HOME » NEWS » Entertainment » DARSHAN STARRER ROBERRT MOVIE TEAM IS RELEASING DOTA KANO LYRICAL VIDEO TOMORROW AE

Roberrt: ಸ್ನೇಹಕ್ಕೆ ಜೀವ ಕೊಡುವ ದೋಸ್ತ ಈ ದಾಸ ದರ್ಶನ್​: ನಾಳೆ ರಾಬರ್ಟ್​ ಚಿತ್ರ ಮೂರನೇ ಲಿರಿಕಲ್​ ವಿಡಿಯೋ ಬಿಡುಗಡೆ..!

Dosta Kano: ತರುಣ್​ ಸುಧೀರ್​ ನಿರ್ದೇಶನದ ರಾಬರ್ಟ್​ ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ಕೊರೋನಾ ಭೀತಿಯಿಂದಾಗಿ ಮುಂದಕ್ಕೆ ಹೋಗಿದ್ದು ಗೊತ್ತೇ ಇದೆ. ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಹೀಗಿರುವಾಗಲೇ ಅಭಿಮಾನಿಗಳಿಗೆ ರಾಬರ್ಟ್​ ತಂಡ ಸಿಹಿ ಸುದ್ದಿಯನ್ನು ನೀಡಿದೆ.

Anitha E | news18-kannada
Updated:March 20, 2020, 11:24 AM IST
Roberrt: ಸ್ನೇಹಕ್ಕೆ ಜೀವ ಕೊಡುವ ದೋಸ್ತ ಈ ದಾಸ ದರ್ಶನ್​: ನಾಳೆ ರಾಬರ್ಟ್​ ಚಿತ್ರ ಮೂರನೇ ಲಿರಿಕಲ್​ ವಿಡಿಯೋ ಬಿಡುಗಡೆ..!
ರಾಬರ್ಟ್ ಸಿನಿಮಾದ ದೋಸ್ತ ಹಾಡಿನ ಪೋಸ್ಟರ್​
  • Share this:
ಯಜಮಾನ ಸಿನಿಮಾದ ನಂತರ ದರ್ಶನ್​ ನಟಿಸುತ್ತಿರುವ ಚಿತ್ರ 'ರಾಬರ್ಟ್​'. ದರ್ಶನ್​ ನಟಿಸಿದ್ದಾರೆ ಅನ್ನೋ ಕಾರಣಕ್ಕೆ ಈ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ಬೆಟ್ಟದಷ್ಟು ನಿರೀಕ್ಷೆ ಇದೆ.

ತರುಣ್​ ಸುಧೀರ್​ ನಿರ್ದೇಶನದ 'ರಾಬರ್ಟ್​' ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ಕೊರೋನಾ ಭೀತಿಯಿಂದಾಗಿ ಮುಂದಕ್ಕೆ ಹೋಗಿದ್ದು ಗೊತ್ತೇ ಇದೆ. ಈ ಸಿನಿಮಾದ ಚಿತ್ರೀಕರಣ ಈಗಾಗಲೇ ಮುಗಿದಿದ್ದು, ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಹೀಗಿರುವಾಗಲೇ ಅಭಿಮಾನಿಗಳಿಗೆ 'ರಾಬರ್ಟ್'​ ತಂಡ ಸಿಹಿ ಸುದ್ದಿ ನೀಡಿದೆ.

'ರಾಬರ್ಟ್​' ಚಿತ್ರದಲ್ಲಿ ದರ್ಶನ್​ ಹಾಗೂ ವಿನೋದ್​ ಪ್ರಭಾಕರ್​


ನಾಳೆ ಬೆಳಿಗ್ಗೆ 11.04ಕ್ಕೆ 'ರಾಬರ್ಟ್'​ ಚಿತ್ರದ ಮೂರನೇ ಲಿರಿಕಲ್​ ವಿಡಿಯೋ 'ದೋಸ್ತ ಕಣೋ' ಹಾಡನ್ನು ಬಿಡುಗಡೆ ಮಾಡಲಿದ್ದಾರೆ.


ಅರ್ಜುನ್​ ಜನ್ಯ ಸಂಗೀತ ನೀಡಿರುವ ಈ ಚಿತ್ರದಿಂದ ಎರಡು ಹಾಡುಗಳು ಬಿಡುಗಡೆಯಾಗಿದ್ದು ಹಿಟ್ ಆಗಿವೆ. ಬಾಬಾ ಬಾ ನಾನ್​ ರೆಡಿ ಹಾಗೂ ಜೈ ಶ್ರೀರಾಮ್​ ಹಾಡುಗಳು ಕೇಳುಗರ ನಾಲಿಗೆ ಮೇಲೆ ನಲಿಯುತ್ತಿವೆ.

ಇದನ್ನೂ ಓದಿ: ಕೊರೋನಾ ಎಫೆಕ್ಟ್​ ವರ್ಕ್ ​ಫ್ರಂ ಹೋಂ ಮಾಡುತ್ತಿರುವ ರಿಷಭ್​ ಶೆಟ್ಟಿ: ಫೋಟೋ ವೈರಲ್​..!

ಬೇಸಿಗೆಯಲ್ಲಿ ಗೆಳೆತನವನ್ನು ಸಂಭ್ರಮಿಸುವ ಸಲುವಾಗಿ ಈ ಹಾಡನ್ನು ಬಿಡುಗಡೆ ಮಾಡುತ್ತಿರುವುದಾಗಿ ನಿರ್ದೇಶಕ ತರುಣ್​ ಸುಧೀರ್​ ಟ್ವೀಟ್​ ಮಾಡಿದ್ದಾರೆ. ಅಲ್ಲದೆ ಈ ಸಿನಿಮಾದಲ್ಲಿ ದರ್ಶನ್​ ಅವರ ಜಿಗರಿ ದೋಸ್ತ ವಿನೋದ್​ ಪ್ರಭಾಕರ್​ ಸಹ ನಟಿಸಿದ್ದಾರೆ. ಇದು ಈ ಇಬ್ಬರ ಗೆಳೆಯರ ಸ್ನೇಹದ ಹಾಡಾಗಿರಬಹುದು ಎಂದು ಊಹಿಸಲಾಗುತ್ತಿದೆ.



ಸದ್ಯಕ್ಕೆ ಕೊರೋನಾ ಭೀತಿಯಿಂದಾಗಿ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನು ರದ್ದು ಮಾಡಲಾಗಿದೆ. ಆದರೆ ಪರಿಸ್ಥಿತಿ ನಿಯಂತ್ರಣದಲ್ಲಿದ್ದರೆ ಸಿನಿಮಾ ಏಪ್ರಿಲ್​ನಲ್ಲೇ ತೆರೆ ಕಾಣುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

Corona Kiss: ಬಾಯ್​ಫ್ರೆಂಡ್​ ಜೊತೆ ಕೊರೋನಾ ಕಿಸ್​ ಮಾಡಿದ ಬಿ-ಟೌನ್​ ನಟಿ: ಚಿತ್ರಕ್ಕೆ ಶೀರ್ಷಿಕೆ ಕೊಡಿ ಎಂದ ಬಿಕಿನಿ ಸುಂದರಿ..!

First published: March 20, 2020, 11:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories