ ರಾಬರ್ಟ್​ ಸಿನಿಮಾವನ್ನು ತರುಣ್​ ಸುಧೀರ್​ ನಿರ್ದೇಶನ ಮಾಡಿದ್ದಾರೆ. ಆಶಾ ಭಟ್​ ನಾಯಕಿಯಾಗಿ ನಟಿಸಿದ್ದು, ತೆಲುಗಿನ ಖ್ಯಾತ ನಟ ಜಗಪತಿ ಬಾಬು ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
Published by:Anitha E
First published: