ರಿವೀಲ್​​ ಆಯ್ತು ರಾಬರ್ಟ್​ ಚಿತ್ರದಲ್ಲಿ ಮರಿ ಟೈಗರ್​ ಲುಕ್​: ಪಿಸ್ತೂಲ್ ಹಿಡಿದು ನೋಟದಲ್ಲೇ ಕೆಣಕುತ್ತಿರುವ ವಿನೋದ್​ ಪ್ರಭಾಕರ್​

Vinod Prabhakar First Look Poster: ಈಗ ರಾಬರ್ಟ್​ ಚಿತ್ರತಂಡ ವಿನೋದ್​ ಪ್ರಭಾಕರ್​ ಅವರ ಫಸ್ಟ್​ಲುಕ್​ ಪೋಸ್ಟರ್ ರಿಲೀಸ್ ಮಾಡಿದೆ. ಹೇಳಿದಂತೆ 10 ಗಂಟೆಗೆ ಸರಿಯಾಗಿ ಪೋಸ್ಟರ್​ ಬಿಡುಗಡೆಯಾಗಿದ್ದು, ರಾಬರ್ಟ್​ ಅಭಿಮಾನಿಗಳು ಫುಲ್​ ಖುಷಿಯಾಗಿದ್ದಾರೆ. 

ದರ್ಶನ್​ ಅಭಿನಯದ ರಾಬರ್ಟ್​ ಚಿತ್ರದಲ್ಲಿ ವಿನೋದ್​ ಪ್ರಭಾಕರ್​ ಲುಕ್​

ದರ್ಶನ್​ ಅಭಿನಯದ ರಾಬರ್ಟ್​ ಚಿತ್ರದಲ್ಲಿ ವಿನೋದ್​ ಪ್ರಭಾಕರ್​ ಲುಕ್​

  • Share this:
ಸ್ಯಾಂಡಲ್​ವುಡ್​ ಮರಿ ಟೈಗರ್​ ವಿನೋದ್​ ಪ್ರಭಾಕರ್​ ಅವರಿಗೆ ಇಂದು ಹುಟ್ಟುಹಬ್ಬ ಸಂಭ್ರಮ. 40ನೇ ವಸಂತಕ್ಕೆ ಕಾಲಿಟ್ಟ ನಟ ಇಂದು ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರಂತೆ. ನಟನ ಹುಟ್ಟುಹಬ್ಬಕ್ಕೆ ಈಗಾಗಲೇ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಶುಭ ಕೋರುತ್ತಿದ್ದಾರೆ. ಮತ್ತೊಂದು ಕಡೆ ರಾಬರ್ಟ್​ ಚಿತ್ರತಂಡ ಸಹ ವಿನೋದ್​ ಪ್ರಭಾಕರ್ ಅವರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಫಸ್ಟ್​ಲುಕ್​ ಪೋಸ್ಟರ್​ ರಿಲೀಸ್​ ಮಾಡಿದೆ. ಹೌದು, ಮೊನ್ನೆಯಷ್ಟೆ ನಿರ್ದೇಶಕ ತರುಣ್​ ಸುಧೀರ್​ ಡಿ. 3ಕ್ಕೆ ನಟನ ಹುಟ್ಟುಹಬ್ಬದಂದು ರಾಬರ್ಟ್​ ಸಿನಿಮಾದಲ್ಲಿ ಅವರ ಪಾತ್ರ ಫಸ್ಟ್​ಲುಕ್​ ಪೋಸ್ಟರ್​ ರಿಲೀಸ್​ ಮಾಡುವುದಾಗಿ ಟ್ವೀಟ್​ ಮಾಡುವ ಮೂಲಕ ಪ್ರಕಟಿಸಿದ್ದರು. ಇನ್ನು, ಬಹಳ ಹಿಂದೆಯೇ ವಿನೋದ್​ ಪ್ರಭಾಕರ್​ ಹಾಗೂ ದರ್ಶನ್ ಅವರು ಒಟ್ಟಿಗೆ ಇರುವ ರಾಬರ್ಟ್​ ಚಿತ್ರದ ಫೋಟೋ ಒಂದು ಲೀಕ್​ ಆಗಿತ್ತು. ಆಗಲೇ ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. 

ಈಗ ರಾಬರ್ಟ್​ ಚಿತ್ರತಂಡ ವಿನೋದ್​ ಪ್ರಭಾಕರ್​ ಅವರ ಫಸ್ಟ್​ಲುಕ್​ ಪೋಸ್ಟರ್ ರಿಲೀಸ್ ಮಾಡಿದೆ. ಹೇಳಿದಂತೆ 10 ಗಂಟೆಗೆ ಸರಿಯಾಗಿ ನಿರ್ದೇಶಕರ ತರುಣ್​ ಸುಧೀರ್​ ಪೋಸ್ಟರ್​ ಬಿಡುಗಡೆಯಾಗಿದ್ದು, ರಾಬರ್ಟ್​ ಅಭಿಮಾನಿಗಳು ಫುಲ್​ ಖುಷಿಯಾಗಿದ್ದಾರೆ.ಕೈಯಲ್ಲಿ ಪಿಸ್ತೂಲ್​ ಹಿಡಿದ ಮರಿ ಟೈಗರ್​ ನೋಟ ನೋಡುಗರನ್ನು ಕೆಣಕುವಂತಿದೆ. ಫಸ್ಟ್​ಲುಕ್​ ಪೋಸ್ಟರ್​ ರಿಲೀಸ್​ ಮಾಡಿರುವ ಚಿತ್ರತಂಡ, ಪಾತ್ರದ ಹೆಸರನ್ನು ಮಾತ್ರ ರಿವೀಲ್ ಮಾಡಿಲ್ಲ. ರಾಬರ್ಟ್ ಸಿನಿಮಾದ​ ಚಿತ್ರೀಕರಣ ಈಗಾಗಲೇ ಮುಗಿದಿದ್ದುಮ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ಜೋರಾಗಿ ಸಾಗುತ್ತಿವೆ. ಇನ್ನು ಪೋಸ್ಟರ್​, ಟೀಸರ್ ಹಾಗೂ ಹಾಡುಗಳನ್ನು ನೋಡುತ್ತಿರುವ ಅಭಿಮಾನಿಗಳು ಸಿನಿಮಾ ರಿಲೀಸ್​ಗಾಗಿ ಕಾಯುತ್ತಿದ್ದಾರೆ.

ಡಿಬಾಸ್​ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ರಾಬರ್ಟ್​ ಕೊರೋನಾ ಲಾಕ್​ಡೌನ್​ ಇಲ್ಲದೇ ಹೋಗಿದ್ದರೆ, ಈಗಾಗಲೇ ರಿಲೀಸ್​ ಆಗಿ ಬಾಕ್ಸಾಫಿಸ್​ನಲ್ಲಿ ಧೂಳೆಬ್ಬಿಸುತ್ತಿತ್ತು. ಆದರೆ ಕೊರೋನಾ ಲಾಕ್​ಡೌನ್​ ಎಲ್ಲದಕ್ಕೂ ಬ್ರೇಕ್​ ಹಾಕಿತು. ಲಾಕ್​ಡೌನ್​ ಸಡಿಲಗೊಂಡು ಚಿತ್ರಮಂದಿರಗಳು ಬಾಗಿಲು ತೆರೆದಿವೆ. ಆದರೆ ಸಿನಿಪ್ರಿಯರು ಮಾತ್ರ ಸಿನಿಮಾ ನೋಡಲು ಚಿತ್ರಮಂದಿರಗಳಿಗೆ ಬರುತ್ತಿಲ್ಲ.

Roberrt Movie hindi dubbing, Darshan, Roberrt, Darshan's Roberrt Movie Hindi Dubbing Rights , Roberrt Hindi Dubbing Rights, Big Demand for Roberrt Hindi Dubbing Rights, ನಟ ದರ್ಶನ್, ರಾಬರ್ಟ್ ಸಿನಿಮಾ, ರಾಬರ್ಟ್ ಸಿನಿಮಾದ ಹಿಂದಿ ಡಬ್ಬಿಂಗ್ ರೈಟ್ಸ್ ಬೇಡಿಕೆ, ರಾಬರ್ಟ್ ಡಬ್ಬಿಂಗ್ ರೈಟ್ಸ್ ಗೆ ಹೆಚ್ಚಿದ ಬೇಡಿಕೆ, Roberrt Poster, Roberrt Poster release, Darshan Twitter, Roberrt Movie, Roberrt Release, Roberrt News, Roberrt latest, Roberrt shooting, Roberrt release date, Darshan, D Boss darshan, Upamathi, Umapathi S Gowda, Roberrt producer, Tharun Sudhir, Roberrt Trailer, Roberrt Songs, Roberrt release date, ರಾಬರ್ಟ್, ದರ್ಶನ್, ಉಮಾಪತಿ, ತರುಣ್ ಸಧೀರ್
ರಾಬರ್ಟ್​ ಸಿನಿಮಾಲ್ಲಿ ದರ್ಶನ್​


ಎರಡು ಹೊಸ ಸಿನಿಮಾಗಳು ಅಂದರೆ ಆ್ಯಕ್ಟ್ 1978 ಹಾಗೂ ಅರಿಷಡ್​ವರ್ಗ ರಿಲೀಸ್​ ಆಗಿದ್ದು, ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗುತ್ತಿವೆ. ಆದರೂ ಸಿನಿಮಾ ನೋಡಲು ಜನರು ನಿರೀಕ್ಷಿಸಿದ ಮಟ್ಟದಲ್ಲಿ ಚಿತ್ರಮಂದಿರಕ್ಕೆ ಬರುತ್ತಿಲ್ಲ. ಇದೇ ಕಾರಣದಿಂದ ಯಾವ ಸ್ಟಾರ್​ ನಟರ ಸಿನಿಮಾಗಳೂ ರಿಲೀಸ್​ ಆಗುತ್ತಿಲ್ಲ.

ಇದನ್ನೂ ಓದಿ: ಸಲಾರ್ ಚಿತ್ರಕ್ಕೆ ಪ್ರಭಾಸ್ ಆಯ್ಕೆ- ಸಿನಿಪ್ರಿಯರ ಕೆಂಗಣ್ಣು; ಕೆಜೆಎಫ್-2ಗೆ ಬೀಳಲಿದೆಯಾ ಹೊಡೆತ?

ತೆರೆಗೆ ಬರಲು ಕನ್ನಡದ ದೊಡ್ಡ ನಟರ ಚಿತ್ರಗಳು ರೆಡಿ ಇದ್ದರೂ ನಿರ್ಮಾಪಕರು ಮಾತ್ರ ಧೈರ್ಯ ಮಾಡುತ್ತಿಲ್ಲ. ದರ್ಶನ್​ ಅವರ ರಾಬರ್ಟ್​ ಸಹ ತೆರೆಗೆ ಬರಲು ಸಜ್ಜಾಗಿದೆ. ಆದರೂ ಚಿತ್ರತಂಡ ಇನ್ನು ರಿಲೀಸ್​ ಮಾಡುವ ಮನಸ್ಸು ಮಾಡಿಲ್ಲ. ಅಭಿಮಾನಿಗಳು ಮಾತ್ರ ಸಿನಿಮಾ ರಿಲೀಸ್​ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ.
Published by:Anitha E
First published: