ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ಟ್ರೇಲರ್ ರಿಲೀಸ್ ಆದಾಗಿನಿಂದ ಸಿನಿಪ್ರಿಯರಲ್ಲಿ ಸಿನಿಮಾ ನೋಡುವ ಕುತೂಹಲ ಹೆಚ್ಚಾಗಿದೆ. ಈ ಹಿಂದೆಯೇ ಚಿತ್ರದ ಹಾಡುಗಳು ಹಾಗೂ ಟೀಸರ್ ರಿಲೀಸ್ ಆಗಿದ್ದಾಗ ಚಿತ್ರದ ಬಗ್ಗೆ ದರ್ಶನ್ ಅಭಿಮಾನಿಗಳಲ್ಲಿ ಇದ್ದ ನಿರೀಕ್ಷೆ ಈಗ ದುಪಟ್ಟಾಗಿದೆ. ಇನ್ನು ಮಾಚ್ 11ರಂದು ತೆಲುಗು ಹಾಗೂ ಕನ್ನಡದಲ್ಲಿ ಸಿನಿಮಾ ರಿಲೀಸ್ ಆಗಲಿದ್ದು, ಟಾಲಿವುಡ್ ಪ್ರೇಕ್ಷಕರಲ್ಲೂ ಸಹ ರಾಬರ್ಟ್ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಅದರಲ್ಲೂ ಈ ಸಲ ಸಿನಿಮಾದಲ್ಲಿ ತೆಲುಗು ಹಾಗೂ ಕನ್ನಡದ ಪ್ರೇಕ್ಷಕರಿಗೆ ಮುಖ ಪರಿಚಯವಿರುವ ತಾರಾ ಬಳಗವನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಕುರುಕ್ಷೇತ್ರ ಸಿನಿಮಾದಿಂದಾಗಿ ದರ್ಶನ್ ಅವರ ಪರಿಚಯ ಈಗಾಗಲೇ ತೆಲುಗು ಸಿನಿಪ್ರಿಯರಿಗೆ ಆಗಿದೆ. ಹೀಗಾಗಿಯೇ ರಾಬರ್ಟ್ ಸಿನಿಮಾದ ಬಗೆಗಿನ ಕುತೂಹಲವನ್ನು ಹೆಚ್ಚಿಸುವ ಸಲುವಾಗಿ ಚಿತ್ರತಂಡ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಅದರ ಭಾಗವಾಗಿಯೇ ಇತ್ತೀಚೆಗಷ್ಟೆ ಚಿತ್ರದಿಂದ ಲವ್ ಸಾಂಗ್ ಒಂದನ್ನು ರಿಲೀಸ್ ಮಾಡಿದೆ.
ತರುಣ್ ಸುಧೀರ್ ನಿರ್ದೇಶನದ ಹಾಗೂ ಉಮಾಪತಿ ಹಣ ಹೂಡಿರುವ ಸಿನಿಮಾ ರಾಬರ್ಟ್. ಈ ಸಿನಿಮಾದ ಪ್ರಿ-ರಿಲೀಸ್ ಕಾರ್ಯಕ್ರಮ ಉತ್ತರ ಕರ್ನಾಟಕದಲ್ಲಿ ನಡೆಯಲಿದೆ. ಹೌದು, ಹುಬ್ಬಳ್ಳಿಯಲ್ಲಿ ಈ ಇವೆಂಟ್ ನಡೆಸಲು ಚಿತ್ರತಂಡ ತಯಾರಿ ನಡೆಸಿದೆಯಂತೆ.
ಫದೆ. 28ರಂದು ಹುಬ್ಬಳ್ಳಿಯಲ್ಲಿ ರಾಬರ್ಟ್ ಚಿತ್ರದ ಪ್ರಿ- ರಿಲೀಸ್ ಕಾರ್ಯಕ್ರಮ ನಡೆಯಲಿದೆಯಂತೆ. ಉತ್ತರ ಕರ್ನಾಟಕದ ಪ್ರೇಕ್ಷಕರನ್ನು ಸೆಳೆಯುವ ಸಲುವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎನ್ನಲಾಗುತ್ತಿದೆ. ಈ ಹಿಂದೆ ಇದನ್ನು ಗುಲ್ಬರ್ಗದಲ್ಲಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಕರೋನಾ ಕಾರಣದಿಂದಾಗಿ ಆಗ ಅದನ್ನು ಅಲ್ಲಿಗೆ ಕೈಬಿಡಲಾಯಿತು. ಈಗ ಮತ್ತೆ ಇದೇ ಇವೆಂಟ್ಗಾಗಿ ಹುಬ್ಬಳ್ಳಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ: Kareena Kapoor: ಕರೀನಾ-ಸೈಫ್ ದಂಪತಿಗೆ ಗಂಡು ಮಗು: ಫೋಟೋ ಹಂಚಿಕೊಂಡ ಕರಿಷ್ಮಾ ಕಪೂರ್..!
ದರ್ಶನ್ ಹುಟ್ಟುಹಬ್ಬದ ದಿನ ರಿಲೀಸ್ ಆದ ಸಿನಿಮಾದ ಟ್ರೇಲರ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಲಕ್ಷಗಟ್ಟಲೆ ವೀಕ್ಷಣೆ ಪಡೆದುಕೊಂಡಿರುವ ರಾಬರ್ಟ್ ಟ್ರೇಲರ್ ಸಿನಿಮಾ ಬಗೆಗಿನ ಕುತೂಹಲವನ್ನು ಮತ್ತಷ್ಟು ಹೆಚ್ಚು ಮಾಡಿದೆ.
ಇನ್ನು ಶನಿವಾರವಷ್ಟೆ ಈ ಸಿನಿಮಾದ ಕಣ್ಣು ಹೊಡಿಯಾಕ ಅನ್ನೋ ಲವ್ ಸಾಂಗ್ ಸಹ ರಿಲೀಸ್ ಆಗಿದೆ. ಈ ಹಾಡು ಈಗಾಗಲೇ ರಾಬರ್ಟ್ ಅಭಿಮಾನಿಗಳ ಮನ ಗೆದಿದ್ದೆ. ತೆಲುಗು ಹಾಗೂ ಕನ್ನಡದಲ್ಲಿ ಈ ಹಾಡು ರಿಲೀಸ್ ಆಗಿದೆ.
ಈ ಸಿನಿಮಾದಲ್ಲಿ ಆಶಾ ಭಟ್ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಆಶಾ ಭಟ್ ಸಾಂಪ್ರದಾಯಿಕ ಹಾಗೂ ಸ್ಟೈಲಿಶ್ ಲುಕ್ನಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಮೊದಲ ಸಲ ಆಶಾ ಭಟ್ ನಾಯಕಿಯಾಗಿ ಕನ್ನಡದ ಸಿನಿಪ್ರಿಯರ ಎದುರು ಬರಲಿದ್ದಾರೆ.
ಇದನ್ನೂ ಓದಿ: Parineeti Chopra: ಹೊಸ ಸಿನಿಮಾದ ಪ್ರಚಾರಕ್ಕಾಗಿ ವಿಭಿನ್ನ ಮಾರ್ಗ ಆಯ್ಕೆ ಮಾಡಿಕೊಂಡ ನಟಿ ಪರಿಣೀತಿ ಚೋಪ್ರಾ..!
ಈ ಚಿತ್ರದಲ್ಲಿ ಟಾಲಿವುಡ್ನ ಖ್ಯಾತ ನಟ ಜಗಪತಿ ಬಾಬು ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ರವಿಶಂಕರ್ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಒಟ್ಟಾರೆ ಕೊರೋನಾ ಲಾಕ್ಡೌನ್ ನಂತರ ಬೆಳ್ಳಿತೆರೆಯಲ್ಲಿ ದರ್ಶನ್ ಅವರನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ